
ವರದಿ: ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ (ಜೂ.15): ಧಾರವಾಡ ಜಿಲ್ಲಾಧಿಕಾರಿಗಳು ಇಡಿ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಿಶಿಲನೆ ಮಾಡಬೇಕು, ಜೊತೆಗೆ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕಾಮಗಾರಿಗಳು ನಡೆಯುತ್ತಿವೆ ಎಂಬುದರ ಬಗ್ಗೆ ಪ್ರಗತಿ ಪರಿಶಿಲನೆ ಸಭೆ ಮಾಡುತ್ತಾ ಬಂದಿದ್ದಾರೆ. ಆದರೆ ಮೇಣದ ಬತ್ತಿ ಕೆಳಗೆ ಕತ್ತಲೂ ಅಂದಂಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರೆ ಅವೈಜ್ಞಾನಿಕ ವಾಗಿ, ವಿಳಂಭವಾಗಿ ಕಾಮಗಾರಿ ನಡೆಯುತ್ತಿದ್ದರು ಯಾವೊಬ್ಬ ಅಂದಿಕಾತಿಯೂ ಕಾಮಗಾರಿಯ ಬಗ್ಗೆ ಗುತ್ತಿಗೆದಾರನಿಗೆ ಪ್ರಶ್ನೆ ಮಾಡೋ ಗೋಜಿಗೆ ಹೋಗಿಲ್ಲ.
ಧಾರವಾಡ ಜಿಲ್ಲಾಧಿಕಾರಿ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ , ಜಿಲ್ಲಾ ಪಂಚಾಯತ ಕಚೇರಿ, ಸಮಾಜ ಕಲ‌್ಯಾಣ ಇಲಾಖೆಯ ಸುಮಾರು 10 ಕ್ಕೂ ಹೆಚ್ಚು ಕಚೇರಿ ಇರುವ ಡಿ ಸಿ ಕಂಪೌಂಡ್ ಎದುರಿಗೆ ಕಳೆದ ಜನೇವರಿಯಿಂದ ಸಿ ಸಿ ರಸ್ತೆ ಕಾಮಗಾರಿ ಮಾಡುತ್ತಿದ್ದಾರೆ ಆದರೆ ಕೇವಲ ಒಂದು ಕೀ ಮೀ ಸಿ ಸಿ ರಸ್ತೆ ಮತ್ತು ಪಕ್ಕ ಗಟಾರು ನಿರ್ಮಾಣ, ಜೊತೆಗೆ ಪುಟ್ ಪಾಥ್ ನಿರ್ಮಾಣ ಕಾಮಗಾರಿ ಮಾಡಲು ಸುಮಾರು 6 ತಿಂಗಳು ಕಳೆದಿದೆ ಆದರೆ ಕಾಮಗಾರಿಯನ್ನ ಇನ್ನುವರೆಗೂ ಗುತ್ತಿಗೆದಾರನೂ ಮುಗಿಸದೆ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ.
ಇನ್ನು ಅವೈಜ್ಞಾನಿಕ ರಸ್ತೆಯಿಂದ ಡಾಂಬರಿಕರಣಕ್ಕೆ ಸ್ಕಿಡ್ ಆಗಿ ನಿನ್ನೆ ಸಂಜೆ ಬೈಕ್ ಮತ್ತು ಟ‌್ಯ್ರಾಕ್ಟರ್ ಮಧ್ಯ ಅಪಘಾತವಾಗಿದೆ ಅಪಘಾತವಾದ್ರೆ ಬೈಕ್ ನಲ್ಲಿದ್ದ ಓರ್ವ ವೃದ್ದನ ಕಾಲು ಮುರಿದು ಹೋಗಿದ್ದು, ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಈ ಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರೆ ಅವೈಜ್ಞಾನಿಕ ಕಾಮಗಾರಿ ನಡೆದ್ರೂ ಯಾವ ಅಧಿಕಾರಿಯೂ ಗುತ್ತಿಗೆದಾರನಿಗೆ ಪ್ರಶ್ನೆ ಮಾಡಿಲ್ಲ ಇನ್ನು ಗುತ್ತಿಗೆದಾರ ನಿರ್ಲಕ್ಷ್ಯದಿಂದ ವೃದ್ದನೊಬ್ಬನ ಕಾಲು ಮುರಿದು ಹೋಗಿದೆ ವೃದ್ದನನ್ನ ಮಾದ್ಯಮ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಮುಂದೆ ನಿಂತು ಅಂಬುಲೈನ್ಸ್ ಮುಖಾಂತರ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲಾಗಿದೆ ಆದರೆ ಈ ಘಟನೆಗೆ ಹೊಣೆಯಾರು ಎಂದು ಜನಸಾಮನ್ಯರು ಜಿಲ್ಲಾಡಳಿತ ಮತ್ತು ಗುತ್ತಿಗೆದಾರನಿಗೆ ಚಿಮಾರಿ ಹಾಕುತ್ತಿದ್ದಾರೆ ಇದಕ್ಕೆ ಗುತ್ತಿಗೆದಾರನೆ ಕಾರಣ ಎಂದು ಸ್ಥಳಿಯರು ಹಿಡಿ ಶಾಪವನ್ನ ಹಾಕುತ್ತಿದ್ದಾರೆ.
ಇನ್ನು ಸಿ ಸಿ ರಸ್ತೆಯ ಮೆಲೆ ಅಲ್ಲಲ್ಲಿ ಜಲ್ಲಿಕಲ್ಲು ಬಿದ್ದು ಚಿಲ್ಲಾಪಿಲ್ಲಿಯಾಗಿದ್ದು ಜಲ್ಲಿಕಲ್ಲಿನ ಮೇಲೆ ಬೈಕ್ ಸವಾರ ಸ್ಕಿಡ್ ಆಗಿ ಕಾಲು ಮುರಿದುಕ್ಕೊಂಡಿದ್ದಾನೆ ಇನ್ನು ಇಬ್ಬರಿಗೆ ಸಣ್ಣ ಪುಟ್ಟ ಗಾಯವಾಗಿದೆ ಜೊತೆಗೆ ಜಿಲ್ಲಾಧಿಕಾರಿ ಎದುರೆ ಕಾಮಗಾರಿ ವಿಳಂಭವಾಗುತ್ತಿದ್ದರು ಯಾವೊಬ್ಬ ಅಧಿಕಾರಿ ಗುತ್ತಿಗೆದಾರನಿಗೆ ಪ್ರಶ್ನೆ ಮಾಡಲು ಹೋಗಿಲ್ಲ ಅದೆಷ್ಟೋ ಬೈಕ್ ಸವಾರರು ಬಿದ್ದು ಪೆಟ್ಟು ಕಚ್ಚಿಕ್ಕೊಂಡು ತಾವೆ ಚಿಕಿತ್ಸೆಗೆ ಒಳಪಟ್ಟಿದ್ದಾರೆ ಆದರೆ ಜಿಲ್ಲೆಯನ್ನ ರಕ್ಷಣೆ ಮಾಡಬೇಕಾದ ಹಿರಿಯ ಅಧಿಕಾರಿಗಳು ಮೌನ ವಿರೋಧ ಯಾಕೆ ಎಂದು ಜನ ಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದಾರೆ ಯಾರಾದ್ರೂ ಸಾವಾಗಿದ್ದರೆ ಸಾವಿನ ಹೊಣೆ ಹೊರೋರು ಯಾರು..ಎಂದು ಜನಸಾಮನ್ಯರು ಜಿಲ್ಲಾಡಳಿತಕ್ಕೆ ಚೀ ಮಾರಿ ಹಾಕುತ್ತಿದ್ದಾರೆ.