
ರಾಮನಗರ (ಫೆ.13): ಜಿಲ್ಲಾಡಳಿತದ ವತಿಯಿಂದ ನೀಡಲಾಗುವ ವಿವಿಧ ಸಮಾಜಿಕ ಪಿಂಚಣಿಗೆ ಆಧಾರ್ ಲಿಂಕ್ ಕಡ್ಡಾಯಗೊಳಿಸಿ. ಆಧಾರ್ ಲಿಂಕ್ ಮಾಡದೇ ಇರುವ ಫಲಾನುಭವಿಗಳಿಗೆ ತಿಳಿಸಿ ಶೀಘ್ರವಾಗಿ ಆಧಾರ್ ಲಿಂಕ್ ಮಾಡಿಸುವಂತೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಅವರು, ಆಧಾರ್ ಸೀಡಿಂಗ್ ಮಾಡುವುದರಿಂದ ಫಲಾನುಭವಿಯ ಮರಣ ನಂತರ ಪಿಂಚಣಿಗಳನ್ನು ನಿಲ್ಲಿಸಬಹುದು. ಫಲಾನುಭವಿಗಳು ಸ್ವಯಂ ಪ್ರೇರಿತವಾಗಿ ಆಧಾರ್ ಲಿಂಕ್ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸುವುದು. ನಂತರವು ಆಧಾರ್ ಸೀಡಿಂಗ್ ಮಾಡಿಕೊಳ್ಳದಿದ್ದಲ್ಲಿ ನೋಟಿಸ್ ಜಾರಿ ಮಾಡಿ ತಡೆಹಿಡಿಯಲು ಕ್ರಮವಹಿಸಬೇಕು ಎಂದರು.
ತೆರವುಗೊಳಿಸದಿದ್ದರೆ ಅತಿಕ್ರಮಣ ಸಾಧ್ಯತೆ:
ಕೆರೆ ಅಥವಾ ಸರ್ಕಾರಿ ಜಾಗಗಳ ಒತ್ತುವರಿಯಾಗಿದ್ದಲ್ಲಿ ಅವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಂಡು. ತೆರವುಗೊಳಿಸಿದ ನಂತರ ಸ್ಥಳಗಳು ಸಾರ್ವಜನಿಕ ಉದ್ದೇಶಕ್ಕಾಗಿ ಬೇಕಿದ್ದಲ್ಲಿ ಕ್ರಮವಹಿಸಿ ಅವುಗಳನ್ನು ಹಸ್ತಾಂತರ ಮಾಡಿ. ಇಲ್ಲವಾದಲ್ಲಿ ತೆರವುಗೊಳಿಸಿದ ನಂತರ ಬಹಳ ವರ್ಷ ಖಾಲಿ ಬಿಟ್ಟರೆ ಪುನಃ ಅತಿಕ್ರಮಣವಾಗುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.
ಆನ್‌ಲೈನ್ ಮೂಲಕ ಡ್ರೈವಿಂಗ್ ಲೈಸೆನ್ಸ್ ನವೀಕರಣ,ತಿದ್ದುಪಡಿಗೆ ಆಧಾರ್ ಕಡ್ಡಾಯ!
ಬೇಸಿಗೆ ಕಾಲ ಹತ್ತಿರವಾಗುತ್ತಿದ್ದು, ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆ ಉಂಟಾಗದಅತೆ ಎಚ್ಚರಿಕೆ ವಹಿಸಿ. ಕುಡಿಯುವ ನೀರಿನ ತೊಂದರೆ ಉಂಟಾಗುವ ಗ್ರಾಮಗಳನ್ನು ಪಟ್ಟಿಮಾಡಿಕೊಂಡು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.
ಶೇ.75ರಷ್ಟುಲಸಿಕೆ ನೀಡಿಕೆ:
ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಮಾತನಾಡಿ, ಕೋವಿಡ್-19 ಲಸಿಕೆ ಸಂಬಂಧಿಸಿದಂತೆ ಆರೋಗ್ಯ ಸಿಬ್ಬಂದಿಗಳಿಗೆ ಲಸಿಕೆ ನೀಡಿ ಶೇಕಡ 75 ರಷ್ಟುಸಾಧನೆ ಮಾಡಲಾಗಿದೆ. ಫ್ರಂಟ್ ಲೈನ್ ವರ್ಕರ್‌ಗಳಿಗೆ ಲಸಿಕೆ ನೀಡಲಾಗುತ್ತಿದೆ. ಯಾವುದೇ ರೀತಿಯ ತೊಂದರೆಯಾಗಿರುವುದಿಲ್ಲ ಎಂದು ಹೇಳಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ , ಉಪವಿಭಾಗಾಧಿಕಾರಿ ದಾಕ್ಷಯಿಣಿ, ಮತ್ತಿತರರು ಉಪಸ್ಥಿತರಿದ್ದರು.