ಒಂದು ಕೆಜಿ ಈರುಳ್ಳಿಗೆ 5 ರೂಪಾಯಿ ಬೆಲೆ ಸಿಕ್ತಿಲ್ಲ: ಕಂಗಾಲಾದ ಈರುಳ್ಳಿ ಬೆಳೆದ ರೈತರು

By Sathish Kumar KHFirst Published Mar 2, 2023, 8:00 PM IST
Highlights

ಹೊಲದಲ್ಲಿಯೇ ಈರುಳ್ಳಿಯನ್ನು ಗೊಬ್ಬರ ಮಾಡುತ್ತಿರುವ ರೈತರು
ಈರುಳ್ಳಿ ಬೆಳದ ಖರ್ಚಿಗಿಂತ ಕಡಿಮೆ ಬೆಲೆ ನಿಗದಿ
ರಾಜ್ಯದಲ್ಲಿ ಈರುಳ್ಳಿ ಬೆಳೆದ ರೈತನಿಗೆ ದರ ಇಳಿಕೆಯ ಉರುಳು

ವರದಿ- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಮಾ 02) : ದೇಶದಲ್ಲಿ ಮಹಾರಾಷ್ಟ್ರ ಹೊರತುಪಡಿಸಿದರೆ ಕರ್ನಾಟಕದಲ್ಲಿ ಅತೀ ಹೆಚ್ಚು ಈರುಳ್ಳಿಯನ್ನು ವಿಜಯಪುರ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಸುಮಾರು 45 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದೆ. ಆದರೆ ಇಂದು ಮಾರುಕಟ್ಟೆಯಲ್ಲಿ ಈರುಳ್ಳಿಗೆ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಸೂಕ್ತ ‌ಪರಿಹಾರಕ್ಕೆ ಮತ್ತು ಬೆಂಬಲ ಬೆಲೆ ಘೋಷಿಸುವಂತೆ ರೈತರು ಒತ್ತಾಯ ಮಾಡುತ್ತಿದ್ದಾರೆ. 

ಈರುಳ್ಳಿ ಬೆಲೆ ಕುಸಿತದ ಪರಿಣಾಮವಾಗಿ ಇಂದು ರೈತರು ಅದರಲ್ಲೂ ವಿಜಯಪುರ ಜಿಲ್ಲೆಯ ಉಳ್ಳಾಗಡ್ಡಿ ಬೆಳೆಗಾರರು ಕಂಗಾಲಾಗಿದ್ದಾರೆ. ದೇಶದಲ್ಲಿ ಮಹಾರಾಷ್ಟ್ರ ಹೊರತುಪಡಿಸಿದರೆ ರಾಜ್ಯದಲ್ಲಿ ಅದರಲ್ಲೂ ವಿಜಯಪುರ ಜಿಲ್ಲೆಯಾದ್ಯಂತ ಈರುಳ್ಳಿ ಅಥವಾ ಉಳ್ಳಾಗಡ್ಡಿಯನ್ನ ಅತಿಹೆಚ್ಚು ಬೆಳೆಯಲಾಗುತ್ತದೆ. ಪ್ರತಿ ಕ್ವೀಂಟಲ್ ಈರುಳ್ಳಿಗೆ ಈಗ 300 ರಿಂದ 500 ಕ್ಕೆ ಬಂದಿದೆ. ಇದರಿಂದಾಗಿ ಈರುಳ್ಳಿ ಬೆಳೆದ ರೈತರು ಇಂದು ಕಂಗಾಲಾಗಿದ್ದಾರೆ. 

Latest Videos

 

Vijayapura: ಭೀಮಾತೀರದ ಹಂತಕರಿಗೆ ಆತಂಕ ದೂರ: 40 ವರ್ಷದ ಗ್ಯಾಂಗ್‌ ವಾರ್‌ ಅಂತ್ಯ

ಹೊಲದಲ್ಲಿಯೇ ಈರುಳ್ಳಿ ಬಿಡ್ತಿರೋ ರೈತರು: ಈರುಳ್ಳಿಗೆ ಸೂಕ್ತ ಬೆಲೆ ಸಿಗದೇ ಕೆಲವು ರೈತರು ಮಾರುಕಟ್ಟೆಗೆ ಈರುಳ್ಳಿ ತಂದರೂ ಪ್ರಯೋಜನವಿಲ್ಲ ಎಂದು ತಮ್ಮ ತೋಟದಲ್ಲಿ ಹರಗಿ ಬಿಡುತ್ತಿದ್ದಾರೆ. ಇನ್ನೂ ಕೆಲ ರೈತರು ಎಪಿಎಂಸಿ ಮಾರುಕಟ್ಟೆಗೆ ಈರುಳ್ಳಿ ತಂದರೆ ಅದಕ್ಕೆ ಸೂಕ್ತ ಬೆಲೆ ಸಿಗದ ಕಾರಣ ನಷ್ಟ ಅನುಭವಿಸುತ್ತಿದ್ದಾರೆ. ಇನ್ನೂ ಕೆಲ ರೈತರಂತೂ ಸುಮಾರು 10 ಎಕರೆ ಪ್ರದೇಶದಲ್ಲಿ ಈರುಳ್ಳಿ ಹಾಕಿದ್ದರೂ ಅದಕ್ಕೆ ಸೂಕ್ತ ಬೆಲೆ ಸಿಗದ ಕಾರಣ ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಇನ್ನೂ ಸರ್ಕಾರದಿಂದ ಈರುಳ್ಳಿ ಬೆಳೆದ ರೈತರಿಗೆ ಏನಾದರೂ ಸಹಾಯ ಮಾಡಬೇಕು ಎಂಬುದು ರೈತರ ಒತ್ತಾಯವಾಗಿದೆ.

ಈರುಳ್ಳಿ ಬೆಳೆಗಿಂತ ಅಧಿಕ ಖರ್ಚು: ಇನ್ನೂ ರಾಜ್ಯದಲ್ಲಿ ಅತೀ ಹೆಚ್ಚು ಅಂದರೆ 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಆದರೆ ಇಂದು 1 ಕೆಜಿ ಈರುಳ್ಳಿಗೆ ಐದು ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ದರ ಬಂದು ತಲುಪಿದೆ. ಇದರಿಂದ ಒಬ್ಬ ರೈತ ಒಂದು ಕೆಜಿ ಈರುಳ್ಳಿ ತಗೆಯಲು ಕಡಿಮೆ ಎಂದರೂ ಎಂಟು ರೂಪಾಯಿ ಖರ್ಚಾಗುತ್ತದೆ. ಜೊತೆಗೆ ಕೂಲಿಯಾಳುಗಳ ಸಮಸ್ಯೆ, ವಿದ್ಯುತ್‌ ಸಮಸ್ಯೆ ಹಾಗೂ ನೀರಿನ ಸಮಸ್ಯೆ ಬೇರೆ. ಈ ಹಿನ್ನಲೆಯಲ್ಲಿ ಕನಿಷ್ಠ ಈರುಳ್ಳಿಗೆ ಸಹಿತ 2 ಸಾವಿರ ಬೆಂಬಲ ಬೆಲೆ ಈ ಸರ್ಕಾರ ನಿಗದಿ ಮಾಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ರೈತರು ಹೋರಾಟ ಹಾದಿ ಹಿಡಿಯುವುದು ಅನಿವಾರ್ಯವಾಗುತ್ತದೆ ಎಂದು ಶಾಸಕ ಶಿವಾನಂದ ಪಾಟೀಲ ಎಚ್ಚರಿಕೆಯನ್ನು ನೀಡಿದ್ದಾರೆ.

ಸರ್ಕಾರದಿಂದ ಬೆಂಬಲ ಬೆಲೆ ನೀಡುವಂತೆ ಆಗ್ರಹ: ಒಂದೆಡೆ ಅತೀವೃಷ್ಠಿ, ಇನ್ನೊಂದೆಡೆ ಅನಾವೃಷ್ಟೀಯಿಂದ ವಿಜಯಪುರ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದರೆ ಇದರ ಮಧ್ಯೆ ಈಗ ಈರುಳ್ಳಿ ಬೆಲೆ ಕುಸಿದು ರೈತರು ಸಂಕಷ್ಟಕ್ಕೆ ಈಡಾಗುವಂತಾಗಿದೆ. ಇನ್ನಾದರೂ ಸರ್ಕಾರ ಈ ಕುರಿತು ‌ಮುತುವರ್ಜಿ ವಹಿಸಿ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡಬೇಕು ಎನ್ನುವುದು ಈ ಭಾಗದ ಈರುಳ್ಳಿ ಬೆಳೆಗಾರರ ಒತ್ತಾಯವಾಗಿದೆ. ಒಳ್ಳೆ ರೇಟ್ ಸಿಗುತ್ತೆ ಅಂತ ವಿಜಯಪುರದಿಂದ ಬೆಂಗಳೂರುವರೆಗೆ ಹೋದ್ರು ಸಿಕ್ಕಿದ್ದು ಬಿಡಿಕಾಸು ಮಾತ್ರ. ಅನ್ಯ ರಾಜ್ಯದ ಈರುಳ್ಳಿ ಮುಂದೆ ನಾವು ಬೆಳೆದ ಈರುಳ್ಳಿಗೆ ದರ ಸಿಗುತ್ತಿಲ್ಲ ಅಂತ ರೈತ ಅಳಲು ತೋಡಿಕೊಂಡಿದ್ದಾನೆ.

ಮಗುವಿನಂತೆ ಬೆಳೆಸಿದ್ದ ದ್ರಾಕ್ಷಿ ಬೆಳೆಗೆ ತಪ್ಪು ಔಷಧ ಸಿಂಪಡಣೆ: ಬೆಳೆ ನಾಶಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ರೈತ

ಮಾರುಕಟ್ಟೆಗೆ ಈರುಳ್ಳಿ ಕೊಂಡೊಯ್ದವರಿಗೆ ಕಣ್ಣೀರು: ಇನ್ನು ಬೆಂಗಳೂರು, ಯಶವಂತಪುರ ಮಾರುಕಟ್ಟೆಯಲ್ಲಿ 212 ಕೆಜಿ ಈರುಳ್ಳಿ ಮಾರಿದ ಮತ್ತೋರ್ವ ರೈತನಿಗೆ ಕೇವಲ ಸಾವಿರ ರೂಪಾಯಿ ಸಿಕ್ಕಿದೆ. ಆದರೆ ಪೋರ್ಟರ್ ಶುಲ್ಕ, ಟ್ರಾನ್ಸ್​​ಪೋರ್ಟ್ ಚಾರ್ಜ್, ಹಮಾಲಿ, ದಲಾಲಿ, ರೈತರ ಖರ್ಚು ಸೇರಿದಂತೆ ಇತರೆ ವೆಚ್ಚ ತೆಗೆದರೆ ಅವಿರಿಗೂ ಸಿಗೋದು 10 ರಿಂದ‌ 4 ರೂಪಾಯಿ ಮಾತ್ರ! ಹೀಗೆ ಜಿಲ್ಲೆಯ ಅನೇಕ ರೈತರು ಈರುಳ್ಳಿ ಬೆಳೆದು ಕಣ್ಣೀರು ಸುರಿಸುವಂತಾಗಿದೆ. ಸುತ್ತಮುತ್ತಲಿನ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವುದಿಲ್ಲ ಅಂತ ಬೆಂಗಳೂ

click me!