ಬೆಳಗಾವಿ: ಎಂಥಾ ಪೋಷಕರು, ಚೀಲದಲ್ಲಿ ಹೆಣ್ಣು ಮಗುವನ್ನಿಟ್ಟು ಹೋದರು

Published : Jul 29, 2019, 10:32 PM IST
ಬೆಳಗಾವಿ: ಎಂಥಾ ಪೋಷಕರು, ಚೀಲದಲ್ಲಿ ಹೆಣ್ಣು ಮಗುವನ್ನಿಟ್ಟು ಹೋದರು

ಸಾರಾಂಶ

ಆಧುನಿಕ ಪ್ರಪಂಚ ಅದು ಎಲ್ಲಿಗೆ ಬಂದು ನಿಂತಿದೆ ಎಂದು ಹೇಳಲು ಸಾಧ್ಯವಿಲ್ಲ. ಬೆಳಗಾವಿಯ ಈ ಘಟನೆ ನಾವೆಲ್ಲ ಯಾವ ಸ್ಥಳಕ್ಕೆ ಬಂದು ನಿಂತಿದ್ದೇವೆ ಎಂದು ನಮ್ಮನ್ನ ನಾವೇ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ.

ಬೆಳಗಾವಿ [ಜು. 29]   ಇದನ್ನು ಯಾವ ಅರ್ಥದಲ್ಲಿ ಹೇಳಬೇಕೋ ಗೊತ್ತಾಗುತ್ತಿಲ್ಲ. ಆಸ್ಪತ್ರೆ ಆವರಣದಲ್ಲೇ ನವಜಾತ ಶಿಶುವನ್ನು ಪೋಷಕರು ಬಿಟ್ಟು ಹೋಗಿದ್ದಾರೆ. ಬೆಳಗಾವಿ ಜಿಲ್ಲಾ ಆಸ್ಪತ್ರೆ ಮುಂಭಾಗದಲ್ಲಿ ಚೀಲದಲ್ಲಿ ಶಿಶುವೊಂದು ಪತ್ತೆಯಾಗಿದೆ.

ಹೆಣ್ಣು ಹುಟ್ಟಿದೆ ಎಂಬ ಕಾರಣಕ್ಕೆ ಚೀಲದಲ್ಲಿ ಹಾಕಿ ಕಟ್ಟಿ ಆಸ್ಪತ್ರೆ ಹೊರ ಭಾಗದ ಕಟ್ಟೆ ಮೇಲೆ ಬಿಟ್ಟು ಹೋಗಲಾಗಿದೆ ಎಂದು ಹೇಳಲಾಗುತ್ತಿದೆ. ಮಗು ಅಳುತ್ತಿರುವುದನ್ನ ಕಂಡ ಸ್ಥಳೀಯರು ಶಿಶು ರಕ್ಷಣೆ ಮಾಡಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣು ಹಸುಗೂಸಿಗೆ ಚಿಕಿತ್ಸೆ ನೀಡಲಾಗಿದ್ದು ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

PREV
click me!

Recommended Stories

ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ
ಹಿಂದೂ, ಧರ್ಮವೇ ಅಲ್ಲ, ಅದೊಂದು ಬೈಗುಳ ಶಬ್ದ : ಬಿ.ಜಿ ಕೋಳ್ಸೆ