Agnipath recruitment rally: ಹಾವೇರಿಯಲ್ಲಿ ಸೆ.1ರಿಂದ ಆರಂಭ

By Kannadaprabha News  |  First Published Aug 20, 2022, 1:28 PM IST
  • ಸೆ.1 ರಿಂದ ಹಾವೇರಿಯಲ್ಲಿ ಅಗ್ನಿಪಥ್‌ ನೇಮಕಾತಿ Rally
  • 58 ಸಾವಿರ ಅಭ್ಯರ್ಥಿಗಳ ನಿರೀಕ್ಷೆ: ರಿಯಾಯಿತಿ ದರದಲ್ಲಿ ವಸತಿ-ಊಟದ ಸೌಕರ್ಯ
  • ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿಕೆ

 ಹಾವೇರಿ (ಆ.20) : ಅಗ್ನಿಪಥ್‌ ಸೇನಾ ನೇಮಕಾತಿ ಯೋಜನೆಯಡಿ ಸೆ.1 ರಿಂದ 20ರವರೆಗೆ ಹಾವೇರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಅಗ್ನಿವೀರರ ನೇಮಕಾತಿ Rallyಯಲ್ಲಿ ಭಾಗವಹಿಸಲು 58 ಸಾವಿರ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಜಿಲ್ಲೆಗೆ ಆಗಮಿಸುವ ಅಭ್ಯರ್ಥಿಗಳಿಗೆ ರಿಯಾಯಿತಿ ದರದಲ್ಲಿ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದ್ದಾರೆ.

ಅಗ್ನಿಪಥ್ ಹಿಂಸಾಚಾರದ ನಡುವೆ ಮೂರೂ ಸೇನಾಪಡೆಗಳ ನೇಮಕಾತಿ ಘೋಷಣೆ!

Tap to resize

Latest Videos

undefined

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗನದಲ್ಲಿ ಶುಕ್ರವಾರ ಜರುಗಿದ ಅಗ್ನಿಪಥ್‌ ನೇಮಕಾತಿ(Agnipath recruitment rally) ಪೂರ್ವ ಸಿದ್ಧತಾ ಸಭೆಯಲ್ಲಿ ನಗರದ ಹೋಟೆಲ್‌ ಮಾಲೀಕರ ಸಂಘ ಹಾಗೂ ಸಮುದಾಯ, ಕಲ್ಯಾಣ ಮಂಟಪಗಳ ಮಾಲೀಕರು ಭಾಗವಹಿಸಿದ್ದರು.

ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಅಗ್ನಿವೀರರ ನೇಮಕಾತಿ Rally ಸೆ.1 ರಿಂದ 20ರವರೆಗೆ ನಡೆಯಲಿದೆ. 11 ಜಿಲ್ಲೆಯ ಅಭ್ಯರ್ಥಿಗಳು ರಾರ‍ಯಲಿಯಲ್ಲಿ ಭಾಗವಹಿಸಲಿದ್ದಾರೆ. 58 ಸಾವಿರ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಪ್ರತಿ ದಿನ ಅಂದಾಜು ಮೂರು ಸಾವಿರ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ನೇಮಕಾತಿ ಪ್ರಕ್ರಿಯೆಗಾಗಿ 150 ಜನ ಸೇನಾ ನೇಮಕಾತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಲಿದ್ದಾರೆ. 20 ಜನನ ಸೇನಾ ಅಧಿಕಾರಿಗಳಿಗೆ ಖಾಸಗಿ ಹೋಟೆಲ್‌ ಹಾಗೂ 130 ಜನ ಸೇನಾ ಸಿಬ್ಬಂದಿಗಳಿಗೆ ಕ್ರೀಡಾ ವಸತಿ ನಿಲಯ ಹಾಗೂ ಪರಿಶಿಷ್ಟಜಾತಿಯ ವಸತಿ ನಿಲಯದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

20 ದಿನಗಳ ಕಾಲ ನಿರಂತರವಾಗಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ನೋಂದಾಯಿತ ಅಭ್ಯರ್ಥಿಗಳ ಪೈಕಿ ಪ್ರತಿ ದಿನ ಮೂರು ಸಾವಿರ ಅಭ್ಯರ್ಥಿಗಳಿಗೆ ಆಹ್ವಾನ ನೀಡಲಿದ್ದು, ಹೊರ ಜಿಲ್ಲೆಗಳಿಂದ ಆಯಾ ದಿನ ಬರುವ ಅಭ್ಯರ್ಥಿಗಳಿಗೆ ರಿಯಾಯಿತಿ ದರದಲ್ಲಿ ಕಲ್ಯಾಣ ಮಂಟಪಗಳು ಹಾಗೂ ಸಮುದಾಯ ಭವನಗಳಲ್ಲಿ ತಾತ್ಕಾಲಿಕ ವಸತಿ ಸೌಕರ್ಯ ಕಲ್ಪಿಸಲು ನಿರ್ಧರಿಸಲಾಯಿತು. ಹೋಟೆಲ್‌ಗಳಲ್ಲಿ ಅಭ್ಯರ್ಥಿಗಳಿಗೆ ನಿಗದಿತ ದರದಕ್ಕಿಂತ ಶೇ.25 ರಷ್ಟುರಿಯಾಯಿತಿ ನೀಡಿ ಊಟ ಪೂರೈಸುವುದಾಗಿ ಹೋಟೆಲ್‌ ಮಾಲೀಕರ ಸಂಘ ಒಪ್ಪಿಗೆ ಸೂಚಿಸಿತು.ಹೋಟೆಲ್‌ಗಳಲ್ಲಿ ಬಾಡಿಗೆ ಪಾವತಿಸಿ ಉಳಿಯುವ ಅಭ್ಯರ್ಥಿಗಳಿಗೆ ರಿಯಾಯಿತಿ ದರದಲ್ಲಿ ಕೊಠಡಿಗಳನ್ನ ಪೂರೈಸುವುದಾಗಿ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ರೆಡ್‌ಕ್ರಾಸ್‌(Red Cross) ಸಂಸ್ಥೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಒಂದೊಂದು ದಿನ ಉಚಿತ ಊಟ ಪೂರೈಸುವುದಾಗಿ ಪ್ರಕಟಿಸಿದರು.ಇಷ್ಟಾಗಿಯೂ ಅಭ್ಯರ್ಥಿಗಳಿಗೆ ಉಪಹಾರ-ಊಟದ ಕೊರತೆಯಾಗದಂತೆ ಕ್ರೀಡಾಂಗಣದ ಹೊರ ಭಾಗದಲ್ಲಿ ಕನಿಷ್ಟ15ಕ್ಕೂ ಹೆಚ್ಚು ಫುಡ್‌ ಕೋರ್ಚ್‌ಗಳನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಹೊರ ಜಿಲ್ಲೆಯಿಂದ ಬರುವ ಅಭ್ಯರ್ಥಿಗಳಿಗೆ ಸಾರಿಗೆ ಸೌಕರ್ಯದ ಕೊರತೆಯಾಗದಂತೆ ನೇಮಕಾತಿಯಲ್ಲಿ ಭಾಗವಹಿಸುವ 11 ಜಿಲ್ಲೆಗಳಿಂದ ಹಾವೇರಿಗೆ ಹೆಚ್ಚುವರಿ ಬಸ್‌ ಸೌಕರ್ಯ ಕಲ್ಪಿಸಲು ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

Agneepath: ಭಾರತೀಯ ಸೇನೆಯಲ್ಲಿ 4 ವರ್ಷಗಳಿಗೆ 'ಅಗ್ನಿವೀರ್' ನೇಮಕ, ಏನಿದು? ಆಯ್ಕೆ ಹೇಗೆ? ಇಲ್ಲಿದೆ ವಿವರ

ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣಗಳಲ್ಲಿ ಅಭ್ಯರ್ಥಿಗಳಿಗೆ ಅನುಕೂಲವಾಗಲು ಮಾರ್ಗಸೂಚಿ ಫಲಕಗಳು,ಕ್ರೀಡಾಂಗಣ ಹಾಗೂ ಹೊರಭಾಗದಲ್ಲಿ ಶೌಚಾಲಯ ವ್ಯವಸ್ಥೆ, ಬ್ಯಾರಿಕೇಡ್‌ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ವಸತಿ ಸೌಕರ್ಯ, ಕ್ರೀಡಾಂಗಣದ ಆವರಣದಲ್ಲಿ ಬ್ಯಾರಿಕೇಡ್‌, ನೇಮಕಾತಿ ಪ್ರಕ್ರಿಯೆಗೆ ತಾತ್ಕಾಲಿಕ ಟೆಂಟ್‌ ವ್ಯವಸ್ಥೆ, ಹೆಲ್ಪಡೆಸ್‌್ಕ ಸ್ಥಾಪನೆ, ನೋಂದಣಿ ಕೌಂಟರ್‌, ದಾಖಲೆಗಳ ಪರಿಶೀಲನೆ ಕೌಂಟರ್‌, ಅಂಬ್ಯುಲೆನ್ಸ್‌, ಪೋಲೀಸ್‌ ಭದ್ರತೆ, ವ್ಯವಸ್ಥೆ, ಅಗ್ನಿಶಾಮಕದಳ ನೇಮಕಾತಿ, ಎನ್‌ಎಸ್‌ಎಸ್‌, ಸ್ಕೌಟ್‌ ಆಂಡ್‌ ಗೈಡ್‌್ಸ, ಎನ್‌ಸಿಸಿ,ಕೆಡೆಟ್‌ಗಳ ಬಳಕೆ ಸೇರಿದಂತೆ ವಿವಿಧ ವ್ಯವಸ್ಥೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಹಮ್ಮದ ರೋಷನ್‌, ಅಪರ ಜಿಲ್ಲಾಧಿಕಾರಿ ಡಾ.ಎನ್‌.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಡಿ.ವೈ.ಸ್ಪಿ ಶಿವಾನಂದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್‌.ಎಸ್‌.ರಾಘವೇಂದ್ರಸ್ವಾಮಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಬಾಬಾ ಮುದ್ದೇಬಿಹಾಳ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ ಹೆಬ್ಬಳ್ಳಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರವೀಣ, ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್‌.ರಂಗನಾಥ್‌, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲಲಿತಾ, ತಹಸೀಲ್ದಾರ ಗಿರೀಶ ಸ್ವಾದಿ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಹೋಟೆಲ್‌ ಮಾಲೀಕರ ಸಂಘದ ಪ್ರಕಾಶ ಶೆಟ್ಟಿ, ರಮೇಶ ಕಡಕೋಳ, ರಮೇಶ ಆನವಟ್ಟಿ, ಪ್ರಭು ಹಿಟ್ನಳ್ಳಿ ಇತರರು ಉಪಸ್ಥಿತರಿದ್ದರು.

click me!