ನನ್ನ ಸ್ಥಿತಿ ಯಾವ ಗಂಡಸಿಗೂ ಬರಬಾರದು: ಪತಿಯ ಡೆತ್ ನೋಟ್!

By Web Desk  |  First Published Jun 12, 2019, 9:59 PM IST

ಸುಖ ಸಂಸಾರದ ಕನಸು ಹೊತ್ತು ಮದುವೆಯಾಗಿದ್ದ ವ್ಯಕ್ತಿಯೋರ್ವ ನನ್ನ ಸ್ಥಿತಿ ಯಾವ ಗಂಡಸರಿಗೂ ಬರಬಾರದು ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 


ಕೊಪ್ಪಳ, (ಜೂನ್.12): ಹೆಂಡತಿಯ ಸುಳ್ಳು ಕೇಸ್ ಮತ್ತು ಪಿಎಸ್‌ಐ ಕಿರುಕುಳದಿಂದ ಬೇಸತ್ತ ವ್ಯಕ್ತಿಯೋರ್ವ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

ದೊಡ್ಡಬಸವರಾಜ್ ಎಂಬಾತ ಡೆತ್ ನೋಟ್ ಬರೆದಿಟ್ಟು ಇಂದು (ಬುಧವಾರ) ಬೆಳಿಗ್ಗೆ ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Tap to resize

Latest Videos

ಗಂಡ [ದೊಡ್ಡ ಬಸವರಾಜ್] ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾನೆಂದು ಪತ್ನಿ ಶಿಲ್ಪಾ ಪತಿ ವಿರುದ್ಧ ಸುಳ್ಳು ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪಿಎಸ್ಐ ಅಮರೇಶ್, ದೊಡ್ಡ ಬಸವರಾಜನಿಗೆ ಕಿರುಕುಳ ನೀಡಿದ್ದಾನೆ.  

 ಇದರಿಂದ ಮನನೊಂದು ದೊಡ್ಡಬಸವರಾಜ್, ಪತ್ನಿ ಮತ್ತು ಪೊಲೀಸ್ ಅಧಿಕಾರಿ ವಿರುದ್ಧ ಮೂರು ಪುಟದ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ. ನನ್ನ ಸ್ಥಿತಿ ಯಾವ ಗಂಡಸರಿಗೂ ಬರಬಾರದು ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾನೆ.

ಇನ್ನು ದೊಡ್ಡ ಬಸವರಾಜ್ ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕೆಂದು ಸಂಬಂಧಿಕರು ಪ್ರತಿಭಟನೆ ಮಾಡಿದರು.

click me!