ಹೋಟೆಲ್‌ನಲ್ಲಿ ಲಿಫ್ಟ್‌ ಕಟ್: 9 ಜನಕ್ಕೆ ಗಂಭೀರ ಗಾಯ

Suvarna News   | Asianet News
Published : Mar 09, 2020, 11:42 AM ISTUpdated : Mar 09, 2020, 03:11 PM IST
ಹೋಟೆಲ್‌ನಲ್ಲಿ ಲಿಫ್ಟ್‌ ಕಟ್: 9 ಜನಕ್ಕೆ ಗಂಭೀರ ಗಾಯ

ಸಾರಾಂಶ

ಹೋಟೆಲ್‌ನ ಲಿಫ್ಟ್‌ ತುಂಡಾಗಿ 9 ಜನ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ದ್ವಾರ ವಾಟಾ ಹೊಟೆಲ್ ನ ಲಿಪ್ಟ ಕಟ್ ಆಗಿ ನಡೆದ ಘಟನೆ ನಡೆದಿದೆ.  

ಧಾರವಾಡ (ಮಾ.09): ಹೋಟೆಲ್‌ನ ಲಿಫ್ಟ್‌ ತುಂಡಾಗಿ 9 ಜನ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ದ್ವಾರ ವಾಟಾ ಹೊಟೆಲ್ ನ ಲಿಪ್ಟ ಕಟ್ ಆಗಿ ನಡೆದ ಘಟನೆ ನಡೆದಿದೆ.

"

ಹೋಟೆಲ್‌ನ ಲಿಫ್ಟ್ ಕಟ್ ಆಗಿ ಕೆಳಗೆ ಬಿದ್ದು ಒಂಬತ್ತು ಜನ ಹೊಟೆಲ್ ಗ್ರಾಹಕರಿಗೆ ಗಂಭೀರ ಗಾಯವಾಗಿದೆ. ಧಾರವಾಡದ ಕೃಷಿ ವಿವಿಯ ಎದುರಿಗೆ ಇರುವ ದ್ವಾರವಾಟಾ ಹೋಟೆಲ್‌ನ ಲಿಫ್ಟ್‌ ಕಟ್ ಆಗಿ ಅವಘಡ ಸಂಭವಿಸಿದೆ.

ಮಕ್ಕಳಂತೆ ಸಾಕಿದ್ದ ಮರಗಳ ಮಾರಣ ಹೋಮ..! ಮುಗಿಲು ಮುಟ್ಟಿತು ರೈತ ಮಹಿಳೆಯ ಆಕ್ರಂದನ

ನಿಗದಿತ ಭಾರಕ್ಕಿಂತ ಹೆಚ್ಚಿನ ಜನರು ಲಿಫ್ಟ್‌ನಲ್ಲಿ ಹತ್ತಿದ ಕಾರಣ ಲಿಫ್ಟ್ ಕಟ್ ಆಗಿದೆ. ನಿನ್ನೆ ತಡರಾತ್ರಿ ಹೋಟೆಲ್‌ಗೆ ಆಗಮಿಸಿದ್ದ ವೇಳೆ ಘಟನೆ ನಡೆದಿದೆ. ಬೇಲೂರಿನ ಸ್ಟಾರ್ ಕಂಪನಿಯ ಉದ್ಯೋಗಿಗಳು ರಾತ್ರಿ ಊಟಕ್ಕೆ ಬಂದಿದ್ದರು.

ಹಾಲುಣಿಸುವಾಗಲೇ ಹಸುಗೂಸಿನ ಜೊತೆ ತಾಯಿ ಸಾವು!

ಗಾಯಾಳುಗಳನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 5  ಜನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಇನ್ನುಳಿದ ನಾಲ್ವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸ್ಟಾರ್ ಕಂಪನಿಯ ಉದ್ಯೋಗಿಗಳಾದ ಆನಂದ್ ಪವಾರ್ (32) ಅನೀಲ್ ರಾಮಸಿಂಗ್ (34) ಕೆಂಪಯ್ಯ ಪುರಾಣಿಕ್ (34) ಆಂಟೋನಿ (44) ಬಸೀರ್ ಅಹ್ಮದ್ (22) ಸೇರಿ ಒಂಬತ್ತು ಜನ ಗಾಯಾಳುಗಳು.ಧಾರವಾಡ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

PREV
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ