ಅಧಿಕಾರಿಗಳ ಎಡವಟ್ಟಿನಿಂದ ಬೀದಿಗೆ ಬಿದ್ದ ಬಡ ಕುಟುಂಬ: ಸಿಎಂ ತವರು ಜಿಲ್ಲೆಯಲ್ಲೇ ಇದೆಂಥಾ ಅನ್ಯಾಯ!

By Ravi Janekal  |  First Published Jan 20, 2023, 2:09 PM IST

ಮನೆನೂ ಇಲ್ಲ, ಪರಿಹಾರಾನೂ ಇಲ್ಲ. ಬದುಕಿಗೆ ನೆಮ್ಮದಿ ಇಲ್ಲದಂತಾಗಿದೆ. ಮನೆ ಮನೆ ಅಂತ ಅಲೆದಾಡಿ ಸಾಕಾಯ್ತು. ಚಪ್ಪಲಿ ಸವಿದು ಹೋದ್ವು. ದೇವರಿಗೂ ಕರುಣೆ ಇಲ್ಲ. ಅಧಿಕಾರಿಗಳಂತೂ ಕಣ್ಣಿದ್ದೂ ಕುರುಡರು. ಮನೆ ಕಟ್ಟೋಕೆ ದುಡ್ಡು ಕೊಡಿ' ಎಂದು ಬಡ ಕುಟುಂಬದ ದಂಪತಿ ಊರ ಜನರ ಬಳಿ ಭಿಕ್ಷೆ ಬೇಡಿದ ಘಟನೆ ನಡೆದಿದೆ.


ವರದಿ- ಪವನ್ ಕುಮಾರ್

ಹಾವೇರಿ ( ಜ. 20) : ಅಧಿಕಾರಿಗಳ ಎಡವಟ್ಟಿನಿಂದ ಬಡಕುಟುಂಬಕ್ಕೆ  ಮನೆನೂ ಇಲ್ಲ, ಪರಿಹಾರಾನೂ ಇಲ್ಲ. ಬದುಕಿಗೆ ನೆಮ್ಮದಿ ಇಲ್ಲದಂತಾಗಿದೆ. ಮನೆ ಮನೆ ಅಂತ ಅಲೆದಾಡಿ ಸಾಕಾಯ್ತು. ಚಪ್ಪಲಿ ಸವಿದು ಹೋದ್ವು. ದೇವರಿಗೂ ಕರುಣೆ ಇಲ್ಲ. ಅಧಿಕಾರಿಗಳಂತೂ ಕಣ್ಣಿದ್ದೂ ಕುರುಡರು. ಮನೆ ಕಟ್ಟೋಕೆ ದುಡ್ಡು ಕೊಡಿ' ಎಂದು ಬಡ ಕುಟುಂಬದ ದಂಪತಿ ಊರ ಜನರ ಬಳಿ ಭಿಕ್ಷೆ ಬೇಡಿದ ಘಟನೆ ನಡೆದಿದೆ.

Tap to resize

Latest Videos

undefined

ಕಳೆದ ವರ್ಷದ ಮಳೆಗಾಲದಲ್ಲಾದ ಅತೀವೃಷ್ಟಿಯಿಂದ ಮನೆ ಕಳೆದುಕೊಂಡವರ ಬದುಕು  ಅಕ್ಷರಶಃ ನರಕವಾಗಿದೆ. ನಿಜವಾದ ಸಂತ್ರಸ್ತರಿ  ಪರಿಹಾರವೇ ಸಿಗುತ್ತಿಲ್ಲ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಮಾಸಣಕಟ್ಟಿ(Masanakatte) ಗ್ರಾಮದ ಬಡ ಕುಟುಂಬ ಮನೆ ಕಳೆದುಕೊಂಡು ಕಣ್ಣೀರಿಡುತ್ತಿದೆ.

Haveri: ಮದ್ಯ ಮುಕ್ತ ಗ್ರಾಮಕ್ಕಾಗಿ ಪ್ರತಿಭಟನೆ, ಎಣ್ಣೆ ಹೊಡೆಯಲು ಬಂದ ತಾತನ ಬಾಟಲ್ ನೆಲಕ್ಕೆಸೆದು ಮಹಿಳೆಯರ ಆಕ್ರೋಶ

ಇವರ ಪಾಲಿಗೆ ಸರ್ಕಾರ, ಡಿಸಿ ಕಚೇರಿ ಇದ್ದೂ ಇಲ್ಲದಂತಾಗಿದೆ. ಅಧಿಕೃತ ಮನೆ ಅಂತ ನಮೂದಿಸೋರು ಅಧಿಕಾರಿಗಳೇ. ಕೊನೆಗೆ ಅನಧಿಕೃತ ಮನೆ ಅಂತ ದಾಖಲಿಸೋದೂ ಅಧಿಕಾರಿಗಳೇ! ಅಧಿಕಾರಿಗಳ ಕಣ್ಣಾ ಮುಚ್ಚಾಲೆ ಆಟಕ್ಕೆ ಬಡ ಕುಟುಂಬ ಬೀದಿಗೆ ಬಿದ್ದು ಸೂರು ಕಟ್ಟಿಕೊಳ್ಳಲು ಜನರ ಬಳಿ ಭಿಕ್ಷೆ ಬೇಡುವಂತಾಗಿದೆ.

ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಮಾಸಣಕಟ್ಟಿ ಗ್ರಾಮದ ಬಡ ಕುಟುಂಬದ ಕಣ್ಣೀರ ಕಹಾನಿ  ಇದು. 4 ವರ್ಷ ತಗಡಿನ ಗುಡಿಸಲಿನಲ್ಲೇ ಈ ಕುಟುಂಬದ ವಾಸವಾಗಿದೆ. ಅಧಿಕಾರಿಗಳ  ಎಡವಟ್ಟಿಗೆ ಬಡ ಕುಟುಂಬ ಕಂಗಾಲಾಗಿದ್ದು, ಡಿಸಿ ಕಚೇರಿ, ತಹಶಿಲ್ದಾರರ ಕಚೇರಿಗೆ ಅಲೆದು ಸುಸ್ತಾಗಿದ್ದಾರೆ. ಅಧಿಕಾರಿಗಳ ಮುಂದೆ ಗೋಗರೆದು ಅತ್ತರೂ ಇವರ ಕೂಗು ಅಧಿಕಾರಿಗಳಿಗೆ ಕೇಳಲಿಲ್ಲ. 

ದೇವೇಂದ್ರಪ್ಪ, ದ್ಯಾಮವ್ವ ದಂಪತಿಗಳ ಗೋಳು ಕೇಳೋರಿಲ್ಲದಂತಾಗಿದೆ. ಮನೆ ಹಕ್ಕು ಪತ್ರ ಇದ್ರೂ 
ಅನಧಿಕೃತ ಮನೆ ಅಂತ ದಾಖಲಿಸಿ  ಗ್ರಾಮ ಲೆಕ್ಕಾದಿಕಾರಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಡವಟ್ಟು ಮಾಡಿದ್ದಾರೆ. ಇವರ ಬೇಜವಾಬ್ದಾರಿತನ, ನಿರ್ಲಕ್ಷ್ಯದಿಂದ ಬಡಕುಟುಂಬವೊಂದು ಬೀದಿಗೆ ಬಿದ್ದಿದೆ.

2019 ರಲ್ಲಿಯೇ ಅತಿವೃಷ್ಟಿಯಿಂದ ದ್ಯಾಮವ್ವ- ದೇವೆಂದ್ರಪ್ಪ ದಂಪತಿ ಮನೆ ಕಳೆದುಕೊಂಡಿದ್ದಾರೆ. ಅಂದು ಮನೆ ಬಿದ್ದ ಬಗ್ಗೆ ಪರಿಶೀಲನೆ ನಡೆಸಿದ್ದ ಪಿಡಿಓ ಹಾಗೂ ಗ್ರಾಮ ಲೆಕ್ಕಾಧಿಕಾರಿ ಅನಧಿಕೃತ ಮನೆ ಅಂತ ನಮೂದಿಸಿ ವರದಿ ನೀಡಿದ್ದಾರೆ. ಮೊದಲ ಕಂತಿನ ಹಣವಾಗಿ 1 ಲಕ್ಷ ರೂಪಾಯಿ ಬಂದಿದ್ದರೂ ಅನಧಿಕೃತ ಮನೆ ಅಂತ ನಮೂದು ಮಾಡಿದ್ದಕ್ಕೆ ಬಾಕಿ ಪರಿಹಾರ 4 ಲಕ್ಷ ರೂಪಾಯಿ ಬಿಡುಗಡೆಯೇ ಆಗಿಲ್ಲ.

ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು: ಕುಮಾರಸ್ವಾಮಿ

ಈ ಕುರಿತು ತಹಶೀಲ್ದಾರರಿಗೂ ಮನವಿ ಸಲ್ಲಿಸಲಾಗಿತ್ತು. ತಹಶೀಲ್ದಾರರ ಸೂಚನೆ ಮೇರೆಗೆ ಮತ್ತೆ ಪರಿಶೀಲನೆ ನಡೆಸಿ ಅಧಿಕೃತ ಮನೆ ಎಂದು ಅದೇ ವಿಲೇಜ್ ಅಕೌಂಟೆಂಟ್, ಪಿಡಿಒ ಪುನಃ ವರದಿ ನೀಡ್ತಾರೆ. ಮನೆ ಅಧಿಕೃತ ಅಂತ ಬಂದಿದ್ದೇ ತಡ ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರಿಹಾರ ಮಂಜೂರು ಮಾಡಿ ಎಂದು 
ರಾಜೀವ್ ಗಾಂಧಿ ವಸತಿ ನಿಗಮಕ್ಕೆ  ಡಿಸಿ ಪತ್ರ ಕೂಡಾ ಬರೆದಿದ್ರು.ಆದರೆ ಇದುವರೆಗೂ ಯಾವುದೇ ಪ್ರಯೋಜನ ಆಗಿಲ್ಲ. ಮನೆ ಮಕ್ಕಳು ಗುಡಿಸಲಿನ ಕತ್ತಲಲ್ಲೇ ವಿದ್ಯಾಭ್ಯಾಸ ಮಾಡಬೇಕು.
ಚಿಕ್ಕ ಶೆಡ್ ನಲ್ಲಿಯೇ  ಕುಟುಂಬ  ವಾಸಿಸುತ್ತಿದೆ. ಅಧಿಕಾರಿಗಳು ಬಡ ಕುಟುಂಬಕ್ಕೆ ಶೀಘ್ರ ವಸತಿ ವ್ಯವಸ್ಥೆ ಮಾಡಲಿ. ಈ ಘಟನೆಯಲ್ಲಿ ಬೇಜವಾಬ್ದಾರಿ ತೋರಿದ ಪಂಚಾಯಿತಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಿ ಎಂದು ಗ್ರಾಮಸ್ಥರ ಒತ್ತಾಯಿಸಿದ್ದಾರೆ.

click me!