ಬಾಲಕನಿಗೆ ರಕ್ತ ಸುರಿಯುವಂತೆ ಥಳಿಸಿದ್ದಲ್ಲದೇ ಬೆದರಿಕೆಯನ್ನೂ ಒಡ್ಡಿದ್ದ ಶಿಕ್ಷಕರು ಇದೀಗ ಜೈಲು ಪಾಲಾಗಿದ್ದಾರೆ.
ಬೆಂಗಳೂರು [ಡಿ.21]: ಕ್ಷುಲ್ಲಕ ಕಾರಣಕ್ಕೆ ಶಿಕ್ಷಕಿಯೊಬ್ಬರು ಬಾಲಕನಿಗೆ ರಕ್ತ ಬರುವಂತೆ ಥಳಿಸಿದ್ದಲ್ಲದೆ, ಈ ಬಗ್ಗೆ ದೂರು ನೀಡಿದರೆ ನಿನ್ನ ಭವಿಷ್ಯ ಹಾಳು ಮಾಡುವುದಾಗಿ ಬಾಲಕನ ಸಹೋದರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಖಾಸಗಿ ಶಾಲೆಯ ಮೂವರು ಶಿಕ್ಷಕರು ಜೈಲು ಪಾಲಾಗಿದ್ದಾರೆ.
ಕೋರಮಂಗಲದಲ್ಲಿರುವ ಪ್ರತಿಷ್ಠಿತ ಶಾಲೆಯ ಶಿಕ್ಷಕಿ ಆಂಧ್ರಪ್ರದೇಶದ ರೇಷ್ಮಾ (ಹಲ್ಲೆ ನಡೆಸಿದವರು), ಶಿಕ್ಷಕ ಮ್ಯಾಥ್ಯೂ ಹಾಗೂ ಪ್ರಾಂಶುಪಾಲ ಶಾಜಿ ಸೆಬಾಸ್ಟಿಯನ್ ಬಂಧಿತರು. ಸಂತ್ರಸ್ತ ಮಕ್ಕಳ ಪೋಷಕರು ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಹಲ್ಲೆ, ಪೋಕ್ಸೋ ಹಾಗೂ ಬೆದರಿಕೆ ಪ್ರಕರಣದಡಿ ದೂರು ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಕೋರಮಂಗಲ ಠಾಣೆ ಪೊಲೀಸರು ತಿಳಿಸಿದ್ದಾರೆ.
undefined
ಆಟವಾಡುವಾಗ ಬಿದ್ದ!:
13 ವರ್ಷದ ಬಾಲಕ ಖಾಸಗಿ ಶಾಲೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದು, (ಡಿ.16) ಶಾಲಾ ವಾರ್ಷಿಕೋತ್ಸವದ ನಿಮಿತ್ತ ಆತನ ಸಹಪಾಠಿಗಳು ಜೋರಾಗಿ ಸೌಂಡ್ ಇಟ್ಟು ಮ್ಯೂಸಿಕ್ ಹಾಕಿಕೊಂಡು ನೃತ್ಯ ಅಭ್ಯಾಸ ಮಾಡುತ್ತಿದ್ದರು. ಈ ವೇಳೆ ಗಣಿತ ಶಿಕ್ಷಕಿ ರೇಷ್ಮಾ ಬಳಿ ತೆರಳಿದ ಬಾಲಕ ಜೋರಾಗಿ ಸೌಂಡ್ ಇಟ್ಟಿದ್ದಾರೆ. ತರಗತಿಯ ಕಿಟಕಿ ಹಾಕಬಹುದೇ ಎಂದು ಶಿಕ್ಷಕಿಯನ್ನು ಕೇಳಿದ್ದ. ಇಷ್ಟಕ್ಕೆ ಕೋಪಗೊಂಡ ಶಿಕ್ಷಕಿ ಪದೇ-ಪದೆ ತೊಂದರೆ ಕೊಡುತ್ತೀಯಾ ಎಂದು ಕೋಲಿನಿಂದ ಬಾಲಕನಿಗೆ ಒಡೆದು, ಡಸ್ಟರ್‌ನನ್ನು ಆತನತ್ತ ತೂರಿದ್ದರು. ಡಸ್ಟರ್ ಬಾಲಕನ ಹಣೆಗೆ ತಾಗಿ ರಕ್ತಸ್ರಾವವಾಗಿತ್ತು. ನಂತರ ಶಾಲಾ ಸಿಬ್ಬಂದಿ ಬಾಲಕನ ತಾಯಿಗೆ ಕರೆ ಮಾಡಿ, ನಿಮ್ಮ ಪುತ್ರ ಆಟವಾಡುವಾಗ ಬಿದ್ದು, ಗಾಯ ಮಾಡಿಕೊಂಡಿದ್ದಾನೆ. ಶಾಲೆಗೆ ಬಂದು ಆತನನ್ನು ಕರೆದೊಯ್ಯುವಂತೆ ಹೇಳಿದ್ದರು.
ಪತ್ನಿ ಎದುರೇ ಶವವಾದ ಬಡ ಕೂಲಿ ಜಲೀಲ್!...
ಪ್ರಾಂಶುಪಾಲ ಶಾಜಿ ಸೆಬಾಸ್ಟಿಯನ್ ಕೊಠಡಿಯಲ್ಲಿದ್ದ ಪುತ್ರನ ಹಣೆಯಲ್ಲಿ ರಕ್ತ ಬರುವುದನ್ನು ಕಂಡು ಬಾಲಕನ ತಾಯಿ ಆತಂಕಗೊಂಡಿದ್ದರು. ಈ ವೇಳೆ ಪ್ರಾಂಶುಪಾಲರು ಕೆಳಗೆ ಬಿದ್ದು, ಈ ರೀತಿ ಮಾಡಿಕೊಂಡಿದ್ದಾನೆ ಎಂದು ಬಾಲಕನ ತಾಯಿ ಬಳಿ ಸುಳ್ಳು ಹೇಳಿದ್ದರು. ತಾಯಿ, ಮಗನನ್ನು ಕರೆದು ವಿಚಾರಣೆ ನಡೆಸಿದಾಗ ಶಿಕ್ಷಕಿ ಹಲ್ಲೆ ನಡೆಸಿದ ವಿಚಾರ ಬಾಯ್ಬಿಟ್ಟಿದ್ದ.
ಸುಳ್ಳು ಹೇಳಿದ ಬಗ್ಗೆ ಬಾಲಕನ ತಾಯಿ ಪ್ರಾಂಶುಪಾಲರನ್ನು ಪ್ರಶ್ನೆ ಮಾಡಿದ್ದಕ್ಕೆ ಆತಂಕಗೊಳ್ಳುತ್ತೀರಾ ಎಂದು ಬಿದ್ದು ಗಾಯಗೊಂಡಿದ್ದಾನೆ ಎಂದು ಹೇಳಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡದಂತೆ ಮನವಿ ಮಾಡಿದ್ದರು.
ಮನೆಗೆ ಧಾವಿಸಿದ್ರು:
ಘಟನೆಯ ಮರು ದಿನ ಬಳಿಕ ಬಾಲಕನ ಮನೆಗೆ ಬಂದ ಪ್ರಾಂಶುಪಾಲ ಮ್ಯಾಥ್ಯೂ ಪೊಲೀಸ್ ಸೇರಿದಂತೆ ಯಾರೊಬ್ಬರಿಗೂ ವಿಷಯ ತಿಳಿಸಬೇಡಿ. ನೀವು ಪಾವತಿಸಿರುವ ಮಕ್ಕಳ ಶುಲ್ಕವನ್ನು ವಾಪಸ್ ನೀಡುವುದಾಗಿ ಮನವಿ ಮಾಡಿದ್ದರು. ಇದಕ್ಕೆ ಬಾಲಕನ ಪೋಷಕರು ಒಪ್ಪದಿದ್ದಾಗ ಪ್ರಾಂಶುಪಾಲ ಅಲ್ಲಿಂದ ತೆರಳಿದ್ದರು ಎಂದು ಪೊಲೀಸರು ತಿಳಿಸಿದರು.
ಬಾಲಕನ ಅಕ್ಕನಿಗೆ ಬೆದರಿಕೆ
ಬಾಲಕ ವ್ಯಾಸಂಗ ಮಾಡುತ್ತಿರುವ ಶಾಲೆಯಲ್ಲಿ ಆತನ ಅಕ್ಕ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಘಟನೆ ನಡೆದ ಮರುದಿನ ಎಂದಿನಂತೆ ಬಾಲಕನ ಅಕ್ಕ ಶಾಲೆಗೆ ತೆರಳಿದ್ದಳು. ಶಿಕ್ಷಕ ಮ್ಯಾಥ್ಯೂ ಬಾಲಕಿಗೆ ನಿನ್ನ ತಮ್ಮನ ಮೇಲೆ ಹಲ್ಲೆ ನಡೆಸಿರುವ ವಿಚಾರವನ್ನು ಪೊಲೀಸ್ ಠಾಣೆಗಾಗಲೀ ಅಥವಾ ಮಕ್ಕಳ ಸಹಾಯವಾಣಿ ಅವರಿಗಾಗಲೀ ದೂರು ನೀಡಿದರೆ, ನಿನ್ನ ಭವಿಷ್ಯ ಹಾಳು ಮಾಡುತ್ತೇನೆ. ನನ್ನ ಅಣ್ಣನೇ ಶಾಲೆಯ ಪ್ರಾಂಶುಪಾಲನಾಗಿದ್ದು, ನಿನ್ನನ್ನು ಡಿಬಾರ್ ಮಾಡಿಸುತ್ತೇನೆ ಎಂದು ಬೆದರಿಕೆವೊಡ್ಡಿದ್ದ. ಇದರಿಂದ ಆತಂಕಗೊಂಡ ಬಾಲಕಿ ಈ ವಿಷಯವನ್ನು ತನ್ನ ಅಜ್ಜಿಗೆ ಹೇಳಿದ್ದಳು ಎಂದು ವಿವರಿಸಿದರು.
ಇದೇ ರೀತಿ ಶಿಕ್ಷಕಿ ಹಲವು ಬಾರಿ ಪುತ್ರನ ಹಲ್ಲೆ ನಡೆಸಿದ್ದರು. ಈ ಸಂಬಂಧ ಶಿಕ್ಷಕಿಯ ವರ್ತನೆ ಬಗ್ಗೆ ಪ್ರಾಂಶುಪಾಲರ ಗಮನಕ್ಕೆ ತಂದಿದ್ದೆ. ಇದೀಗ ಪುತ್ರನ ಹಣೆಯಲ್ಲಿ ತೀವ್ರವಾಗಿ ರಕ್ತಬರುವುವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ್ದಲ್ಲದೆ, ಪುತ್ರಿಗೆ ಬೆದರಿಕೆವೊಡ್ಡಿರುವುದನ್ನು ನೋಡಿದರೆ ನಮಗೆ ಆತಂಕವಾಗಿದೆ.
-ಬಾಲಕನ ತಾಯಿ