ದಕ್ಷಿಣ ಕನ್ನಡ ಮುಸ್ಲಿಂ ಸಂಘಟನೆಗಳು ಅಕ್ರಮ ಗೋವು ಸಾಗಣೆ ವಿರುದ್ಧ ತಿರುಗಿ ಬಿದ್ದಿವೆ. ಅಲ್ಲದೇ ಅಕ್ರಮವಾಗಿ ಸಾಗಿಸಿದ ಗೋ ಮಾಂಸ ಸೇವನೆ ಸಂಬಂಧವೂ ಕೂಡ ಫತ್ವಾ ಹೊರಡಿಸಲು ಮನವಿ ಮಾಡಿವೆ.
ಮಂಗಳೂರು : ಅಕ್ರಮ ಗೋವು ಸಾಗಾಟದ ವಿರುದ್ದ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಸಂಘಟನೆಗಳು ಗರಂ ಆಗಿವೆ.
ಅಕ್ರಮ ಗೋ ದಂಧೆಕೋರರ ವಿರುದ್ಧ ಮುಸ್ಲಿಂ ಸಂಘಟನೆಗಳ ಒಕ್ಕೂಟ ಆಕ್ರೋಶ ಗೊಂಡಿವೆ. ಗೋವುಗಳನ್ನು ಕಳ್ಳತನ ಮಾಡುವವರ ವಿರುದ್ಧ ಫತ್ವಾ ಹೊರಡಿಸಲು ಧಾರ್ಮಿಕ ಮುಖಂಡರಿಗೆ ಆಗ್ರಹಿಸಲಾಗಿದೆ.
ಅಕ್ರಮವಾಗಿ ಗೋವುಗಳನ್ನು ಸಾಗಿಸುವುದು ಹರಾಂ ಎಂದು ಫತ್ವಾ ಹೊರಡಿಸಲು ಹಾಗೂ ಅಕ್ರಮವಾಗಿ ಸಾಗಿಸಿದಂತಹ ಗೋವುಗಳ ಮಾಂಸ ಸೇವನೆಯೂ ಹರಾಂ ಎಂದು ಫತ್ವಾ ಹೊರಡಿಸಲು ಮುಸ್ಲಿಂ ಸಂಘಟನೆಗಳು ಮನವಿ ಮಾಡಿವೆ.
ಇನ್ನು ಇದೇ ವೇಳೆ ಮುಸ್ಲಿಂ ಸಂಘಟನೆಗಳಿಂದ ಮತ್ತೊಂದು ಮಹತ್ವದ ನಿರ್ಧಾರ ಮಾಡಿದ್ದು, ಕಾನೂನು ಪ್ರಕಾರವೇ ಗೋ ಮಾಂಸ ಸೇವನೆಗೆ ಒತ್ತು ನೀಡಬೇಕು ಎಂದು ಹೇಳಿವೆ.
ಕೆಲವೇ ದಿನಗಳ ಹಿಂದೆ ಉಜಿರೆಯಲ್ಲಿ ಅಕ್ರಮ ಗೋವು ಸಾಗಾಟದ ಘಟನೆ ವರದಿಯಾದ ಬೆನ್ನಲ್ಲೇ ಇದೀಗ ದಕ್ಷಿಣ ಕನ್ನಡ ಮುಸ್ಲಿಂ ಸಂಘಟನೆಗಳು ಇಂತಹ ಕೃತ್ಯದ ವಿರುದ್ಧ ತಿರುಗಿ ಬಿದ್ದಿವೆ.