ಕಾಡಬಾರದು ತಾಯಿ ಇಲ್ಲದ ನೋವು: ಮೇಣದ ಮೂರ್ತಿಯಲ್ಲಿ ಅಮ್ಮನನ್ನ ಜೀವಂತವಾಗಿರಿಸಿದ ಪುತ್ರ!

By Govindaraj S  |  First Published Jun 23, 2022, 5:25 AM IST

* ಬೆಂಗಳೂರಿನಲ್ಲೊಂದು ತಾಯಿ-ಮಗನ ಬಾಂಧವ್ಯ ಮೆರೆದ ಕಥೆ
* ಮೃತ ತಾಯಿಯ ಮೇಣದ ಮೂರ್ತಿ ಮಾಡಿಸಿದ ಪುತ್ರ
* ಬರೋಬ್ಬರಿ 11 ಲಕ್ಷ ಖರ್ಚು ಮಾಡಿ ಮೂರ್ತಿ ಮಾಡಿಸಿರುವ ಪುತ್ರ


ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು (ಜೂ.23): ಮುತ್ತು ಕೊಡುವವಳು ಬಂದಾಗ ತುತ್ತು ಕೊಟ್ಟವಳ ಮರಿಬೇಡ ಅನ್ನೋದು ಮಾತು. ಆದ್ರೆ ಈ ಕಲಿಯುಗದಲ್ಲಿ ಹೆತ್ತವರು ಯಾರಿಗೆ ಬೇಕು ಹೇಳಿ. ವಯಸ್ಸಾದ ಅಪ್ಪ ಅಮ್ಮನ್ನ ಬೀದಿಗೆ ಬಿಡುವವರೇ ಜಾಸ್ತಿ. ಇಂಥಾ ಕಾಲದಲ್ಲಿ ಬೆಂಗಳೂರಿನಲ್ಲೊಬ್ಬ ಮಾದರಿ ಪುತ್ರ ಇದ್ದಾರೆ. ಇವ್ರ ಜೀವನವೇ ಜನ್ಮ ಕೊಟ್ಟ ತಾಯಿಗೆ ಮೀಸಲಿಟ್ಟಿದ್ದಾರೆ. ಮೇಲಿನ ಚಿತ್ರದಲ್ಲಿ ಕಾಣ್ತಿರುವ ವಯಸ್ಸಾದ ಅಜ್ಜಿಯ ಮೂರ್ತಿ ಮನೋರಮಾ ಅವರದ್ದು. ಈ ಮಹಾತಾಯಿ ಈಗ ಬದುಕಿಲ್ಲ. ಹೀಗೆ ಕುಳಿತಿರೋ ರೀತಿ ಕಾಣ್ತಿರೋದು ಅವರ ಮೇಣದ ಮೂರ್ತಿ ರೂಪ ಅಷ್ಟೆ. ಬೆಂಗಳೂರಿನ ಶಂಕರ ಪುರಂನಿವಾಸಿ ವೆಂಕಟೇಶ್ ತಮ್ಮ ತಾಯಿಯ‌ ನೆನಪಿಗಾಗಿ ಈ ಮೇಣದ ಮೂರ್ತಿ ಮಾಡಿಸಿ ಮನೆಯಲ್ಲಿಟ್ಟುಕೊಂಡಿದ್ದಾರೆ. 

Latest Videos

undefined

ವೃತ್ತಿಯಲ್ಲಿ  ಇಂಜಿನಿಯರ್ ಆಗಿರುವ ವೆಂಕಟೇಶ್ ತಾಯಿಯ ನಿಷ್ಠ ಸೇವಕ. ವೆಂಕಟೇಶ್ ಅವರ ತಾಯಿ ಮನೋರಮಾ ಅವರು ತೀರಿಹೋಗಿ ನಾಲ್ಕು ವರ್ಷವೇ ಕಳೆದಿದೆ. ಆದ್ರೆ ಪುತ್ರ ವೆಂಕಟೇಶ್ ಮಾತ್ರ ತನ್ನ ತಾಯಿ ಇಂದಿಗೂ ಜೀವಂತವಾಗಿದ್ದಾರೆ ಎಂದೇ ನಂಬಿದ್ದಾರೆ. ತಾಯಿ ಇಲ್ಲಾ ಅನ್ನೋ ನೋವು ಕಾಡಬಾರದು ಎಂದು ಮೇಣದಲ್ಲಿ ಯಥಾವತ್ ತಾಯಿ ಮೂರ್ತಿಯನ್ನ ಮಾಡಿಸಿಟ್ಟಿದ್ದಾರೆ. ಇದಕ್ಕಾಗಿ ಬರೊಬ್ಬರಿ 11 ಲಕ್ಷ ರೂಪಾಯಿ ಖರ್ಚು ಮಾಡಿರುವ ವೆಂಕಟೇಶ್ ನಿತ್ಯ ತಮ್ಮ ತಾಯಿಯೊಂದಿಗೇ ಕಾಲ ಕಳೆಯುತ್ತಿದ್ದಾರೆ. 

ಮನೆಯಲ್ಲೇ ದೈವ ಸ್ವರೂಪಿ ತಾಯಿ ಪ್ರತಿಮೆ ಇಟ್ಟು ಮಕ್ಕಳಿಂದ ನಿತ್ಯ ಪೂಜೆ

ವೆಂಕಟೇಶ್ ಮದುವೆ ವಯಸ್ಸಿನಲ್ಲಿರುವಾಗ್ಲೇ ತಾಯಿಗೆ ಅನಾರೋಗ್ಯ ಉಂಟಾಗಿತ್ತು. ತಾನು ಮದುವೆಯಾದ್ರೆ ಎಲ್ಲಿ ತಾಯಿ ಸೇವೆಗೆ ಅಡ್ಡಿಯಾಗುತ್ತೋ, ತನ್ನ ತಾಯಿಗೆ ಯಾವ ಕೊರತೆಯಾದ್ರು ಉಂಟಾದ್ರೆ ಅನ್ನೋ ಅಳುಕಿನಲ್ಲೇ ಮದುವೆಯಾಗದೇ ಬ್ರಹ್ಮಚರ್ಯೆ ಪಾಲಿಸಿಕೊಂಡು ಬಂದಿದ್ದಾರೆ. ತಾಯಿ ತೀರಿಕೊಂಡ ಬಳಿಕವೂ ಮದುವೆ ಆಗದೇ, ತಾಯಿ ನೆನಪು ಸದಾ ಇರಬೇಕೆಂದು ಮೇಣದ ಮೂರ್ತಿಯನ್ನ ಮನೆಯಲ್ಲಿ ತಯಾರಿಸಿಟ್ಟುಕೊಂಡು ನಿತ್ಯ ತಾಯಿ ಸೇವೆ ಮಾಡ್ತಿದ್ದಾರೆ. ಸದ್ಯ ವೆಂಕಟೇಶ್ ತನ್ನ ತಾಯಿ ಬದುಕಿ ಬಾಳಿದ ಮನೆಯನ್ನೂ ಸಹ ಯಾವುದೇ ರಿನೋವೇಷನ್ ಮಾಡದೇ ಹಾಗೇ ಉಳಿಸಿಕೊಂಡಿದ್ದಾರೆ.

ತಂದೆ ಮೇಣದ ಪ್ರತಿಮೆ ಮುಂದೆ ಹಸೆಮಣೆಯೇರಿದ ಮಗಳು, ಭಾವನಾತ್ಮಕ ಬಂಧಕ್ಕೆ ಕಣ್ಣೀರಾದ ಜನ

ತಾಯಿ ಋಣವನ್ನ ಏಳೇಳು ಜನ್ಮದಲ್ಲೂ ತೀರಿಸಲು ಸಾಧ್ಯವಿಲ್ಲ ಅನ್ನೋ ಮಾತಿದೆ. ಹಾಗೇ ತಾಯಿಗಿಂತ ದೇವರಿಲ್ಲ ಎನ್ನುವ ನಾಣ್ಣುಡಿಯನ್ನ ಜೀವನದಲ್ಲಿ ಚಾಚೂ ತಪ್ಪದೇ ಪಾಲಿಸಿಕೊಂಡು ಬರ್ತಿದ್ದಾರೆ ವೆಂಕಟೇಶ್. ಹೆತ್ತವರಿಗೆ ವಯಸ್ಸಾಗ್ತಿದ್ದ ಹಾಗೇ ದೂರಮಾಡೋ ಪ್ರಕರಣಗಳೇ ಹೆಚ್ಚಾಗ್ತಿರುವ  ಮಧ್ಯದಲ್ಲಿ ತಾಯಿ ಮೂರ್ತಿ ಮಾಡಿ ನಿತ್ಯ ಆರಾಧಿಸ್ತಿರೋ ವೆಂಕಟೇಶ್ ಮಾದರಿ ಪುತ್ರ ಎನ್ನದೆ ಇರಲು ಸಾಧ್ಯವೇ..?

click me!