ಸಮೃದ್ಧಿ ಸ್ವಾವಲಂಬಿ ಭಾರತವನ್ನು ನಾವೆಲ್ಲರೂ ಸೇರಿ ಕಟ್ಟಬೇಕಿದೆ, ಇವೆಲ್ಲದಕ್ಕೂ ಗೃಹಿಣಿ ಪ್ರಮುಖ ಪಾತ್ರರಾಗಿರುತ್ತಾರೆ.
ಶಿರಾ : ಸಮೃದ್ಧಿ ಸ್ವಾವಲಂಬಿ ಭಾರತವನ್ನು ನಾವೆಲ್ಲರೂ ಸೇರಿ ಕಟ್ಟಬೇಕಿದೆ, ಇವೆಲ್ಲದಕ್ಕೂ ಗೃಹಿಣಿ ಪ್ರಮುಖ ಪಾತ್ರರಾಗಿರುತ್ತಾರೆ.
ಗಾಂಧಿ ಸ್ಮೃತಿ, ಜನ ಜಾಗೃತಿ ಜಾಥಾ ಮತ್ತು ಪಾನಮುಕ್ತ ಸದಸ್ಯರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣಾಭಿವೃದ್ಧಿ ಸಂಸ್ಥೆ ಪಾನಮುಕ್ತ ಸದಸ್ಯರ ಸಮಾವೇಶಗಳಂತಹ ಕಾರ್ಯಕ್ರಮ ನಡೆಸಿ ಗ್ರಾಮೀಣ ಭಾಗದ ಮಧ್ಯ ವ್ಯಸನಿಗಳಿಗೆ ದ ಅನಿವಾರ್ಯತೆ ಮತ್ತು ಅವಶ್ಯಕತೆ ಬಗ್ಗೆ ತಿಳಿ ಹೇಳುವುದರ ಮೂಲಕ ಉತ್ತಮ ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಧರ್ಮಸ್ಥಳ ಸಂಸ್ಥೆಯು ಹಲವು ರೀತಿಯಲ್ಲಿ ಗ್ರಾಮೀಣ ಭಾಗದ ಜನರ ಏಳಿಗೆಗೆ ಶ್ರಮಿಸುತ್ತಾ ಬಂದಿದ್ದು, ಜನರಿಗೆ ವಿವಿಧ ಕೊಡುಗೆ ನೀಡುತ್ತಾ ಒಂದು ಉತ್ತಮ ಸಂಘ ಸಂಸ್ಥೆಯಾಗಿ ಬೆಳೆದು ನಿಂತಿದೆ. ಸಮಾಜಮುಖಿ ಸಮಾಜ ಕಟ್ಟುವಲ್ಲಿ ಧರ್ಮಸ್ಥಳ ಸಂಘ ಹಾಗೂ ಸಂಘದ ಸಿಬ್ಬಂದಿ ಹಗಲಿರುಳೆನ್ನದೇ ದುಡಿಯುತ್ತಿದ್ದು, ಅವರೆಲ್ಲರಿಗೂ ಧನ್ಯವಾದ ಎಂದರು.
undefined
ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಎಸ್.ಆರ್.ಗೌಡ ಮಾತನಾಡಿ, ಮದ್ಯಪಾನ ವ್ಯಸನಿಗಳಾಗಿ ಜೀವನವೇ ವ್ಯರ್ಥ ಎನ್ನುವ ಸಂದರ್ಭದಲ್ಲಿದ್ದ ಎಷ್ಟೋ ಜನ ರೈತರು, ನಾಗರಿ ಕರಿಗೆ ಧರ್ಮಸ್ಥಳ ಸಂಸ್ಥೆ ಮದ್ಯವರ್ಜನ ಶಿಬಿರವನ್ನು ಏರ್ಪಡಿಸಿ ಮದ್ಯವೆಸನಿಗಳಿಗೆ ಉತ್ತಮ ಜೀವನ ರೂಪಿಸಿಕೊಟ್ಟಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷರಾದ ಎಸ್.ಕೆ ರಾಮಚಂದ್ರ ಗುಪ್ತ, ನಗರಸಭೆ ಅಧ್ಯಕ್ಷೆ ಪೂಜಾ ಪೆದ್ದರಾಜು, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಸೀನಪ್ಪ, ಜಿಲ್ಲಾ ನಿರ್ದೇಶಕ ದಿನೇಶ್, ತಾಲೂಕು ನಿರ್ದೇಶಕರಾದ ಸದಾಶಿವ ಗೌಡ, ರಮೇಶ್, ಸಮಾಜ ಸೇವಕರಾದ ರಮೇಶ್ ಬಾಬು, ರಾಜ ಅಶ್ವತ್ ನಾರಾಯಣ್, ಸೋಮಶೇಖರ, ತಾವರೆಕೆರೆ ದೇವರಾಜ್, ಎಸ್ ಎನ್ ನಾಗರಾಜು, ಶೋಭಾ ನಾಗರಾಜು ಇದ್ದರು.
ಅಕ್ಚರ ಜ್ನಾನದಿಂದ ಅಭಿವೃದ್ದಿ
ಮಧುಗಿರಿ : ವಿದ್ಯಾರ್ಥಿಗಳು ಓದುವ, ಬರೆಯುವ ಮನೋಭಾವ ಬೆಳೆಸಿಕೊಳ್ಳಬೇಕು. ದೇಶದ ಪ್ರಗತಿಗೆ, ಸಮಾಜದ ಅಭಿವೃದ್ಧಿಗೆ ಅಕ್ಷರ ಜ್ಞಾನ ಪೂರಕವಾಗಿರಲಿ. ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡುವ ಬದಲು ಗುಣಾತ್ಮಕ ಶಿಕ್ಷಣ ಕೊಡುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಕರೆ ನೀಡಿದರು.
ಭಾನುವಾರ ಪಟ್ಟಣದ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ವೀರಶೈವ ನಿಲಯ, ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘ, ವೀರಶೈವ ಲಿಂಗಾಯತ ಸೇವಾ ಟ್ರಸ್ಟ್ ಹಾಗೂ ಅಕ್ಕಮಹಾದೇವಿ ಸಮಾಜದ ವತಿಯಿಂದ 2023-24ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನ ಬಸವಣ್ಣರವರ ಕಾಯಕ ತತ್ವಕ್ಕೆ ಪ್ರಾಧಾನ್ಯ ನೀಡಿತ್ತು. ಆದರೆ ಇಂದು ಬಸವಣ್ಣನವರ ಆದರ್ಶ -ತತ್ವಗಳನ್ನು ಫಾಲಿಸದಿರುವುದು ವಿಷಾದದ ಸಂಗತಿ, ಅವರು ಹೇಳಿದಂತೆ ಇಂದಿನ ಸಮಾಜದಲ್ಲಿ ನಾವು ಬಾಳಿ ತೋರಿಸಬೇಕಿದೆ. ಶ್ರಮವಿಲ್ಲದೆ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲಾಗದು. ಏಕಾಗ್ರತೆ, ಅಧ್ಯಯನ ಶೀಲತೆ ಗುರು -ಹಿರಿಯಿರಿಗೆ ಗೌರವ ಭಾವವನ್ನು ತಮ್ಮ ಜೀವನದಲ್ಲಿ ಬೆಳೆಸಿಕೊಳ್ಳಬೇಕು. ನವ ಸಮಾಜ ನಿರ್ಮಾಣ ಯುವ ಜನಾಂಗದಿಂದ ಮಾತ್ರ ಸಾಧ್ಯ ಎಂದರು.
ಸಮುದಾಯದ ಹಾಸ್ಟೆಲ್ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಸಂಸದ ಜಿ.ಎಸ್. ಬಸವರಾಜು ಸಮುದಾಯದ ಏಳಿಗೆಗೆ ಸಹಕಾರ ನೀಡಲಿದ್ದು. ಸಿದ್ದರಬೆಟ್ಟ ಕ್ಷೇತ್ರದ ಕೀರ್ತಿ ನಾಡಿನಾದ್ಯಂತ ಹರಡುತ್ತಿದ್ದು ಕ್ಷೇತ್ರದ ಪ್ರಗತಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪ್ರತಿಯೊಬ್ಬರು ತಮ್ಮ ಕೈಲಾದಷ್ಟು ಸಹಕಾರ ನೀಡಿ ಸಮುದಾಯದ ಏಳಿಗೆಗೆ ಪ್ರೋತ್ಸಾಹಿಸಬೇಕು. ಎಲ್ಲರ ಸಹಕಾರದಿಂದ ಒಂದು ಬಲಿಷ್ಠ ಸಮಾಜ ಕಟ್ಟಲು ಸಾಧ್ಯ ಎಂದರು.
ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀಕ್ಷೇತ್ರ ಸಿದ್ಧರಬೆಟ್ಟದ ಪೀಠಾಧ್ಯಕ್ಷ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಬೇಕು. ಮಕ್ಕಳು ಪ್ರತಿದಿನ ಪೋಷಕರ ಚಟುವಟಿಕೆಗಳನ್ನು ಗಮನಿಸುತ್ತಾರೆ. ಉದ್ಯೋಗ ಕೇವಲ ಹಣ ಗಳಿಸಲಷ್ಠೇ ಸೀಮಿತವಾಗಬಾರದು. ಆಚಾರ-ವಿಚಾರ,ಶಿವಪೂಜೆ, ಲಿಂಗ ಧಾರಣೆ, ಭಸ್ಮಧಾರಣೆ ಜೊತೆಗೆ ನವು ಹೇಳಿದ್ದನ್ನು, ನೋಡಿದ್ದನ್ನು ಹೆಚ್ಚು ಅಳವಡಿಸಿಕೊಳ್ಳುತ್ತಾರೆ. ಆದ ಕಾರಣ ನಮ್ಮ ಭಾರತೀಯ ಸನಾತನ ಸಂಸ್ಕೃತಿ ಮರೆಯದೇ ಸಂಸ್ಕಾರವಂತರಾಗಬೇಕು. ಸಂಸ್ಕಾರದಿಂದ ಮಕ್ಕಳು ವಂಚಿತರಾದರೇ ಪೋಷಕರು ಕೂಡಿಟ್ಟ ಆಸ್ತಿ ಸಾಕಾಗುವುದಿಲ್ಲ, ಆದ್ದರಿಂದ ಪೋಷಕರು ಆಚಾರವಂತರಾದರೆ ಮಾತ್ರ ಮಕ್ಕಳು ಸಂಸ್ಕಾರವಂತರಾಗುತ್ತರೆ. ಶಿಕ್ಷಣಕ್ಕೆ ಉತ್ತೇಜನ ನೀಡಿದರೆ ಉತ್ತಮ ಪರಿಸರ ನಿರ್ಮಾಣವಾಗಲಿದೆ. ಸಹಕಾರ ಸಚಿವ ಕೆ.ಎನ್. ರಾಜಣ್ಣ ಬದ್ಧತೆ ಇರುವ ರಾಜಕಾರಣಿ ಎಂದರು.