ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣಕ್ಕಾಗಿ ಪಡೆದ ಭೂ ಸ್ವಾಧೀನದ ಪರಿಹಾರವನ್ನು ದುರುಪಯೋಗ ಮಾಡಿಕೊಂಡು ತಮ್ಮನ್ನು ವಂಚಿಸಿದ್ದಾರೆ ಎಂದು ಐವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಗ್ರಾಮದ ದೇವಪ್ಪ ಭರಮಣ್ಣ ಘಾಡಿ.
ಖಾನಾಪುರ(ಮಾ.12): ತಾಲೂಕಿನಲ್ಲಿ ಹಾದುಹೋದ ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣಕ್ಕಾಗಿ ಪಡೆದ ಭೂ ಸ್ವಾಧೀನದ ಪರಿಹಾರವನ್ನು ದುರುಪಯೋಗ ಮಾಡಿಕೊಂಡು ತಮ್ಮನ್ನು ವಂಚಿಸಿದ್ದಾರೆ ಎಂದು ತಾಲೂಕಿನ ಕರಂಬಳ ಗ್ರಾಮದ ದೇವಪ್ಪ ಭರಮಣ್ಣ ಘಾಡಿ ಒಟ್ಟು ಐವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕರಂಬಳ ಗ್ರಾಮದ ರಿ.ಸ.25/1ರಲ್ಲಿ ತಮ್ಮ ಹೆಸರಿನಲ್ಲಿ 3 ಎಕರೆ 21 ಗುಂಟೆ ಕೃಷಿ ಜಮೀನು ಇದ್ದು, ಈ ಜಮೀನಿನ ಪೈಕಿ 8 ಗುಂಟೆಯಷ್ಟುಜಮೀನನ್ನು ಹೆದ್ದಾರಿ ಅಗಲೀಕರಣ ಕಾರ್ಯಕ್ಕಾಗಿ ಸರ್ಕಾರ ಕೆಲ ತಿಂಗಳ ಹಿಂದೆ ತನ್ನ ವಶಕ್ಕೆ ಪಡೆದಿತ್ತು. ಇದಕ್ಕೆ ಪರಿಹಾರದ ರೂಪದಲ್ಲಿ ಸರ್ಕಾರ ಕಳೆದ 2020ರ ಜುಲೈ ತಿಂಗಳಲ್ಲಿ ತಮ್ಮ ಖಾತೆಗೆ .62,52,045 ಹಣವನ್ನು ಜಮಾ ಮಾಡಿತ್ತು. ಈ ಮಾಹಿತಿ ತಿಳಿದ ಕೂಡಲೇ ತಮ್ಮ ಸಹೋದರ ರುದ್ರಪ್ಪ ಘಾಡಿ ಇವರ ಪುತ್ರ, ಪಟ್ಟಣದ ಗಾಂಧಿನಗರದ ನಿವಾಸಿ ಈಶ್ವರ ರುದ್ರಪ್ಪ ಘಾಡಿ, ಕರಂಬಳ ಗ್ರಾಮದ ತಮ್ಮ ಸಂಬಂಧಿ ತೇಜಶ್ವಿನಿ ಅಮಿತ ಘಾಡಿ ಇವರಿಬ್ಬರೂ ಸೇರಿ ತಮಗೆ ಗೊತ್ತಾಗದ ಹಾಗೆ ಬೆಳಗಾವಿಯ ಖಾಸಗಿ ಬ್ಯಾಂಕ್‌ನಲ್ಲಿ ತಮ್ಮ ಹೆಸರಿನಲ್ಲಿ ಖಾತೆ ತೆಗೆದು ಚೆಕ್ ಪುಸ್ತಕ ಪಡೆದಿದ್ದಾರೆ. ತಮಗೆ ಸುಳ್ಳು ಹೇಳಿ ಖಾಲಿ ಚೆಕ್ ಮೇಲೆ ತಮ್ಮ ಸಹಿ ಪಡೆದು .24,61,250 ವಂಚಿಸಿದ್ದಾರೆ. ಈ ವಂಚನೆಯಲ್ಲಿ ಬೆಳಗಾವಿಯ ಧನ್ಯಕುಮಾರ ಪಾಟೀಲ, ಅಶೋಕ ಪೂಜೇರಿ, ಬಾಹುಬಲಿ ಪಾಟೀಲ ಅವರು ಭಾಗಿಯಾಗಿದ್ದಾರೆ ಎಂದು ದೇವಪ್ಪ ಘಾಡಿ ದೂರಿನಲ್ಲಿ ತಿಳಿಸಿದ್ದಾರೆ.
undefined
ಬೆಂಗಳೂರು - ಮೈಸೂರು ಹೆದ್ದಾರಿ ಉದ್ಘಾಟನೆಗಿಲ್ಲದ ಆಹ್ವಾನ, ಮೋದಿಗೆ ಧನ್ಯವಾದ ಅರ್ಪಿಸಿದ ಡಿಕೆ ಸುರೇಶ್!
ಕರಂಬಳದ ರಿ.ಸ.25ರಲ್ಲಿ ನಾನೂ ಸೇರಿದಂತೆ ಹಲವು ಜನರ ಹೆಸರಿನಲ್ಲಿ ಜಂಟಿಯಾಗಿ ಕೃಷಿ ಭೂಮಿ ಇದೆ. ಆದರೆ, ಒಟ್ಟು ಜಮೀನಿನ ಪೈಕಿ ಹೆದ್ದಾರಿಗಾಗಿ ಗುರುತಿಸಿ ಸರ್ಕಾರ ವಶಪಡಿಸಿಕೊಂಡ 8 ಗುಂಟೆಯಷ್ಟುಜಮೀನನ್ನು ಕಳೆದ ಹಲವು ವರ್ಷಗಳಿಂದ ನಾನು ಸಾಗುವಳಿ ಮಾಡುತ್ತ ಬಂದಿದ್ದೇನೆ. ಸರ್ಕಾರ ಈ ಜಮೀನಿಗೆ ಪ್ರತಿಯಾಗಿ ಉತಾರದಲ್ಲಿದ್ದ ಎಲ್ಲರ ಹೆಸರಿನಲ್ಲಿ ಪರಿಹಾರ ಮಂಜೂರು ಮಾಡಿತ್ತು. ಆದರೆ, ಸರ್ಕಾರ ಸಾಗುವಳಿ ಮಾಡುವ ರೈತರಿಗೆ ಮಾತ್ರ ಪರಿಹಾರ ನೀಡದೇ ಉತಾರದಲ್ಲಿದ್ದ ಎಲ್ಲರ ಹೆಸರಿಗೆ ಪರಿಹಾರ ಮಂಜೂರು ಮಾಡಿದ್ದರಿಂದ ಪರಿಹಾರ ಧನದ ಹಂಚಿಕೆಯಲ್ಲಿ ಗೊಂದಲುಂಟಾಗಿದೆ ಅಂತ ಕರಂಬಳ ಗ್ರಾಮದ ರೈತ ರುದ್ರಪ್ಪ ಘಾಡಿ ತಿಳಿಸಿದ್ದಾರೆ.