ಎಸ್‌ಸಿ, ಎಸ್‌ಟಿ ಸಬ್ಸಿಡಿ ಕಾರು ಹಂಚಿಕೆಯಲ್ಲಿ ಗೋಲ್ಮಾಲ್: ಬ್ರೋಕರ್‌ಗೆ 20 ಸಾವಿರ ರೂ. ಕೊಟ್ಟರಷ್ಟೇ ಟ್ಯಾಕ್ಸಿ ಸ್ಯಾಂಕ್ಷನ್

By Sathish Kumar KH  |  First Published Mar 2, 2023, 7:38 PM IST

* ಪ್ರವಾಸೋದ್ಯಮ ಇಲಾಖೆಯ ಟ್ಯಾಕ್ಸಿ ವಿತರಣೆಯಲ್ಲಿ ಗೋಲ್ಮಾಲ್ ಆರೋಪ.
* ಮಧ್ಯವರ್ತಿಗಳ ಹಾವಳಿಯಿಂದ ಅರ್ಹ ಫಲಾನುಭವಿಗಳಿಗೆ ಸಿಗ್ತಿಲ್ಲ ಟ್ಯಾಕ್ಸಿಗಳು.


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಮಾ.02): ಸರ್ಕಾರ ನೀಡುವ ಸಬ್ಸಿಡಿ ಟ್ಯಾಕ್ಸಿಯಿಂದ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕೆಂದು ನಿರುದ್ಯೋಗಿ ಯುವಕರು ಕನಸು ಕಾಣ್ತಿದ್ದಾರೆ‌. ಆದ್ರೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಬ್ರೋಕರ್‌ಗಳಿಂದ ನಡೆಸುತ್ತಿರುವ ಭ್ರಷ್ಟಾಚಾರದಿಂದಾಗಿ ಕೋಟೆನಾಡು ಚಿತ್ರದುರ್ಗದ ಟ್ಯಾಕ್ಸಿ ಚಾಲಕರು ಹೈರಾಣಾಗಿದ್ದಾರೆ. 

Latest Videos

undefined

ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮಿಕಿ ಅಭಿವೃದ್ಧಿ ನಿಗಮ ಹಾಗೂ ಪ್ರವಾಸೋದ್ಯಮ ಇಲಾಖೆಗಳಿಂದ ಸರ್ಕಾರ ನೀಡುವ ಸಬ್ಸಿಡಿ ಕಾರುಗಳನ್ನು ಪಡೆದು ತಮ್ಮ ಜೀವನವನ್ನು ರೂಪಿಸಿಕೊಳ್ಳುವ ಕನಸನ್ನು ನಿರುದ್ಯೋಗ ಯುವಕರು ಹಾಗೂ ಕಡುಬಡ ಚಾಲಕರು ಕಾಣ್ತಿದ್ದಾರೆ. ಆದರೆ, ಕೋಟೆನಾಡು ಚಿತ್ರದುರ್ಗದ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಜಿತೇಂದ್ರನಾಥ್ ಅವರ  ಯಡವಟ್ಟಿನಿಂದಾಗಿ ಫಲಾನುಭವಿಗಳ ಕನಸು ಕನಸಾಗಿಯೇ ಉಳಿದಿದೆ. 

ಚಿತ್ರದುರ್ಗ: ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ರಘು ಆಚಾರ್‌ ದಂಪತಿಯಿಂದ ಮಂದಿರ, ಮಸೀದಿ ಭೇಟಿ

20 ಸಾವಿರ ರೂ. ಲಂಚ ಕೊಟ್ಟವರಿಗೆ ಸಬ್ಸಿಡಿ ಕಾರು: 2016 ರಿಂದ 2019 ರವರೆಗೆ  ಆಯ್ಕೆ ಮಾಡಿರುವ ಓರ್ವ ಫಲಾನಭವಿಗೂ ಸಬ್ಸಿಡಿ ಯೋಜನೆ ಕಾರನ್ನು ವಿತರಿಸಿಲ್ಲವಂತೆ. ಇಲ್ಲ ಸಲ್ಲದ ಕಾರಣ ನೀಡಿ ಆಯ್ಕೆಯನ್ನು ಪೆಂಡಿಂಗ್ ಇಟ್ಟಿದ್ದಾರಂತೆ. ಅಲ್ಲದೇ ಒಳಗೊಳಗೆ ಬ್ರೋಕರ್ ಗಳ‌ ಮೂಲಕ ಲಂಚ‌ವನ್ನು ಕೊಟ್ಟವರಿಗೆ ಮಾತ್ರ ಕಾರು ವಿತರಿಸಿದ್ದಾರೆಂಬ ಗಂಭೀರ ಆರೋಪ ಅರ್ಜಿದಾರರಿಂದ ಕೇಳಿ ಬಂದಿದೆ. 20 ಸಾವಿರ ಲಂಚ‌ ನೀಡಿದವರಿಗೆ‌ ಸರ್ಕಾರದ‌ ಸಬ್ಸಿಡಿ ಕಾರು ನೀಡುವ ಭರವಸೆ ನೀಡುತ್ತಿದ್ದು, 9 ಜನರಿಂದ‌ ಮುಂಗಡವಾಗಿ‌ ತಲಾ 2000 ಲಂಚ‌ವನ್ನು ಬ್ರೋಕರ್‌ಗಳು ಪಡೆದಿದ್ದಾರಂತೆ. ಇವರಿಗೆ ಲಂಚ ಕೊಟ್ಟು ಸತತ 3 ತಿಂಗಳಿಂದ ಫಲಾನುಭವಿಗಳು ಪರದಾಡ್ತಿದ್ದಾರಂತೆ.

ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿದ ಸಹಾಯಕ ನಿರ್ದೇಶಕ: ಇನ್ನು 2019 ನೇ ಸಾಲಿನ 34 ಫಲಾನುಭವುಗಳಲ್ಲಿ‌15 ಜನರಿಗೆ ಬ್ಯಾಂಕಲ್ಲಿ  ಸಾಲ ಸೌಲಭ್ಯ ಸಿಗದ ಹಿನ್ನಲೆಯಲ್ಲಿ 15 ಟ್ಯಾಕ್ಸಿಗಳನ್ನು ಸರ್ಕಾರಕ್ಕೆ  ವಾಪಾಸ್ ನೀಡುವಂತೆ ಅಂದಿನ ಜಿಲ್ಲಾಧಿಕಾರಿ ಕವಿತ ಮನ್ನಿಕೇರಿ ಸೂಚಿಸಿದ್ದರು. ಆದರೆ ಡಿಸಿ ಆದೇಶಕ್ಕೆ ಡೋಂಟ್ ಕೇರ್ ಎಂದಿರುವ ಚಿತ್ರದುರ್ಗ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಜಿತೇಂದ್ರನಾಥ್ ಜಿಲ್ಲಾಧಿಕಾರಿಗೂ ಚಳ್ಳೆಹಣ್ಣು ತಿನ್ನಿಸಿ ಮತ್ತೆ ಅರ್ಜಿ ಕರೆದು ಭರ್ಜರಿ ಗೋಲ್ಮಾಲ್ ಮಾಡಿದ್ದಾರೆ ಎಂಬ ಆರೋಪಗಳು ಈಗ ಕೇಳಿಬಂದಿವೆ.

ಬ್ರೋಕರ್‌ಗಳ ಹಾವಳಿಯಿಂದ ಅರ್ಜಿದಾರರ ಪರದಾಟ: ನಾಮಕಾವಸ್ಥೆಗೆ ಸಬ್ಸಿಡಿ ಟ್ಯಾಕ್ಸಿ ವಿತರಿಸುವ ಅರ್ಜಿ ಕರೆದು ಬ್ರೋಕರ್ ಗಳ ಮೂಲಕ ಲಂಚ‌ನೀಡಿದವರಿಗೆ ಮಾತ್ರ ಕಾರು ಕೊಟ್ಟು ಕಮೀಷನ್ ಟ್ಯಾಕ್ಸಿ ದಂಧೆ‌ ನಡೆಸ್ತಿದ್ದೂ, ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ನ ಟ್ಯಾಕ್ಸಿ ವಿತರಿಸಲು‌ ರೆಸಾರ್ಟ್‌ ಹಾಗೂ ಬಾರ್ ನಲ್ಲಿ ಟ್ಯಾಕ್ಸಿ ಫಲಾನುಭವಿಗಳ ಪಟ್ಟಿ ಸಿದ್ಧ ಪಡಿಸಿದ್ದಾರೆ ಎಂಬ ಆಕ್ರೋಶ ಫಲಾನುಭವಿಗಳು ಹೊರ ಹಾಕಿದ್ದಾರೆ. ಆದರೆ, ಈ ಆರೋಪವನ್ನು  ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಜಿತೇಂದ್ರನಾಥ್ ಅಲ್ಲೆಗೆಳೆದಿದ್ದಾರೆ.

Chitradurga : ಇಬ್ಬರ ನಡುವಿನ ಜಗಳ ಬಿಡಿಸಲು ಹೋದವ ಹೆಣವಾದ, ಯಾರದ್ದೋ ಕೋಪಕ್ಕೆ ಅಮಾಯಕ ಬಲಿ!

 

ಅರ್ಜಿ ಪಡೆದವರಿಗೆ ರಶೀದಿ ಕೊಡದೇ ಪಂಗನಾಮ: ಒಟ್ಟಾರೆ ಮನ ಬಂದಂತೆ ಅರ್ಜಿ ಕರೆದು ಅರ್ಜಿದಾರರ ಹಣವನ್ನು ಸರ್ಕಾರಕ್ಕೆ ಕಟ್ಟದೇ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು. ಅರ್ಜಿ ವಿತರಣೆ ವೇಳೆ ಚೆಕ್ ಲಿಸ್ಟ್, ರಶೀದಿ ನೀಡದೇ ಜಾಣ್ಮೆ ಮೆರೆದಿರೋ ಆಸಾಮಿಯ  ಲಂಚವತಾರದಿಂದಾಗಿ ಫಲಾನುಭವಿಗಳು ಕಂಗಾಲಾಗಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಅಕ್ರಮ ಬ್ರೋಕರ್ ದಂಧೆಗೆ ಬ್ರೇಕ್ ಹಾಕಬೇಕಿದೆ.

click me!