ಕೃಷಿ ತಜ್ಞರಿಗೇ ಸವಾಲೊಡ್ಡಿದ ಅಪರೂಪದ ಮಾವಿನ ಹಣ್ಣು: ತೋಟದ ಎಲ್ಲ ಮಾವು ಹೀಗಿದೆಯಂತೆ!

By Sathish Kumar KH  |  First Published May 18, 2023, 6:31 PM IST

ಉಡುಪಿಯಲ್ಲಿ ಮಾವಿನ ಹಣ್ಣು ಆಕಾರ ಬದಲಿಸಿಕೊಂಡ ವಿಚಿತ್ರ ವಿದ್ಯಮಾನ ನಡೆದಿದೆ. ಈ ಹಣ್ಣನ್ನ ನೋಡಿದರೆ ಮಾವಿನಹಣ್ಣು ಎಂದು ಹೇಳಲು ಸಾಧ್ಯವೇ ಇಲ್ಲ, ಆದರೆ ವಾಸನೆಯಿಂದ ಗುರುತಿಸಬಹುದು.


ಉಡುಪಿ (ಮೇ 18): ಉಡುಪಿಯಲ್ಲಿ ಮಾವಿನ ಹಣ್ಣು ರೂಪ ಮತ್ತು ಆಕಾರ ಬದಲಿಸಿಕೊಂಡ ವಿಚಿತ್ರ ವಿದ್ಯಮಾನ ನಡೆದಿದೆ. ಈ ಹಣ್ಣನ್ನ ನೋಡಿದರೆ ಮಾವಿನಹಣ್ಣು ಎಂದು ಹೇಳಲು ಸಾಧ್ಯವೇ ಇಲ್ಲ! ಆದರೆ ನೀವು ನಂಬಲೇಬೇಕು ಇದು ಮಾವಿನ ಹಣ್ಣು ಎಂದು.. ಇಡೀ ತೋಟದ ಕೆಲವು ಮರದ ಮಾವಿನ ಹಣ್ಣುಗಳು ಹೀಗೆ ರೂಪ ಬದಲಿಸಿಕೊಂಡಿವೆಯಂತೆ. 

ಉಡುಪಿ ಜಿಲ್ಲೆಯ ಕೋಟದಲ್ಲಿ ಪ್ರಕೃತಿ ವೈಚಿತ್ರ್ಯ ನಡೆದಿದ್ದು, ಜನರಲ್ಲಿ  ಈ ಹಣ್ಣು ಆಶ್ಚರ್ಯ ಮೂಡಿಸಿದೆ. ಸೀಮೆ ಬದನೆಕಾಯಿ ರೂಪದಲ್ಲಿರುವ ಮಾವಿನ ಹಣ್ಣುಗಳು ಎಲ್ಲರ ಗಮನ ಸೆಳೆಯುತ್ತಿದೆ. ಉದ್ಯಮಿ ಕೋಟ ಸುಬ್ರಾಯ ಆಚಾರ್ಯ ಅವರ ಮನೆಯಲ್ಲಿ ಬೆಳೆದ ಮಾವಿನ ಹಣ್ಣುಗಳು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತವೆ. ಸಾಮಾನ್ಯವಾಗಿ ಮಾವಿನ ಹಣ್ಣುಗಳು ಒಂದೆ ರೂಪದಲ್ಲಿರುತ್ತವೆ. ಆದರೆ ಈ ಮಾವಿನ ಹಣ್ಣುಗಳನ್ನು ಗುರುತಿಸುವುದೆ ಕಷ್ಟ! 

Latest Videos

undefined

Kartavya Path Jamun Trees: ದೆಹಲಿಯ ಕರ್ತವ್ಯಪಥದಲ್ಲಿ ನೇರಳೆ ಹಣ್ಣು ಕೀಳಲು ಟೆಂಡರ್‌!

ವಾಸನೆಯಿಂದಹಣ್ಣು ಗುರುತು: ಕೇವಲ ವಾಸನೆ ಆದಾರದ ಮೇಲೆ ಗುರುತಿಸಲಷ್ಟೆ ಸಾಧ್ಯವಿರುವ ಹಣ್ಣುಗಳು, ಬೇರೆ ಬೇರೆ ರೂಪದಲ್ಲಿ ಬೆಳೆದಿವೆ. ಸದ್ಯ ಕೃಷಿ ತಜ್ಞರಿಗೆ ಸವಾಲಾಗಿರುವ ಅಪರೂಪದ ಮಾವಿನ ಹಣ್ಣುಗಳ ಬಗ್ಗೆ ಅಧ್ಯಯನ ನಡೆಸಬೇಕಾಗಿದೆ.ಸದ್ಯ ಕೃಷಿ ತಜ್ಞರಿಗೆ ಈ ಅಪರೂಪದ ಮಾವಿನ ಹಣ್ಣುಗಳು ಸವಾಲಾಗಿವೆ. ಈ ಬಗ್ಗೆ ಮಾಲಕ ಸುಬ್ರಾಯ ಆಚಾರ್ಯ ಪ್ರತಿಕ್ರಿಯೆ ನೀಡಿದ್ದು “ನಮ್ಮ ಮನೆಯಲ್ಲಿ ಸುಮಾರು 35 ವರ್ಷದಿಂದ ಮಾವಿನ ಹಣ್ಣು ಬಿಡುತ್ತಿದೆ. ಇದೇ ಮೊದಲ ಬಾರಿಗೆ ಸಾಮಾನ್ಯ ಮಾವಿನ ಹಣ್ಣುಗಳ ಜೊತೆ ಐದಾರು ಮಾವಿನ ಕಾಯಿ‌ ಈ ರೂಪ ತಾಳಿವೆ.

ಉಡುಪಿಯ ಮಾನ ಹರಾಜು ಹಾಕುತ್ತಿದೆ ಕೃಷ್ಣ ಮಠದ ಬಳಿಯ ಕಸದ ರಾಶಿ:  ಉಡುಪಿಯ ಪ್ರಮುಖ ಪುಣ್ಯಕ್ಷೇತ್ರ ಶ್ರೀಕೃಷ್ಣಮಠದ ಪರಿಸರದಲ್ಲಿ ತ್ಯಾಜ್ಯದ ರಾಶಿ ತುಂಬಿದ್ದು ಯಾತ್ರಾರ್ಥಿಗಳು ಮೂಗು ಮುಚ್ಚಿಕೊಂಡು ದೇವರ ದರ್ಶನ ಪಡೆಯುವಂತಾಗಿದೆ.ಮಠದ ಒಂದು ಬದಿಯಲ್ಲಿರುವ ರಾಜಾಂಗಣ ಸಭಾಂಗಣ ಆವರಣದಲ್ಲಿ ತ್ಯಾಜ್ಯ ತುಂಬಿದ್ದು ವಿಲೇವಾರಿ ಆಗಿಲ್ಲ. ಈಗ ರಜಾ ದಿನಗಳು ಇರುವುದರಿಂದ ಪ್ರತಿದಿನ ಸಾವಿರಾರು ಜನ ಕೃಷ್ಣಮಠಕ್ಕೆ ಭೇಟಿ ನೀಡುತ್ತಾರೆ , ಜನರ ಓಡಾಟ ಜಾಸ್ತಿ ಇರುವುದರಿಂದ ಪ್ರತಿದಿನ ಸಂಗ್ರಹವಾಗುವ ಕಸದ ಪ್ರಮಾಣವು ಹೆಚ್ಚು. ರಥ ಬೀದಿ ಸೇರಿದಂತೆ ಅಷ್ಟ ಮಠದ ಪರಿಸರ ಹಾಗೂ ಕೃಷ್ಣಮಠದಲ್ಲಿ  ಲೋಡುಗಟ್ಟಲೆ ಕಸ ಸಂಗ್ರವಾಗುತ್ತೆ. ಹೀಗೆ ಸಂಗ್ರಹವಾದ ಕಸವನ್ನು ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ರಾಜಾಂಗಣದ ಒಂದು ಮೂಲೆಯಲ್ಲಿ ರಾಶಿ ಹಾಕಲಾಗಿದೆ. 

ಕೃಷ್ಣಮಠದ ಪರಿಸರದಲ್ಲಿ ಇದೆಂಥಾ ಗಲೀಜು?: ಪ್ರವಾಸಿಗರು ರಾಜಾಂಗಣದ ಮೂಲಕವೇ ರಥ ಬೀದಿಗೆ ಎಂಟ್ರಿ ಕೊಡುವುದರಿಂದ, ಕೃಷ್ಣಮಠಕ್ಕೆ ಕಸದ ಸ್ವಾಗತವೇ ಎದುರಾಗುತ್ತದೆ. ಬಹಳಷ್ಟು ದಿನಗಳಿಂದ ಕಸ ವೀಲೇವಾರಿ ಆಗದೇ ಇರುವುದರಿಂದ ಯಾತ್ರಾರ್ಥಿಗಳಿಗೂ ಇದು ಕಿರಿಕಿರಿ ನೀಡುತ್ತಿದೆ.ಪ್ಲಾಸ್ಟಿಕ್, ಬಾಟಲುಗಳ ಜೊತೆಗೆ ಹಸಿ ತ್ಯಾಜ್ಯ ಕೂಡ ಸೇರಿಕೊಂಡು ಪರಿಸರದ ಅಂದವೂ ಹಾಳಾಗಿದೆ. ಗೀತಾಮಂದಿರ ಪ್ರವೇಶದ್ವಾರದಲ್ಲೇ ಈ ತ್ಯಾಜ್ಯ ರಾಶಿ ಇದ್ದು ಸಾಂಕ್ರಾಮಿಕ ರೋಗಕ್ಕೂ ಆಹ್ವಾನ ನೀಡುತ್ತಿದೆ. ಸ್ಥಳೀಯರು ಈ ಬಗ್ಗೆ ಆಕ್ರೋಶ ಹೊರ ಹಾಕಿದ್ದು ತಕ್ಷಣ ಇದನ್ನು ವಿಲೇವಾರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಕೃಷ್ಣಮಠ ಮತ್ತು ಉಡುಪಿ ನಗರಸಭೆಯ ನಡುವೆ ಗೊಂದಲ ಏರ್ಪಟ್ಟಿರುವುದರಿಂದ ಕಸದ ನಿರ್ವಹಣೆ ಅಸಮರ್ಪಕವಾಗಿದೆ ಎಂದು ತಿಳಿದುಬಂದಿದೆ.

ಬ್ಯಾನರ್‌ ಹಾಕಿದ್ದು ಒಪ್ಪಿಕೊಳ್ಳುವಂತೆ ಗನ್ ಇಟ್ಟು ಬೆದರಿಕೆ: ಹಿಂದೂ ಕಾರ್ಯಕರ್ತರೆಂದು ಚರ್ಮ ಸುಲಿದರು!

ದೇವಾಲಯಗಳು ಮತ್ತು ಧಾರ್ಮಿಕ ಪರಿಸರ ನಮ್ಮ ಸಂಸ್ಕೃತಿಗೆ ಹಿಡಿದ ಕೈಗನ್ನಡಿ ಎಂದು ಹೇಳಲಾಗುತ್ತದೆ. ಸ್ವಚ್ಛ ಹಾಗೂ ಶುದ್ಧ ಪರಿಸರದಲ್ಲಿ ನಡೆಸುವ ಧಾರ್ಮಿಕ ಕಾರ್ಯಕ್ರಮಗಳಿಗೆ ಮಹತ್ವ ಹೆಚ್ಚು. ಆದರೆ ದೇಶದ ಪ್ರಸಿದ್ಧ ದೇವಾಲಯದ ಆವರಣದಲ್ಲಿ, ಈ ಕಸದ ರಾಶಿ ಬಿದ್ದಿರುವುದು ಉಡುಪಿಯ ಮಾನ ಹರಾಜು ಹಾಕುತ್ತಿದೆ. ಅನೇಕ ರಾಜ್ಯಗಳಿಂದ ಹಾಗೂ ವಿದೇಶಗಳಿಂದಲೂ ಭಕ್ತರು ಬರುವುದರಿಂದ, ಮಠದ ಸ್ವಚ್ಛತೆ ನಗರ ಸಭೆ ಹಾಗೂ ದೇವಾಲಯದ ಆಡಳಿತ ಮಂಡಳಿಯ ಜವಾಬ್ದಾರಿಯಾಗಿದೆ.

click me!