ಲಂಚ ಪಡೆಯುವ ವೇಳೆ ಇಬ್ಬರನ್ನು ವಶಕ್ಕೆ ಪಡೆದ ಅಧಿಕಾರಿಗಳು| ಎಸಿಬಿ ಬಲೆಗೆ ಬಿದ್ದ ಮಹಾನಗರ ಪಾಲಿಕೆ ಆಯುಕ್ತೆಯ ಸಹಾಯಕ ಮಲ್ಲಿಕಾರ್ಜುನ ಪಾಟೀಲ್ ಹಾಗೂ ಕಚೇರಿ ಸಹಾಯಕ ಭಾಷ| ಆರೋಪಿಗಳನ್ನು ವಶಕ್ಕೆ ಪಡೆದ ಎಸಿಬಿ ಪೊಲೀಸರು|
ಬಳ್ಳಾರಿ(ಅ.10): ಆಸ್ತಿ ದಾಖಲೆಗೆ ಫಾರಂ 2 ನೀಡಲು ಲಂಚ ಪಡೆಯುತ್ತಿದ್ದ ಇಲ್ಲಿನ ಮಹಾನಗರ ಪಾಲಿಕೆ ಆಯುಕ್ತೆಯ ಸಹಾಯಕ ಮಲ್ಲಿಕಾರ್ಜುನ ಪಾಟೀಲ್ ಹಾಗೂ ಕಚೇರಿ ಸಹಾಯಕ ಭಾಷ ಎಂಬುವರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ನಗರದ ಖಾಸಗಿ ಶಾಲೆಯ ಶಿಕ್ಷಕರೊಬ್ಬರು ತಮ್ಮ ಆಸ್ತಿಯ ದಾಖಲೆಗಾಗಿ ಫಾರಂ 2 ನೀಡುವಂತೆ ಕೋರಿ ಮಹಾನಗರ ಪಾಲಿಕೆಗೆ ಅಲೆದಾಡಿದ್ದಾರೆ. ಕೊನೆಗೆ ಆಯುಕ್ತೆಯ ಸಹಾಯಕ ಮಲ್ಲಿಕಾರ್ಜುನ ಪಾಟೀಲ್ ಎಂಬುವರಲ್ಲಿಗೆ ತೆರಳಿದರೆ ಕೆಲಸವಾಗಲಿದೆ ಎಂದು ಪಾಲಿಕೆಯ ಕೆಲವರು ಸೂಚನೆ ನೀಡಿದ್ದಾರೆ. ಅಂತೆಯೇ ಖಾಸಗಿ ಶಾಲೆ ಶಿಕ್ಷಕರು ಮಲ್ಲಿಕಾರ್ಜುನ ಪಾಟೀಲ್‌ರನ್ನು ಭೇಟಿ ಮಾಡಿದಾಗ 60 ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.
undefined
ಹೂವಿನಹಡಗಲಿ: ಡೆಂಘೀಗೆ ಬಾಲಕಿ ಬಲಿ, ಆತಂಕದಲ್ಲಿ ಜನತೆ
ಕೊನೆಗೆ 50 ಸಾವಿರ ನೀಡುವುದಾಗಿ ಒಪ್ಪಿಕೊಂಡಿದ್ದು, ಈ ಕುರಿತು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಾರೆ. ಅಂತೆಯೇ ಶುಕ್ರವಾರ ಮಲ್ಲಿಕಾರ್ಜುನ ಪಾಟೀಲ್ ಹಾಗೂ ಭಾಷ ಅವರು ಹಣ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ, ಎಸಿಬಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.