ಕನಕ ಜಯಂತ್ಯುತ್ಸವದಲ್ಲಿ ಹಾಲುಮತ ಸಮಾಜದ  ಒಗ್ಗಟ್ಟು ಪ್ರದರ್ಶನ

By Ravi JanekalFirst Published Dec 12, 2022, 9:50 PM IST
Highlights

ಕನಕ ಜಯಂತ್ಯುತ್ಸವ ಕಾರ್ಯಕ್ರಮದ ಸಾನಿಥ್ಯವಹಿಸಿ  ಮಾತನಾಡಿದ  ಕಾಗಿನೆಲೆ ಶ್ರೀ ನಿರಂಜನಾನಂದಪುರಿ  ಸ್ವಾಮೀಜಿ ಹೊನ್ನಾಳಿ ನ್ಯಾಮತಿ ತಾಲ್ಲೂಕಿನವರು ಸೇರಿ ಅದ್ಭುತ ಕಾರ್ಯಕ್ರಮ ಮಾಡಿದ್ದೀರಿ. ಈ ತಾಲ್ಲೂಕನಲ್ಲಿ ಸಂಘಟನೆ ಸರಿಪಡಿಸಲು ನಾನಿದ್ದೇನೆ ಯಾವ ಕಾರಣಕ್ಕೂ ನಾನು ಕುರಿಮಂದೆಯನ್ನು ಅಗಲಿಸಲು ಬಿಡೋಲ್ಲ ಎಂದರು. 

ರಿಪೋರ್ಟರ್ : ವರದರಾಜ್

ದಾವಣಗೆರೆ (ಡಿ.12) : ಹೊನ್ನಾಳಿ ಪಟ್ಟಣದಲ್ಲಿ ನಡೆದ ಈ ಬಾರಿಯ ಕನಕ ಜಯಂತ್ಯುತ್ಸವದಲ್ಲಿ  ಶಾಸಕ ರೇಣುಕಾಚಾರ್ಯ ಸೇರಿದಂತೆ ಸ್ಥಳೀಯ ಬಿಜೆಪಿ ಕಾಂಗ್ರೆಸ್ ಮುಖಂಡರಲ್ಲಿ ತಲ್ಲಣ ಸೃಷ್ಟಿಸಿದೆ.  ಕ್ಷೇತ್ರದಲ್ಲಿ 45 ಸಾವಿರ ಹಾಲುಮತ ಕುರುಬ ಮತದಾರರಿದ್ದು  ಒಗ್ಗಟ್ಟು ಪ್ರದರ್ಶನವಾಗುತ್ತಿಲ್ಲ ಆ ಕಾರಣದಿಂದ ಸಮಾಜಕ್ಕೆ ರಾಜಕೀಯ ಹಿನ್ನಡೆಯಾಗುತ್ತಿದೆ. ಈ ಭಾರಿಯ ಚುನಾವಣೆಯಲ್ಲಿ ಒಗ್ಗಟ್ಟಿನ ಮಂತ್ರ ಪಠಿಸಬೇಕು ಅದಕ್ಕೆ ನಾನೇ ಸಾರಥ್ಯವಹಿಸುತ್ತೇನೆ ಎಂದು ಸ್ವತಃ ಕಾಗಿನೆಲೆ ಶ್ರೀ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. 

ದಾವಣಗೆರೆ ಜಿಲ್ಲೆಯಲ್ಲಿ  ದಿನಕಳೆದಂತೆ  ಕ್ಷೇತ್ರದಲ್ಲಿ  ಚುನಾವಣಾ ಕಣ  ರಂಗುಪಡೆಯುತ್ತಿದೆ. ಅದರಲ್ಲೂ ಹೊನ್ನಾಳಿ ಕ್ಷೇತ್ರದಲ್ಲಿ  ಶಾಸಕ ರೇಣುಕಾಚಾರ್ಯ ಪ್ರತಿದಿನ ಪ್ರತಿಕ್ಷಣ ಚುನಾವಣೆ ಸಿದ್ಧತೆ ಮಾಡುತ್ತಿದ್ದಾರೆ.  ಹೊನ್ನಾಳಿ ಪಟ್ಟಣದಲ್ಲಿ ನಿನ್ನೆ ನಡೆದ 535 ನೇ ಕನಕ ಜಯಂತ್ಯುತ್ಸವ ಕಾರ್ಯಕ್ರಮ  ಈ ಬಾರಿ ಹಲವು ಸಂದೇಶಗಳನ್ನು ನೀಡಿದೆ. ಈ ಕಾರ್ಯಕ್ರಮ ಆಯೋಜಿಸಿದ್ದ ಸ್ಥಳೀಯ ಮುಖಂಡರು ಸಮಾಜದ ಒಗ್ಗಟ್ಟಿನ ಪ್ರದರ್ಶನದ  ಬಗ್ಗೆ ಹೆಚ್ಚು ಮಾತನಾಡಿದ್ದಾರೆ. ಅದರಲ್ಲೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಬಿ ಮಂಜಪ್ಪ ಕಾಂಗ್ರೆಸ್ ಪಕ್ಷದ ಟಿಕೇಟ್ ಆಕಾಂಕ್ಷಿಯಾಗಿದ್ದು ತುಂಬಿದ ಸಭೆಯಲ್ಲೇ ಸಮಾಜದಲ್ಲಿ ಒಗ್ಗಟ್ಟು ಇಲ್ಲ ಎಂದು  ತೀವ್ರ ಅಸಮಾಧಾನ ಹೊರಹಾಕಿದ್ದಾರೆ. 

ಕುಲಶಾಸ್ತ್ರೀಯ ಅಧ್ಯಯನದ ವರದಿ ಅಂಗೀಕರಿಸಲು ಆಗ್ರಹ

ಕ್ಷೇತ್ರದಲ್ಲಿ 75 ಸಾವಿರ ಜನಸಂಖ್ಯೆ ಹಾಲುಮತದವರಿದ್ದು  45 ಸಾವಿರ  ಮತದಾರರಿದ್ದಾರೆ. ನಮಗೆ ಅಧಿಕಾರವಿದ್ದರೆ ಸಮಾಜಕ್ಕೆ ನಾವು ಏನಾದ್ರು ಮಾಡಬಹುದು ಆದ್ರೆ ಅಧಿಕಾರ ಇಲ್ಲ ಅಂದ್ರೆ ಏನು ಮಾಡುವುದಕ್ಕೆ ಆಗುವುದಿಲ್ಲ. ನೀವೇನಾದ್ರು ಮಾಡಿ ಸಮಾಜ ಅಂತಾ ಬಂದಾಗ ನೀವು ಒಟ್ಟಿಗೆ ನಿಲ್ಲಬೇಕು ಎಂದಿದ್ದಾರೆ.     

ಕನಕ ಜಯಂತ್ಯುತ್ಸವ ಕಾರ್ಯಕ್ರಮದ ಸಾನಿಥ್ಯವಹಿಸಿ  ಮಾತನಾಡಿದ  ಕಾಗಿನೆಲೆ ಶ್ರೀ ನಿರಂಜನಾನಂದಪುರಿ  ಸ್ವಾಮೀಜಿ ಹೊನ್ನಾಳಿ ನ್ಯಾಮತಿ ತಾಲ್ಲೂಕಿನವರು ಸೇರಿ ಅದ್ಭುತ ಕಾರ್ಯಕ್ರಮ ಮಾಡಿದ್ದೀರಿ. ಈ ತಾಲ್ಲೂಕನಲ್ಲಿ ಸಂಘಟನೆ ಸರಿಪಡಿಸಲು ನಾನಿದ್ದೇನೆ ಯಾವ ಕಾರಣಕ್ಕೂ ನಾನು ಕುರಿಮಂದೆಯನ್ನು ಅಗಲಿಸಲು ಬಿಡೋಲ್ಲ ಎಂದರು. 

ಪರೋಕ್ಷವಾಗಿ  ರಾಜಕೀಯವಾಗಿ ಒಗ್ಗಟ್ಟು ಪ್ರದರ್ಶಿಸಬೇಕೆಂದು ಸಮುದಾಯಕ್ಕೆ ಕರೆ ನೀಡಿದ ಸ್ವಾಮೀಜಿ  ಕುರಿಮಂದೆಯಲ್ಲಿ ಮೇಕೆ ಎಂಬ ಕತೆಯನ್ನು ಸೂಚ್ಯವಾಗಿ ಹೇಳಿದರು. ಹೊನ್ನಾಳಿಯಲ್ಲಿ ಒಂದು  ಸಮುದಾಯ ಭವನ ಆಗಿಲ್ಲ.  ಇಲ್ಲಿಯವರೆಗು ಯಾಕೆ ಆಗಿಲ್ಲ ಎಂಬುದು ಇನ್ನು ನಿಮಗೆ  ಅರಿವಾಗಿಲ್ಲ ಇನ್ನಾದ್ರು  ಎಚ್ಚೆತ್ತುಕೊಳ್ಳಿ ಎಂದರು.  ಹಾಲುಮತ ಸಮಾಜದವರ ನಡುವೆ ಹುಳಿ ಹಿಂಡಲು ಬಂದಾಗ ನೀವು ಗಟ್ಟಿ ಮೊಸರಾಗಿ ಮೊಸರಲ್ಲಿ ಕಡ್ಡಿ ಆಡಿಸಲು ಬಂದಾಗ ನೀವು ಬೆಣ್ಣೆಯಾಗಬೇಕು ಬೆಣ್ಣೆಯಲ್ಲೂ ಕೈಯಾಡಿಸಿದ್ರೆ ನೀವು ಬಲಿಷ್ಠ ತುಪ್ಪವಾಗಬೇಕು ಎಂದು ಕರೆ ನೀಡಿದ ಸ್ವಾಮೀಜಿ  ಹಾಲು ಮೊಸರು ಆಯಸ್ಸುಗಿಂತ ತುಪ್ಪಕ್ಕೆ ಸಾಕಷ್ಟು ಆಯಸ್ಸು ಇದೆ ನೀವು ತುಪ್ಪದ ಅರಿವಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಸಮುದಾಯಕ್ಕೆ ಕರೆ ನೀಡಿದರು. ಇದೇ ವೇಳೆ ಸಮುದಾಯದವರು ಒಂದುಗೂಡಲು ನಾನು ಟೊಂಕಕಟ್ಟಿ ನಿಲ್ಲುತ್ತೇನೆ ಎಂದಿದ್ದಾರೆ  ನಿರಂಜನಾನಂದಪುರಿ ಶ್ರೀಗಳು.

ಕಾಗಿನೆಲೆಯಲ್ಲಿ 12ರಿಂದ ಹಾಲುಮತ ಸಂಸ್ಕೃತಿ ವೈಭವ
 
 ಹೊನ್ನಾಳಿ ಕ್ಷೇತ್ರದ ಕೆಲ ಹಾಲುಮತ ಸಮಾಜದ  ನಾಯಕರು  ಶಾಸಕ ರೇಣುಕಾಚಾರ್ಯ ರ ಜೊತೆಗಿದ್ದು ಅವರ ಗೆಲುವಿಗೆ ಶ್ರಮಿಸಿದ್ದಾರೆ. ಇನ್ನು ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಟಿಕೇಟ್ ಆಕಾಂಕ್ಷಿಗಳಾಗಿ  ಡಿಜಿ ಶಾಂತನಗೌಡ,  ಹೆಚ್ ಬಿ ಮಂಜಪ್ಪ ಅರ್ಜಿ ಸಲ್ಲಿಸಿದ್ದು  ಈ ಬಾರಿ ಕಾಂಗ್ರೆಸ್ ಟಿಕೇಟ್ ಸಿಕ್ಕರೆ ಇಡೀ ಸಮಾಜ ಜೊತೆ ನಿಲ್ಲಬೇಕು ಎಂದು ಪರೋಕ್ಷವಾಗಿ ಈಗಲೇ ತಾಕೀತು ಮಾಡಿದ್ದಾರೆ. ಕನಕ ಜಯಂತ್ಯುತ್ಸವದಲ್ಲಿ  ಕುರುಬ ಸಮಾಜದ ಒಗ್ಗಟ್ಟು ಪ್ರದರ್ಶನ  ಸ್ವಾಮೀಜಿಗಳೇ ಈ ಬಾರಿ ನೇತೃತ್ವವಹಿಸುತ್ತೇವೆ ಎಂದು ಹೇಳಿಕೆ ನೀಡಿರುವುದು ಪ್ರಬಲ ಆಕಾಂಕ್ಷಿಗಳಲ್ಲಿ ನಡುಕವುಟ್ಟಿಸಿರುವುದಂತು  ಸತ್ಯ.

click me!