ಜೆಡಿಎಸ್ ಮುಖಂಡರಿಗೆ ಭರ್ಜರಿ ಗೆಲುವು ದೊರಕಿದ್ದು ಶಿಸ್ತುಬದ್ಧವಾಗಿ ಆಡಳಿತ ನಡೆಸಿ ಉತ್ತಮ ಬಾಂಧವ್ಯ ಹೊಂದುವಂತೆ ಕರೆ ನೀಡಲಾಗಿದೆ. ಗೆಲುವಿನ ಹಿನ್ನೆಲೆ ಅಭಿನಂದಿಸಲಾಗಿದೆ.
ಚನ್ನರಾಯಪಟ್ಟಣ (ಫೆ.13): ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನುದಾನಕ್ಕೆ ಪೂರಕವಾಗಿ ಕಾರ್ಯಕ್ರಮ ರೂಪಿಸಿ ಸ್ವಚ್ಛತೆ, ಕುಡಿಯುವ ನೀರು, ಕಸ ನಿರ್ವಹಣೆ ಸೇರಿ ಅಗತ್ಯ ಮೂಲಭೂತ ಸೌಲಭ್ಯಗಳೊಂದಿಗೆ ಗ್ರಾಮಗಳ ಅಭಿವೃದ್ಧಿಗೆ ಮುಂದಾಗುವಂತೆ ಶಾಸಕ ಸಿ.ಎನ್.ಬಾಲಕೃಷ್ಣ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೆ ಸೂಚನೆ ನೀಡಿದರು.
ಪಟ್ಟಣದಲ್ಲಿನ ಪ್ರವಾಸಿಮಂದಿರದಲ್ಲಿ ಏರ್ಪಡಿಸಿದ್ದ, ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 32 ಗ್ರಾಮ ಪಂಚಾಯಿತಿಗಳ ಜೆಡಿಎಸ್ ಬೆಂಬಲಿತ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು ಶಿಸ್ತುಬದ್ಧ ವ್ಯವಸ್ಥೆಯೊಂದಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳು ಪಂಚಾಯಿತಿ ಅಧಿಕಾರಿಗಳು, ನೌಕರರು ಮತ್ತು ಸದಸ್ಯರೊಂದಿಗೆ ಉತ್ತಮ ಉತ್ತಮ ಬಾಂಧವ್ಯ ಮತ್ತು ಸಹಕಾರದಿಂದ ಉತ್ತಮ ಆಡಳಿತಕ್ಕೆ ಮುಂದಾಗಬೇಕೆಂದರು.
ಕುಮಾರಸ್ವಾಮಿಗೆ ಬುದ್ಧಿ ಇಲ್ಲಾಂತ ನಂಗೂ ಇಲ್ವಾ?: ಸಿದ್ದರಾಮಯ್ಯ .
ಶ್ರವಣಬೆಳಗೊಳದ ಕ್ಷೇತ್ರ ವ್ಯಾಪ್ತಿಯ 34 ಪಂಚಾಯಿತಿಗಳ ಪೈಕಿ 29 ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯುವುದಾಗಿ ಚುನಾವಣೆ ಪೂರ್ವ ನೀಡಿದ ಹೇಳಿಕೆಗಳನ್ನು ಕ್ಷೇತ್ರದ ಮತದಾರ ಹುಸಿಗೊಳಿಸದೇ 32 ಪಂಚಾಯಿತಿಗಳಲ್ಲಿ ಪಕ್ಷದ ಬೆಂಬಲಿತರು ಆಯ್ಕೆಯಾಗಿ 30 ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯುವಂತಾಗಿದೆ, ಮೀಸಲಾತಿ ವ್ಯತ್ಯಯದಲ್ಲಿ 2 ಪಂಚಾಯಿತಿಗಳು ಸೇರಿ ಇನ್ನೀತರೆ ಮತ್ತೀಘಟ್ಟಮತ್ತು ಜನಿವಾರ ಪಂಚಾಯಿತಿಗಳೆರೆಡು ನಮ್ಮ ಕೈಬಿಟ್ಟಿವೆ. ಶೇ.73ರಷ್ಟು ಜನ ನಮ್ಮನ್ನು ಬೆಂಬಲಿತಸಿದ್ದು, ಅವರ ವಿಶ್ವಾಸ ಉಳಿಸಿಕೊಳ್ಳವು ಜವಬ್ಧಾರಿ ನಮ್ಮ ಮತ್ತು ನಿಮ್ಮಗಳ ಮೇಲಿದೆ ಎಂದರು.
ಸ್ವಚ್ಛಭಾರತ ಯೋಜನೆಯಡಿ ಗ್ರಾ.ಪಂಚಾಯಿತಿಗಳು ಕಸನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಪ್ರತಿ ಪಂಚಾಯಿತಿಗಳಲ್ಲೂ ಕಸ ವಿಲೇವಾರಿಗಾಗಿ ಜಾಗ ಮೀಸಲಿರಿಸುವಂತೆ ಸೂಚಿಸಲಾಗಿದೆ. ಈಗಾಗಲೇ ಕೆಲ ಪಂಚಾಯಿತಿಗಳಲ್ಲಿ ಜಾಗ ಮೀಸಲಿರಿಸಲಾಗಿದೆ. ಮೊದಲಿಗೆ ಹೋಬಳಿ ಕೇಂದ್ರಗಳಲ್ಲಿ ಉತ್ಪತ್ತಿಯಾಗುವ ಕಾಸವನ್ನು ಹಸಿ,ಒಣ ಕಸವೆಂದು ಬೇರ್ಪಡಿಸುವ ಕೆಲಸವಾಗಲಿದೆ. ಈ ಮೂಲಕ ಸ್ವಚ್ಛ ಪರಿಸರ ಮತ್ತು ಉತ್ತಮ ಅರೋಗ್ಯಕ್ಕೆ ಕಾರಣವಾಗಲಿದೆ ಎಂದರು.