ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದೇಗುಲಕ್ಕೆ 'ನಿರಂಜನಾ' ಹೆಸರಿನ‌ ಹೊಸ ಅಥಿತಿ: ಇದು ಭಾರತದ ಮೊದಲ ತಾಂತ್ರಿಕ ಆನೆ

By Govindaraj SFirst Published Sep 12, 2024, 10:04 PM IST
Highlights

ಕೂಪಾ (CUPA) ಮತ್ತು ಪ್ರಾಣಿಗಳ ಸೂಕ್ತ ಉಲ್ಲೇಖದ ಪರಿವಾರ (PETA) ಇಂಡಿಯಾ ಸಂಘಟನೆಗಳು ಇಂದು "ನಿರಂಜನಾ" ಎಂಬ ಹೆಸರಿನ ಆನೆಯನ್ನು ದೇವಾಲಯಕ್ಕೆ ನೀಡಲಾಗಿದೆ. 

ತುಮಕೂರು (ಸೆ.12): ತಾಂತ್ರಿಕ ಆನೆಯನ್ನು ಕುಣಿಗಲ್ ತಾಲೂಕಿನ ಯಡಿಯೂರಿನಲ್ಲಿರುವ  ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ತಾಂತ್ರಿಕ ಆನೆಯನ್ನು ವಿವಿಧ ಸಂಘಟನೆಗಳು ಕೊಡುಗೆಯಾಗಿ ನೀಡಿವೆ.

ಕೂಪಾ (CUPA) ಮತ್ತು ಪ್ರಾಣಿಗಳ ಸೂಕ್ತ ಉಲ್ಲೇಖದ ಪರಿವಾರ (PETA) ಇಂಡಿಯಾ ಸಂಘಟನೆಗಳು ಇಂದು "ನಿರಂಜನಾ" ಎಂಬ ಹೆಸರಿನ ಆನೆಯನ್ನು ದೇವಾಲಯಕ್ಕೆ ನೀಡಲಾಗಿದೆ. 3 ಮೀಟರ್ ಉದ್ದದ ಮತ್ತು 800 ಕಿಲೋಗ್ರಾಂ ತೂಕವಿರುವ ಇದು ನಿರ್ಜೀವ ಆನೆಯಾಗಿದ್ದು, ಥೇಟ್ ನೈಜ್ಯ ಆನೆಯನ್ನೇ ಹೊಲುತ್ತದೆ. ಜೊತೆಗೆ ಆನೆಯಂತೆ ಚಲನೆಯನ್ನು ಹೊಂದಿರುವ ನಿರಂಜನ ಭಕ್ತರ ಆಕರ್ಷಣೆಯಾಗಿದೆ. 

Latest Videos

ಬೆಂಗಳೂರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಪಕ್ಕದಲ್ಲಿ ಕಾಣಿಸಿಕೊಂಡ ಅಪರೂಪದ ಎರಡು ತಲೆ ಹಾವು!

ದೇವಾಲಯಗಳು  ನಿಜವಾದ ಆನೆಗಳನ್ನು ಬಳಸುವುದು ಎಂಬ ಸಂದೇಶ ಸಾರಲು, ಈ ಪ್ರಯತ್ನ ನಡೆಸಲಾಗಿದೆ.   ಕರ್ನಾಟಕದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ಕೊಡುಗೆ ಇಲಾಖೆ ಒಪ್ಪಿಗೆಯೊಂದಿಗೆ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿರುವ  ಮೊದಲ ತಾಂತ್ರಿಕ ಆನೆಯಾಗಿದೆ. ನಟಿ ಸಂಯುಕ್ತ ಹೊರನಾಡು , CUPA ಮತ್ತು PETA ಇಂಡಿಯಾದಿಂದ ಜಂಟಿಯಾ ಈ ಆನೆ ನೀಡಲಾಗಿದೆ.

click me!