Chikkamagaluru: ಕಚ್ಚಿದ ಹಾವನ್ನೇ ಹಿಡಿದು ಆಸ್ಪತ್ರೆಗೆ ತಂದ: ಕೊಳಕು ಮಂಡಲ ಕಂಡು ಹೌಹಾರಿದ ಜನ

Published : Dec 28, 2022, 12:42 PM IST
Chikkamagaluru: ಕಚ್ಚಿದ ಹಾವನ್ನೇ ಹಿಡಿದು ಆಸ್ಪತ್ರೆಗೆ ತಂದ: ಕೊಳಕು ಮಂಡಲ ಕಂಡು ಹೌಹಾರಿದ ಜನ

ಸಾರಾಂಶ

ತನ್ನ ಕಾಲಿಗೆ ಕಚ್ಚಿದ ಹಾವೊಂದನ್ನು ಹಿಡಿದುಕೊಂಡೇ ಆಸ್ಪತ್ರೆಗೆ ಬಂದ ಪ್ರಸಂಗ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದೆ. ಊರಿಗೆ ತೆರಳಲೆಂದು ರೈಲ್ವೇ ನಿಲ್ದಾಣದ ಬಳಿ ನಿಂತಿದ್ದ ಆಸೀಫ್ ಎಂಬಾತನಿಗೆ ಕೊಳಕುಮಂಡಲ ಹಾವು ಕಚ್ಚಿದೆ.

ಚಿಕ್ಕಮಗಳೂರು (ಡಿ.28): ತನ್ನ ಕಾಲಿಗೆ ಕಚ್ಚಿದ ಹಾವೊಂದನ್ನು ಹಿಡಿದುಕೊಂಡೇ ಆಸ್ಪತ್ರೆಗೆ ಬಂದ ಪ್ರಸಂಗ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದೆ. ಊರಿಗೆ ತೆರಳಲೆಂದು ರೈಲ್ವೇ ನಿಲ್ದಾಣದ ಬಳಿ ನಿಂತಿದ್ದ ಆಸೀಫ್ ಎಂಬಾತನಿಗೆ ಕೊಳಕುಮಂಡಲ ಹಾವು ಕಚ್ಚಿದೆ. ತನಗೆ ಕಚ್ಚಿದ ಹಾವನ್ನೇ ಹಿಡಿದುಕೊಂಡು ಆತ ತರೀಕೆರೆ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾನೆ. 

ಕೈಯಲ್ಲಿ ಹಾವು ಹಿಡಿದು ಆಸ್ಪತ್ರೆಗೆ ಬಂದದ್ದನ್ನು ಕಂಡು ಆಸ್ಪತ್ರೆಯ ಸಿಬ್ಬಂದಿ ಮತ್ತು ಅಲ್ಲಿದ್ದ ಸಾರ್ವಜನಿಕರು ಹೌಹಾರಿದ್ದಾರೆ. ಆಸ್ಪತ್ರೆಯಲ್ಲಿ ಆಸೀಫ್‍ಗೆ ಚಿಕಿತ್ಸೆ ನೀಡಲಾಗಿದೆ. ಕೊಲ್ಕತ್ತ ಮೂಲದ ಆಸೀಫ್ ತರೀಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಕೆಲಸಕ್ಕೆಂದು ಬಂದಿದ್ದ ವ್ಯಕ್ತಿ. ಊರಿಗೆ ಹೋಗಲೆಂದು ತರೀಕೆರೆ ರೈಲ್ವೇ ನಿಲ್ದಾಣದ ಬಳಿ ಕಾಯುತ್ತಾ ನಿಂತಿದ್ದಾಗ. ಕುರುಚಲು ಕಾಡಿನಲ್ಲಿದ್ದ ಕೊಳಕಮಂಡಲ ಹಾವು ಕಚ್ಚಿದೆ.

ಕೋವಿಡ್ ರೂಲ್ಸ್ ಮರೆತ ಬೆಂಗಳೂರು ಜನತೆ: ಸಿಲಿಕಾನ್ ಸಿಟಿ ಬಸ್‌ಗಳಲ್ಲಿ ಮಾಸ್ಕ್ ಮಾಯ

ಹೆದ್ದಾರಿಯಲ್ಲಿ ಹಾವು, ಸರಣಿ ಅಪಘಾತ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹಠಾತ್‌ನೇ ಬೃಹತ್‌ ಗಾತ್ರದ ಹಾವೊಂದು ಅಡ್ಡಬಂದಿದ್ದರಿಂದ ಅದರ ಮೇಲೆ ಲಾರಿ ಹರಿಯುವುದನ್ನು ತಪ್ಪಿಸಲು ಚಾಲಕ ದಿಢೀರನೆ ಬ್ರೇಕ್‌ ಹಾಕಿದ ಪರಿಣಾಮ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿರುವ ಘಟನೆ ಬೆಳಗ್ಗೆ ನಡೆದಿದೆ. ನಗರದ ಹೊರ ವಲಯದ ಅಗಲಗುರ್ಕಿಯ ಸಮೀಪದ ಬೆಂಗಳೂರು-ಹೈದ್ರಾಬಾದ್‌ ನಡುವಿನ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಈ ಘಟನೆ ನಡೆದಿದ್ದು ಅಪಘಾತದಲ್ಲಿ ನಾಲ್ಕೈದು ವಾಹನಗಳು ನಜ್ಜುಗುಜ್ಜಾಗಿವೆ. ಅನೇಕ ಮಂದಿ ಗಾಯಗೊಂಡಿದ್ದಾರೆ.

ಆಗಿದ್ದೇನು: ಅಗಲಗುರ್ಕಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಬ್ಬಾವು ಚಲಿಸುತ್ತಿತ್ತು. ಇದೇ ಸಮಯಕ್ಕೆ ವೇಗವಾಗಿ ಬಂದ ಲಾರಿ ಚಾಲಕ ಅದನ್ನು ನೋಡಿ ತಕ್ಷಣ ಬ್ರೇಕ್‌ ಹಾಕಿದ್ದಾನೆ. ಇದರಿಂದ ಲಾರಿ ಹಿಂಬಲಿಸಿ ಬರುತ್ತಿದ್ದ 1 ಟಾಟಾ ಏಸ್‌, 2 ಕಂಟೈನರ್‌ ಲಾರಿಗಳು, 1 ಕಾರು, 1 ಟಿಪ್ಪರ್‌ ನಡುವೆ ಒಂದರ ಹಿಂದೆ ಒಂದು ಬಂದು ರಭಸವಾಗಿ ಡಿಕ್ಕಿ ಹೊಡೆದಿವೆ.

ಮನೆ ಕಟ್ಟುವ ವಿಚಾರಕ್ಕೆ ಯುವಕ ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ

ಟಾಟಾ ಏಸ್‌ ಚಾಲಕ ಸ್ಥಿತಿ ಗಂಭೀರ: ಸರಣಿ ಅಪಘಾತ ವೇಳೆ ಟಾಟಾ ಏಸ್‌ ಚಾಲಕನ ಸ್ಥಿತಿ ತೀವ್ರ ಗಂಭೀರವಾಗಿದೆ. ಕೂಡಲೇ ಆತನನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ. ಮತ್ತೊಂದಡೆ ಟಿಪ್ಪರ್‌ ಲಾರಿ ಚಾಲಕ ಅಪಘಾತದ ವೇಳೆ ಟಿಪ್ಪರ್‌ ಲಾರಿಯಲ್ಲಿಯೆ ಸಿಲುಕಿ ರಕ್ಷಣೆಗಾಗಿ ಚೀರಾಡಿದ್ದಾನೆ. ವಿಷಯ ತಿಳಿದ ಕೂಡಲೇ ಅಪಘಾತದ ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

PREV
Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
ಎಚ್‌ಡಿಕೆ ಮನುವಾದಿ ಆಗಿದ್ದಾರೆ ಎಂದ ಸಿದ್ದು: ಸಿದ್ದರಾಮಯ್ಯ ಮಜಾವಾದಿ ಎಂದ ಎಚ್‌ಡಿಕೆ