ವಿಜಯಪುರ ತಾಂಡಾಗಳಲ್ಲಿ ವಿಶಿಷ್ಟ ಹಬ್ಬ, ವರ್ಷಕ್ಕೊಮ್ಮೆ ಮಾತ್ರ ಗಂಡು ಮಕ್ಕಳಿಗೆ ನಾಮಕರಣ!

By Suvarna NewsFirst Published Mar 12, 2023, 10:35 PM IST
Highlights

ಬಂಜಾರಾ, ಗೋರ್ಮಾಟಿ, ಗೋರ್ ಸಮುದಾಯ ಎಂದು ಕರೆಯಲ್ಪಡುವ ಲಂಬಾಣಿ ಸಮುದಾಯದಲ್ಲಿ ಆಚರಿಸಲಾಗುವ ಪ್ರತಿಯೊಂದು ಆಚರಣೆಗಳು ತುಂಬಾ ವಿಶಿಷ್ಟ. ಗುಳೆ ಹೊರಟವರು ಹೋಳಿ ಹುಣ್ಣಿಮೆಯ ದಿನ ಮರಳಿ ಬರುತ್ತಾರೆ. ಹೋಳಿ ಹಬ್ಬದ ಸಮಯದಲ್ಲೆ ಗಂಡು ಮಗುವಿನ ನಾಮಕರಣ ಮಾಡುತ್ತಾರೆ.

ವರದಿ: ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌

ವಿಜಯಪುರ (ಮಾ:12): ಬಂಜಾರಾ, ಗೋರ್ಮಾಟಿ, ಗೋರ್ ಸಮುದಾಯ ಎಂದು ಕರೆಯಲ್ಪಡುವ ಲಂಬಾಣಿ ಸಮುದಾಯದಲ್ಲಿ ಆಚರಿಸಲಾಗುವ ಪ್ರತಿಯೊಂದು ಆಚರಣೆಗಳು ತುಂಬಾ ವಿಶಿಷ್ಟ. ಈ ಜಿಲ್ಲೆಯಲ್ಲಿ ಬಹುತೇಕ ತಾಂಡಾದ ಜನತೆ ಇಂದು ಉದ್ಯೋಗ ಅರಸಿ‌ ಅನ್ಯರಾಜ್ಯಗಳಿಗೆ  ಗುಳೇ ಹೋಗುತ್ತಾರೆ. ಆದರೆ ಹೋಳಿ ಬಣ್ಣದ ಹಬ್ಬ ಬಂತೆಂದರೆ ಸಾಕು ಇವರಿಗೆ ಎಲ್ಲಿಲ್ಲದ ಸಂಭ್ರಮ. ತಾವು ಎಲ್ಲಿಯಾದರೂ ಕೆಲಸಕ್ಕೆಂದು ಉದ್ಯೋಗ ಅರಸಿ ಹೋಗಿದ್ದರೂ ಸಹಿತ ಹೋಳಿ ಹುಣ್ಣಿಮೆಯ ದಿನ ಮರಳಿ ತಮ್ಮ ತಮ್ಮ ತಾಂಡಾಗಳಿಗೆ ಬಂದು ಸಡಗರ ಸಂಭ್ರಮದಿಂದ ಹೋಳಿ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಇನ್ನೂ ಹೋಳಿ ಹುಣ್ಣಿಮೆಯ ದಿನ ನಸುಕಿನ‌ ಜಾವದಲ್ಲಿ ಪುರುಷರು ಕಾಮದಹನ ಮಾಡಿದರೆ ಸಂಜೆ ಹೊತ್ತಿನಲ್ಲಿ‌ ಇನ್ನೊಮ್ಮೆ ಕಾಮದಹನ ಮಾಡಿ ಅಲ್ಲಿ ಮಹಿಳೆಯರು ‌ಪಾಲ್ಗೊಳ್ಳುತ್ತಾರೆ. 

Latest Videos

ಹೋಳಿಯ ಐದನೇ ದಿನಕ್ಕೆ ರಂಗ ಪಂಚಮಿ!
ಬಂಜಾರಾ ಸಮುದಾಯದವರ ಇನ್ನೊಂದು ವಿಶೇಷ ಅಂದರೆ ಹೊಳಿ ಹುಣ್ಣಿಮೆಯಾದ ಬಳಿಕ 5 ದಿನಕ್ಕೆ ರಂಗ ಪಂಚಮಿ ನಡೆಯುತ್ತೆ. ರಂಗ ಪಂಚಮಿಯಂದು ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷ ರೀತಿಯಲ್ಲಿ ಬಣ್ಣದಾಟ ನಡೆಯುತ್ತೆ. ಹೋಳಿಯ ಕಾಮದಹನ ಮರುದಿನ ಹಾಗೂ ಐದನೇ ದಿನ ರಂಗ ಪಂಚಮಿಯಂದು ಬಣ್ಣದಾಟ ಜೋರಾಗಿರುತ್ತೆ. ಬಹು ಭಾಗಗಳಲ್ಲಿ ರಂಗಪಂಚಮಿಯಂದೆ ಬಣ್ಣದೋಕುಳಿ ನಡೆಯುತ್ತೆ. ಈ ನಡುವೆ ಬಂಜಾರಾ ಸಮುದಾಯದಲ್ಲಿ ನಡೆಯೋ ಅದೊಂದು ಆಚರಣೆ ಎಲ್ಲರ ಗಮನ ಸೆಳೆಯುತ್ತೆ..

ಇಲ್ಲಿ ವರ್ಷಕ್ಕೊಮ್ಮೆ ಮಾತ್ರ ಮಕ್ಕಳಿಗೆ ನಾಮಕರಣ!
ಯಾರ ಮನೆಯಲ್ಲಾದರೂ ಗಂಡು ಮಗು‌ ಜನಿಸಿದರೆ ಆ ಮಗುವಿಗೆ ಅವರು ನಾಮಕರಣ ಮಾಡುವುಲ್ಲ. ಆ ಮಗುವಿನ ನಾಮಕರಣ ಮಾಡಲು ವರ್ಷಗಟ್ಟಲೆ ಕಾದು ಹೋಳಿ ಹಬ್ಬದ ಸಮಯದಲ್ಲೆ ಗಂಡು ಮಗುವಿನ ನಾಮಕರಣ ಮಾಡುತ್ತಾರೆ. ಇನ್ನೂ‌ ಇಡೀ‌ ತಾಂಡಾದಲ್ಲಿ‌ ಯಾರ್ಯಾರ ಮನೆಯಲ್ಲಿ‌ ಗಂಡು ಮಗು ಜನಿಸಿದೆಯೊ ಅವರ ಮನೆಗೆ ತಾಂಡಾದ ಮುಖಂಡರು ‌ಸೇರಿದಂತೆ ಮಹಿಳೆಯರು ಸೇರಿಕೊಂಡು ಆ ಮಗುವಿನ ಮನೆಗೆ ಹೋಗಿ ಪುರುಷರು ಮಹಿಳೆಯರ ಎಲ್ಲರೂ ಸೇರಿ ನೃತ್ಯವನ್ನು ಮಾಡುತ್ತಾರೆ. ಬಳಿಕ ಎಲ್ಲರೂ ಒಟ್ಟುಗೂಡಿ‌ ಆ ಮಗುವಿನ ನಾಮಕರಣ ಮಾಡುತ್ತಾರೆ.

ಹೋಳಿ ಬಣ್ಣ ಹಚ್ಚಿದ್ದಕ್ಕೆ ಹಿಂದು ಸ್ನೇಹಿತನಿಗೆ ಬೆಂಕಿ ಇಟ್ಟ ಮುಸ್ಲಿಂ ವ್ಯಕ್ತಿ!

ನಾಮಕರಣ ದಿನ ಪುರಿ ಭೋಜನ
ಹೀಗೆ ತಾಂಡಾದಲ್ಲಿ ಎಷ್ಟೇ ಜನರ ಮನೆಯಲ್ಲಿ ಗಂಡು ಮಗು ಜನಿಸಿದ್ದರೂ ಅವರ ಮನೆಗೆಲ್ಲ ಹೋಗಿ ಮಗುವಿನ ನಾಮಕರಣ ಮಾಡುತ್ತಾರೆ. ಮಗುವಿನ‌ ನಾಮಕರಣದ ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಪುರಿ ಸೇರಿದಂತೆ ಬಗೆ ಬಗೆಯ ತಿನಿಸುಗಳನ್ನು ನೀಡಲಾಗುತ್ತದೆ. ಇನ್ನೂ ಅವರು ಎಷ್ಟೇ ಬಡವರಾಗಿದ್ದರೂ ಸಹಿತ ಮಗುವಿನ ನಾಮಕರಣ ಕಾರ್ಯಕ್ರಮ ಮಾತ್ರ ಅದ್ದೂರಿಯಾಗಿ ಮಾಡುತ್ತಾರೆ. ಪುರಿ ಎಂದರೆ ಸಾಮಾನ್ಯವಾಗಿ ಮನೆಗಳಲ್ಲಿ- ಹೊಟೇಲ್‌ ಗಳಲ್ಲಿ  ಮಾಡಲಾಗುವ ಪುರಿ ಅಲ್ಲ. ತಾಂಡಾಗಳಲ್ಲಿ ಈ ವೇಳೆ ಮಾಡುವ ಪುರಿ ಅದೊಂದು ಸಿಹಿ ಖಾದ್ಯವಾಗಿರುತ್ತೆ ಎನ್ನುವುದು ವಿಶೇಷ.

ಹೋಳಿ ಸಂಭ್ರಮದ ನೆಪದಲ್ಲಿ ಜಪಾನ್ ಮಹಿಳೆಗೆ ಕಿರುಕುಳ, ದೆಹಲಿ ಕಿಡಿಗೇಡಿಗಳ ವರ್ತನೆಗೆ ತಲೆತಗ್ಗಿಸಿದ ಭಾರತ!

ಹೆಸರಿಡುವ ದಿನ ಎಲ್ಲೆಇದ್ರು ತಾಂಡಾಗೆ ಬರಲೇ ಬೇಕು!
ನೌಕರಿ, ವಲಸೆ ಹೋದ ತಾಂಡಾ ನಿವಾಸಿಗಳು ಪ್ರತಿ ವರ್ಷ ತಾಂಡಾಗೆ ಬಂದು ಹುಟ್ಟಿದ ಮಕ್ಕಳಿಗೆ ನಾಮಕರಣ ಮಾಡಿಕೊಂಡು ಹೋಗೋದು ವಿಶೇಷ. ಈ ದಿನ ಬಂಜಾರಾ ಸಮುದಾಯದ ಕುಟುಂಬಗಳು ದೇಶದ ಯಾವುದೆ ಮೂಲೆಯಲ್ಲಿದ್ದರು ತಮ್ಮ ತಾಂಡಾಗಳಿಗೆ ವಾಪಾಸ್‌ ಬರಲೇ ಬೇಕು. ತಮ್ಮ ಮಕ್ಕಳಿಗೆ ನಾಮಕರಣ ಆಗಿರದೇ ಹೋಗಿದ್ದರೇ ಇಲ್ಲಿ ಬಂದು ನಾಮಕರಣ ಮಾಡಿಸಿಕೊಂಡು ಹೋಗಲೇ ಬೇಕು. ಇಂಥ ಅಲಿಖಿತ ನಿಮಯ ಬಂಜಾರಾ ತಾಂಡಾಗಳಲ್ಲಿ ಇದೆ. ಇಂಥ ಅಧುನಿಕ ಕಾಲದಲ್ಲು ಲಂಬಾಣಿ ತಾಂಡಾಗಳಲ್ಲಿ ವೈಶಿಷ್ಟ್ಯ ಪೂರ್ಣ ಆಚರಣೆಗಳಿರೋದು ವಿಶೇಷವೇ ಸರಿ.

click me!