ಮೋದಿ ಹೆಲಿಕಾಪ್ಟರ್‌ ಟ್ರಯಲ್‌ ವೇಳೆ ಅನಾಹುತ: ಗಾಯಗೊಂಡು ಆಸ್ಪತ್ರೆ ಸೇರಿದ ಡಿವೈಎಸ್‌ಪಿ

By Sathish Kumar KH  |  First Published May 3, 2023, 4:43 PM IST

ಮೇ 5ರಂದು ತುಮಕೂರು ನಗರಕ್ಕೆ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ ರಿಹರ್ಸಲ್‌ ವೇಳೆ ಡಿವೈಎಸ್‌ಪಿ ಶ್ರೀನಿವಾಸ್‌ ತಲೆಗೆ ಗೇಟ್‌ ಬಡಿದು ಗಾಯವಾಗಿದೆ. 


ತುಮಕೂರು (ಮೇ 3): ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ 5 ರಂದು ತುಮಕೂರು ನಗರಕ್ಕೆ ಚುನಾವಣಾ ಪ್ರಚಾರ ಕಾರ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ಗೆ ರಿಹರ್ಸಲ್‌ ಮಾಡುತ್ತಿದ್ದಾಗ ತುಮಕೂರಿನ ಡಿವೈಎಸ್‌ಪಿ ತಲೆಗೆ ಗಾಯವಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ರಿಹರ್ಸಲ್ ವೇಳೆ ಅನಾಹುತ ಸಂಭವಿಸಿದೆ. ಈ ವೇಳೆ ನಡೆದ ಅನಾಹುತದಿಂದ ತುಮಕೂರು ‌ನಗರ ಡಿವೈಎಸ್‌ಪಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಮೇ 5ಕ್ಕೆ ತುಮಕೂರಿಗೆ ಮೋದಿ ಆಗಮಿಸಲಿದ್ದಾರೆ. ಆದ್ದರಿಂದ ಎರಡು ದಿನಗಳ ಮುಂಚಿತವಾಗಿ ಎಸ್‌ಪಿಜಿ ತಂಡದೊಂದಿಗೆ ಹೆಲಿಕಾಪ್ಟರ್ ರೀಹಸರ್ಲ್ ನಡೆಸುತ್ತಿದ್ದರು. ಈ ವೇಳೆ ತುಮಕೂರು ನಗರ ಡಿವೈಎಸ್ ಪಿ ಶ್ರೀನಿವಾಸ್ ಕಾನ್ ವೇ ರಿಹಸರ್ಲ್ ಪರಿಶೀಲನೆ ನಡೆಸುತ್ತಿದ್ದರು. ಹೆಲಿಕಾಪ್ಟರ್ ಗಾಳಿಯ ರಭಸಕ್ಕೆ ತುಮಕೂರು ವಿಶ್ವವಿದ್ಯಾಲಯದ ಗೇಟ್ ಬೀಸಿ, ಪಕ್ಕದಲ್ಲಿಯೇ ನಿಂತುಕೊಂಡಿದ್ದ ಡಿವೈಎಸ್‌ಪಿ ಶ್ರೀನಿವಾಸ್‌ ತಲೆಗೆ ಬಡಿದಿದೆ. ಇದರಿಂದ ತೀವ್ರ ಗಾಯಗೊಂಡ ಡಿವೈಎಸ್‌ಪಿ ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Tap to resize

Latest Videos

ಮೇ 10 ರಂದು ನಂದಿ ಗಿರಿಧಾಮಕ್ಕೆ ಪ್ರವೇಶ ನಿಷೇಧ

ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ: ತುಮಕೂರು ಯುನಿವರ್ಸಿಟಿ ಹೆಲಿಪ್ಯಾಡ್ ಬಳಿ ಘಟನೆ ನಡೆದಿದೆ. ಹೆಲಿಕಾಪ್ಟರ್ ಲ್ಯಾಂಡಿಂಗ್ ನಿಂದ 100 ಮೀಟರ್ ದೂರದಲ್ಲಿ ಡಿವೈಎಸ್ ಪಿ ಶ್ರೀನಿವಾಸ್ ನಿಂತಿದ್ದರು. ಹೆಲಿಕ್ಯಾಪ್ಟರ್ ಲ್ಯಾಂಡಿಂಗ್ ವೇಳೆ‌ ಬಿಸಿದ ಗಾಳಿ ರಭಸಕ್ಕೆ ಯುನಿವರ್ಸಿಟಿ ಗೇಟ್ ಅಲುಗಾಡಿ ಪಕ್ಕದಲ್ಲಿಯೇ ಇದ್ದ ಶ್ರೀನಿವಾಸ್‌ ತಲೆಗೆ ಬಡಿದಿದೆ. ಇದರಿಂದ ಗಾಯಗೊಂಡಿದ್ದ ಶ್ರೀನಿವಾಸ್ ಅವರನ್ನ ಕೂಡಲೇ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಪ್ರಾಣಪಾಯ ಇಲ್ಲವೆಂದು ವೈದ್ಯರು ತಿಳಿಸಿದ್ದು, ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ  ಡಿವೈಎಸ್‌ಪಿ ಶ್ರೀನಿವಾಸ್ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಸಿಂಧನೂರಿನ ಭತ್ತದ ಗದ್ದೆಯಲ್ಲಿ ಸಿಲುಕಿದ ಹೆಲಿಕಾಪ್ಟರ್:  ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರಿಗೆ ಪ್ರಚಾರ ಕಾರ್ಯಕ್ರನಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭದ್ರತಾ ಸಿಬ್ಬಂದಿಯ ಸೇನಾ ಪಡೆಯ ಹೆಲಿಕಾಪ್ಟರ್‌ ಭತ್ತದ ಗದ್ದೆಯಲ್ಲಿ ಮಾಡಲಾಗಿದ್ದ ಹೆಲಿಪ್ಯಾಡ್‌ನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಕರ್ನಾಟಕದ ಭತ್ತದ ಕಣಜ ಎಂದು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಚಾರಕ್ಕೆ ಬೃಹತ್‌ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು.

ಈ ವೇಳೆ ಕಾರ್ಯಕ್ರಮಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸುತ್ತಿದ್ದ ನರೇಂದ್ರ ಮೋದಿ ಅವರಿಗೆ ಹೆಲಿಪ್ಯಾಡ್‌ ಸಿದ್ಧಪಡಿಸಲಾಗಿತ್ತು. ಆದರೆ, ಅವರ ಭದ್ರತಾ ಸಿಬ್ಬಂದಿಗೂ ಹೆಲಿಪ್ಯಾಡ್‌ ನಿರ್ಮಾಣ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರಿಂದ ತರಾತುರಿಯಲ್ಲಿ ಭತ್ತದ ಗದ್ದೆಯಲ್ಲಿ ಮಣ್ಣನ್ನು ಹಾಕಿ ಹೆಲಿಪ್ಯಾಡ್‌ ನಿರ್ಮಿಸಲಾಗಿತ್ತು. ಭಾರತೀಯ ಭದ್ರತಾ ಪಡೆಯ ಹೆಲಿಕಾಪ್ಟರ್‌ ಲ್ಯಾಂಡ್‌ ಆದ ತಕ್ಷಣ ಗದ್ದೆಯಲ್ಲಿ ಸಿಕ್ಕಿಕೊಂಡಿದೆ. ಸುಮಾರು 3 ಗಂಟೆಗಳಿಂದ ಹೆಲಿಕಾಪ್ಟರ್‌ ತೆರವು ಕಾರ್ಯಾಚರಣೆ ಮಾಡಲಾಗುತ್ತಿದ್ದರೂ ಸಫಲವಾಗಿಲ್ಲ.

ಭತ್ತದ ಗದ್ದೆಯಲ್ಲಿ ಸಿಲುಕಿದ ಪ್ರಧಾನಿ ಮೋದಿ ಭದ್ರತಾ ಪಡೆಯ ಹೆಲಿಕಾಪ್ಟರ್: ಮೇಲೆತ್ತಲು ಪರದಾಟ!

ನೆಲದಿಂದ ಮೇಲಕ್ಕೇಳದ ಹೆಲಿಕ್ಯಾಪ್ಟರ್: ಇನ್ನು ಸೇನೆಯ ಹೆಲಿಕಾಪ್ಟರ್‌ ಮೇಲಕ್ಕೆತ್ತಲು ಹೆಲಿಪ್ಯಾಡ್‌ ಬಳಿಗೆ ಜೆಸಿಬಿಯನ್ನು ತೆಗೆದುಕೊಂಡು ಹೋಗಲಾಗಿತ್ತು. ಜೆಸಿಬಿಯಿಂದ ಮೇಲೆತ್ತಲು ಕಾರ್ಯಾಚರಣೆ ಮಾಡಿದರೂ ಯಾವುದೇ ಸಫಲತೆ ಕಂಡುಬಂದಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಬದಲಿ ಹೆಲಿಕಾಪ್ಟರ್‌ನಲ್ಲಿ ಬೇರೊಂದು ಸ್ಥಳಕ್ಕೆ ತೆರಳಿದರು. ಹೆಲಿಪ್ಯಾಡ್ ನಲ್ಲಿಯೇ ಉಳಿದ ಸೇನಾ ಹೆಲಿಕ್ಯಾಪ್ಟರ್. ತೇವಾಂಶ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೆಲಿಪ್ಯಾಡ್ ನಲ್ಲಿ ಹೆಲಿಕ್ಯಾಪ್ಟರ್ ಹಾಕಿಕೊಂಡಿದೆ. ನಂತರ ಸುಮಾರು 50 ಕ್ಕೂ ಹೆಚ್ಚು ಜನರಿಂದ ಹೆಲಿಕ್ಯಾಪ್ಟರ್ ಮೇಲೆಕ್ಕೆತ್ತುವ ಕಾರ್ಯ ನಡೆಸಲಾಗಿದೆ. ಸುಮಾರು 8 ಗಂಟೆಗಳ ಸತತ ಪ್ರಯತ್ನ ಮಾಡಿದರೂ ಸೇನಾ ಹೆಲಿಕಾಪ್ಟರ್‌ ಅನ್ನು ಮೇಲೆತ್ತಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!