ಹಿಂದೂ ಕಾರ್ಯಕರ್ತನನ್ನು ರಕ್ಷಿಸಿಕೊಳ್ಳುವ ಶಕ್ತಿ ಬೊಮ್ಮಾಯಿ ಸರ್ಕಾರಕ್ಕೆ ಇಲ್ಲವೇ?: ಸ್ವಾಮೀಜಿ ಪ್ರಶ್ನೆ

By Kannadaprabha News  |  First Published Feb 22, 2022, 9:33 AM IST

*   ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆಯಾ? ಅಥವಾ ಯಾವ ಸರ್ಕಾರ ಆಳ್ವಿಕೆ ಮಾಡ್ತಿದೆ?
*   ಸರ್ಕಾರಗಳಿಗೆ ಕಾರ್ಯಕರ್ತರ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದೆ
*   ಇಂತಹ ಸರ್ಕಾರವನ್ನು ಹಿಂದೂ ಸಮಾಜ ಎಂದಿಗೂ ಕ್ಷಮಿಸುವುದಿಲ್ಲ 


ಹೂವಿನಹಡಗಲಿ(ಫೆ.22):  ಶಿವಮೊಗ್ಗದಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತನ ಕೊಲೆ ಮಾಡಿರುವುದನ್ನು ಹಿರೇಹಡಗಲಿಯ ಸದ್ಗುರು ಶಿವಯೋಗಿ ಸಂಸ್ಥಾನ ಮಠದ ಅಭಿನವ ಹಾಲವೀರಪ್ಪಜ್ಜ(Abhinava Hala Veerappajja) ಖಂಡಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಪರ ಕಾರ್ಯಕರ್ತನ ಕಗ್ಗೊಲೆ ಆಗಿರುವುದು ನೋಡಿದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ(BJP Government) ಇದೆಯಾ? ಅಥವಾ ಯಾವ ಸರ್ಕಾರ ಆಳ್ವಿಕೆ ಮಾಡುತ್ತಿದೆ ಎಂಬ ಅನುಮಾನ ಕಾಡುತ್ತಿದೆ ಎಂದರು.

Tap to resize

Latest Videos

undefined

Shivamogga: ನಗರದಲ್ಲಿ ಶಾಂತಿ ಸುವವ್ಯಸ್ಥೆ ಕದಡಲು ನಾವು ಬಿಡಲ್ಲ: ಎಡಿಜಿಪಿ ಮುರುಗನ್

ರಾಜ್ಯದಲ್ಲಿ(Karnataka) ಯಾವುದೇ ಸರ್ಕಾರ ಇರಲಿ, ಹಿಂದೂಪರ ಸಂಘಟನೆಯ ಕಾರ್ಯಕರ್ತರನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಈ ಸರ್ಕಾರಗಳಿಗೆ ಕಾರ್ಯಕರ್ತರ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದೆ. ಒಬ್ಬ ಹಿಂದೂ ಕಾರ್ಯಕರ್ತನನ್ನು ರಕ್ಷಿಸಿಕೊಳ್ಳುವ ಶಕ್ತಿ ಈ ಸರ್ಕಾರಕ್ಕೆ ಇಲ್ಲವೇ ಎಂದು ಪ್ರಶ್ನಿಸಿದ ಅವರು, ಇಂತಹ ಸರ್ಕಾರವನ್ನು ಹಿಂದೂ ಸಮಾಜ ಕ್ಷಮಿಸುವುದಿಲ್ಲವೆಂದು ಹೇಳಿದರು.

ಸರ್ಕಾರ ಕೊಲೆ ಆರೋಪಿಗಳನ್ನು ರಕ್ಷಿಸದೆ ಅವರನ್ನು ಪತ್ತೆ ಮಾಡಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ ಅವರು, ಕೊಲೆ ಮಾಡಿದ ಯುವಕರ ಬೆನ್ನಿಗೆ ರಾಜಕಾರಣಿಗಳು ನಿಲ್ಲಬಾರದು. ಓಲೈಕೆ ರಾಜಕಾರಣ(Politics) ಮಾಡಬಾರದು ಎಂದು ಹೇಳಿದರು.

'ನಮ್ಮ ಸರ್ಕಾರವೇ ಅಧಿಕಾರದಲ್ಲಿರುವ ಸಮಯದಲ್ಲಿ ಕೊಲೆ ನಡೆದಿರುವುದು ನಾಚಿಕೆಗೇಡು'

ಬೆಂಗಳೂರು: ಶಿವಮೊಗ್ಗದಲ್ಲಿ(Shivamogga) ಭಾನುವಾರ ನಡೆದ ಬಜರಂಗದಳ (Bajrandal) ಕಾರ್ಯಕರ್ತ ಹರ್ಷ ಹತ್ಯೆ(Harsha Murder) ಪ್ರಕರಣವನ್ನು ಸಂಸದ ಪ್ರತಾಪ್ ಸಿಂಹ (Pratap Simha) ತೀವ್ರವಾಗಿ ಖಂಡಿಸಿದ್ದಾರೆ.

ನಿನ್ನೆ(ಸೋಮವಾರ) ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು, ಬೀದಿಯಲ್ಲಿ ಹರ್ಷ ಅವರ ಕಗ್ಗೊಲೆಯಾಗಿದ್ದು ಅತೀವ ನೋವಾಗಿದೆ ಮತ್ತು ನಮ್ಮ ಸರ್ಕಾರವೇ ಅಧಿಕಾರದಲ್ಲಿರುವ ಸಮಯದಲ್ಲಿ ಕೊಲೆ ನಡೆದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಅಸಮಾಧಾನ ಹೊರಹಾಕಿದ್ದರು. 

ಹಿಂದೆ ಮಂಗಳೂರಿನಲ್ಲಿ ಗೋಲಿಬಾರ್ ಮತ್ತು ಕೆ ಜಿ ಹಳ್ಳಿಯಲ್ಲಿ ಗಲಭೆ ನಡೆದಾಗ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಂಡಿದ್ದರೆ ಹರ್ಷ ಅವರ ಕೊಲೆ ನಡೆಯುತ್ತಿರಲಿಲ್ಲ. ಈಗಲಾದರೂ ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಲಿ ಆಗ್ರಹಿಸಿದ್ದರು. 

ಮುಖ್ಯಮಂತ್ರಿ ಮತ್ತು ಗೃಹ ಸಚಿವರು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಹೇಳಿದರೆ ಮತ್ತು ನಾಲ್ಕು ಜನರನ್ನು ಬಂಧಿಸಿ ಜೈಲಿಗೆ ಹಾಕಿದರೆ ಸಾಲದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲೇಬೇಕು, ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಸ್ಥೆಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದರು. 

ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹತ್ಯೆ ಕೇಸ್: ಈಶ್ವರಪ್ಪ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಸಿಎಂ

ಹೈದರಾಬಾದ್‌ನಲ್ಲಿ ಅತ್ಯಾಚಾರಿಗಳನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು, ಇಲ್ಲೂ ಅದೇ ರೀತಿ ಕ್ರಮಗಳನ್ನು ಕೈಗೊಂಡರೆ ಪಾಠ ಕಲಿಯುತ್ತಾರೆ. ಕೆ ಜಿ ಹಳ್ಳಿ ಗಲಭೆ ನಡೆದಾಗ ವೇಳೆ ಬೊಮ್ಮಾಯಿ ಗೃಹ ಸಚಿವರಾಗಿದ್ದರು, ಆ ಸಂದರ್ಭದಲ್ಲೇ ಅವರು ಎಸ್ ಡಿ ಪಿ ಐ ಮತ್ತು ಪಿ ಎಫ್ ಐ ಸಂಸ್ಥೆಗಳ ಮೇಲೆ ನಿಷೇಧ ಹೇರಿದ್ದರೆ, ಹರ್ಷ ಅವರ ಕೊಲೆ ನಡೆಯುತ್ತಿರಲಿಲ್ಲ ಎಂದು ಹೇಳಿದ್ದರು. 

ಬಿ.ಎಲ್ ಸಂತೋಷ್ ಟ್ವೀಟ್‌

ಹರ್ಷ ಕೊಲೆಗೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್  (BL Santosh)ಟ್ವೀಟ್ ಮಾಡಿದ್ದು, ಜಿಹಾದಿ ಮೂಲಭೂತವಾದಿಗಳಿಂದ ಹರ್ಷನ (Harsha) ಹತ್ಯೆಯಾಗಿದೆ, ಹಿಜಾಬ್ ವಿರೋಧಿಸಿ ಸಮವಸ್ತ್ರ ಬೆಂಬಲಿಸಿದ್ದಕ್ಕೆ ಅವರನ್ನು ಕೊಲೆ ಮಾಡಲಾಗಿದೆ, ಎಂದು ತಮ್ಮ ಟ್ವೀಟ್​ನಲ್ಲಿ ಹೇಳಿದ್ದು, ಹಿಂದೂ ವಿರೋಧಿಗಳು ಹರ್ಷನನ್ನು ಕೊಲೆ ಮಾಡಿದ್ದಾರೆ, ಅವರ ಕುಟುಂಬದ ಜೊತೆಗೆ ನಾವಿರೋಣ ಅಂತ ಕರೆ ನೀಡಿದ್ದಾರೆ.

ತಮ್ಮ ಮತ್ತೊಂದು ಟ್ವೀಟ್ ನಲ್ಲಿ ಸಂತೋಷ್ ಅವರು, ‘ರಾಷ್ಟ್ರ ವಿರೋಧಿ ಮತ್ತು ಹಿಂದೂ ಮೂಲಭೂತವಾದಿ ಶಕ್ತಿಗಳಿಂದ ಹರ್ಷ ಅವರ ಹತ್ಯೆಯಾಗಿದೆ. ಮುಖಪುಟಗಳಲ್ಲಿ ಅಂತರರಾಷ್ಟ್ರೀಯ ಲಾಬಿಯಿಂದ ಅವರಿಗೆ ಸಂತಾಪ ವ್ಯಕ್ತವಾಗಿಲ್ಲ. ಅವರೊಬ್ಬ ರಾಷ್ಟ್ರವಾದಿ ಮತ್ತು ಹಿಂದೂ ಆಗಿದ್ದರು. ಅವರ ಕುಟುಂಬದ ಜೊತೆ ನಾವಿರೋಣ, ಕೊನೆಯವರೆಗೆ ಅವರೊಂದಿಗಿರೋಣ,’ ಎಂದು ಹೇಳಿದ್ದಾರೆ.
 

click me!