Vijayapura: ಉಳುಮೆ ಮಾಡುತ್ತಿದ್ದ ಟ್ರ್ಯಾಕ್ಟರ್‌ಗೆ ಸಿಲುಕಿ ಯುವಕ ಸಾವು

By Sathish Kumar KHFirst Published Jan 9, 2023, 6:07 PM IST
Highlights

ತೋಟದಲ್ಲಿ ಉಳಿಮೆ ಮಾಡುವಾಗ ಟ್ಯಾಕ್ಟರ್‌ನ ರೂಟರ್‌ ಕೆಳಗೆ ಬಿದ್ದು, ಯುವಕನೊಬ್ಬ ಸಾವನ್ನಪ್ಪಿದ್ದ ದಾರುಣ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದಲ್ಲಿ ಇಂದು ನಡೆದಿದೆ. 

ವಿಜಯಪುರ (ಜ.09): ತೋಟದಲ್ಲಿ ಉಳಿಮೆ ಮಾಡುವಾಗ ಟ್ಯಾಕ್ಟರ್‌ನ ರೂಟರ್‌ ಕೆಳಗೆ ಬಿದ್ದು, ಯುವಕನೊಬ್ಬ ಸಾವನ್ನಪ್ಪಿದ್ದ ದಾರುಣ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದಲ್ಲಿ ಇಂದು ನಡೆದಿದೆ. 

ಇನ್ನು  ಶಿವಾನಂದ‌ ಸಂಗಪ್ಪ ಧನಿಂಗ (29) ಮೃತಪಟ್ಟಿರುವ ದುರ್ದೈವಿ ಎಂದು ಗುರುತಿಸಲಾಗಿದೆ. ಮಧ್ಯಾಹ್ನದ ವೇಳೆ ತೋಟದಲ್ಲಿ ತೋಟದಲ್ಲಿ ರೂಟರ್ ಹೊಡೆಯುತ್ತಿರುವಾಗ ಕಲ್ಲು ಸಿಲುಕಿಕೊಂಡು ನಿಯಂತ್ರಣ ತಪ್ಪಿದ ಯುವಕ ರೂಟರ್‌ ಅಡಿ ಸಿಲುಕಿದ್ದಾನೆ. ಇನ್ನು ಟ್ರ್ಯಾಕ್ಟರ್‌ ರೂಟರ್‌ ತಿರುಗುತ್ತಿದ್ದ ಕಾರಣ ಅದು ಯುವಕನನ್ನೂ ಕೂಡ ಕ್ಷಣಾರ್ಧದಲ್ಲಿ ಮುದುಡಿ ಭೂಮಿಯೊಳಗಿಂದ ಮೇಲಕ್ಕೆ ತಂದಿದೆ. ಆದರೆ, ಕೈ-ಕಾಲು ಎದೆ ಭಾಗ ಎಲ್ಲವೂ ರೂಟರ್‌ನ ಇತರೆ ಭಾಗಗಳಲ್ಲಿ ಸಿಲುಕಿಕೊಂಡು ದೇಹ ನಜ್ಜುಗುಜ್ಜಾಗಿದೆ. ನಂತರ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಟ್ರ್ಯಾಕ್ಟರ್‌ ಬಳಿ ಬಂದು ನೋಡಿದಾದ ಯುವಕ ಸಾವನ್ನಪ್ಪಿರುವುದು ತಿಳಿದುಬಂದಿದೆ. 

ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದ್ದ ಟ್ರ್ಯಾಕ್ಟರ್‌ ಪಲ್ಟಿ; ಒರ್ವ ಸಾವು, 40 ವಿದ್ಯಾರ್ಥಿಗಳಿಗೆ ಗಾಯ

ಮಣ್ಣು ತಿರುಗಿಸುವಂತೆ ದೇಹವನ್ನೂ ತಿರುಗಿಸಿದ ರೂಟರ್: ಇನ್ನು ಯುವಕ ರೂಟರ್‌ನ ಅಡಿಯಲ್ಲಿ ಸಿಲುಕಿಕೊಂಡಿದ್ದು, ಮಣ್ಣನ್ನು ತಿರುಗಿಸಿ ಹಾಕುವಂತೆ ಯುವಕನ ದೇಹವನ್ನು ವಿಚಿತ್ರವಾಗಿ ತಿರುಗಿಸಿದೆ. ಆದ್ದರಿಂದ ರೂಟರ್‌ನಿಂದ ಯುವಕನ ದೇಹವನ್ನು ಬಿಡಿಸಿಕೊಂಡು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ, ಯಂತ್ರೋಪಕರಣವನ್ನು ಬಳಸುವ ಮುನ್ನ ಸೂಕ್ತ ಜ್ಞಾನವಿರಬೇಕು. ರೈತರು ಹಾಗೂ ಗ್ರಾಮೀಣ ಭಾಗದ ರೈತರು ಟ್ರ್ಯಾಕ್ಟರ್‌ ಉಪಯೋಗಿಸುವ ಮುನ್ನ ಸ್ವಲ್ಪ ಜ್ಞಾನವನ್ನೂ ಪಡೆದುಕೊಂಡಿರಬೇಕು. ಇಲ್ಲವಾದಲ್ಲಿ ಜೀವಕ್ಕೆ ಹಾನಿಯಾಗುವಂತಹ ಅವಘಡಗಳು ಸಂಭವಿಸುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.

ಮುಗಿಲು ಮುಟ್ಟಿದ ಆಕ್ರಂದನ: ಇನ್ನು ತೋಟದಲ್ಲಿ ಕೆಲಸ ಇದೆ ಎಂದು ರೂಟರ್‌ ಹಾಕಿಕೊಂಡು ಮನೆಯಿಂದ ಹೊರಟ ಮಗ ಹೆಣವಾಗಿದ್ದಾನೆ. ಯಾವುದೇ ಕೆಟ್ಟ ಸಹವಾಸ ಇರಲಿಲ್ಲ. ಬೇರೊಬ್ಬರೊಂದಿಗೆ ದ್ವೇಷವೂ ಇರಲಿಲ್ಲ. ತಮ್ಮ ಜೀವನ ಮಾಡಿಕೊಂಡು ಹೋಗುತ್ತಿದ್ದ ಯುವಕನಿಗೆ ಸಾವು ಬಂದೆರಗಿದೆ. ದುಡಿಯುತ್ತಿದ್ದ ಮಗನನ್ನು ಕಳೆದುಕೊಂಡಿದ್ದು, ಭವಿಷ್ಯದಲ್ಲಿ ಕುಟುಂಬಕ್ಕೆ ಆಸರೆ ಆಗುವವರೇ ಇಲ್ಲದಂತಾಗಿದೆ ಎಂದು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ಇಡೀ ಗ್ರಾಮದಲ್ಲಿ ಘಟನೆಯಿಂದಾಗಿ ನೀರವ ಮೌನ ಆವರಿಸಿತ್ತು. ಇನ್ನು ಶಿವಾನಂದನ ಸಾವು ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಟ್ರ್ಯಾಕ್ಟರ್‌ ಪಲ್ಟಿ: ಗಾಯಗೊಂಡ ವಿದ್ಯಾರ್ಥಿಗಳಿಗೆ ಬಿಜೆಪಿ ಎಂಎಲ್‌ಸಿ ಸಂಕನೂರು ಧೈರ್ಯ

ಮುಂಡಗೋಡ (ಜ.9) : ಪ್ರವಾಸಕ್ಕೆ ತೆರಳಿ ವಾಪಸಾಗುವಾಗ ಚಾಲಕನ ನಿಯಂತ್ರಣ ತಪ್ಪಿ ಟ್ರಾಕ್ಟರ್‌ ಪಲ್ಟಿಯಾಗಿ ಓರ್ವ ವಿದ್ಯಾರ್ಥಿನಿ ಮೃತಪಟ್ಟಿದ್ದು, ಸುಮಾರು 40 ವಿದ್ಯಾರ್ಥಿಗಳು ಗಾಯಗೊಂಡ ಘಟನೆ ತಾಲೂಕಿನ ಮಳಗಿ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿತ್ತು. ಧಾರವಾಡ ತಾಲೂಕಿನ ಕಲ್ಲಹಕ್ಕಲ ವೀರಾಪುರ(Kallahakkala veerapur) ಗ್ರಾಮದ ಕಾವ್ಯಾ ಬರಮಣ್ಣ ಬ್ಯಾಡಗಿ(Baramanna byadagi) (17) ಮೃತಪಟ್ಟವಿದ್ಯಾರ್ಥಿನಿ. ತಾಲೂಕಿನ ಮಳಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಒಂದು ಟ್ರಾಕ್ಟರ್‌ನಲ್ಲಿ 20 ಹಾಗೂ ಇನ್ನೊಂದು ಟ್ರಾಕ್ಟರ್‌ನಲ್ಲಿ 40 ವಿದ್ಯಾರ್ಥಿಗಳು ಪಕ್ಕದ ಕೊಳಗಿ ಗ್ರಾಮಕ್ಕೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿಕೊಂಡು ಬರುವ ವೇಳೆ ಅತಿಥಿ ಉಪನ್ಯಾಸಕರು ಟ್ರಾಕ್ಟರ್‌ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಅತಿವೇಗವಾಗಿ ಟ್ರಾಕ್ಟರ್‌ ಚಲಾಯಿಸಿದರಿಂದ ನಿಯಂತ್ರಣ ತಪ್ಪಿ ಟ್ರಾಕ್ಟರ್‌ ಪಲ್ಟಿಯಾಗಿತ್ತು.

click me!