ವಿದೇಶಿ ಪ್ರಜೆಗಳಿಗೆ ಇದೀಗ ಭಾರತದ ನೆಲ, ಇಲ್ಲಿನ ಸಂಸ್ಕೃತಿ ಬಗ್ಗೆ ಅತ್ಯಂತ ಗೌರವ, ಹೆಮ್ಮೆ ಇದೆ. ಇಲ್ಲಿನ ಆಚಾರ, ವಿಚಾರ, ಭಾಷೆಯನ್ನು ಕಲಿಯುಲು ವಿದೇಶಿ ಪ್ರಜೆಗಳ ವಿದ್ಯಾರ್ಥಿಗಳಲ್ಲಿ ಅತ್ಯಂತ ಆಸಕ್ತಿ ಎದ್ದು ಕಾಣುತ್ತಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಸೆ.28): ವಿದೇಶಿ ಪ್ರಜೆಗಳಿಗೆ ಇದೀಗ ಭಾರತದ ನೆಲ, ಇಲ್ಲಿನ ಸಂಸ್ಕೃತಿ ಬಗ್ಗೆ ಅತ್ಯಂತ ಗೌರವ, ಹೆಮ್ಮೆ ಇದೆ. ಇಲ್ಲಿನ ಆಚಾರ, ವಿಚಾರ, ಭಾಷೆಯನ್ನು ಕಲಿಯುಲು ವಿದೇಶಿ ಪ್ರಜೆಗಳ ವಿದ್ಯಾರ್ಥಿಗಳಲ್ಲಿ ಅತ್ಯಂತ ಆಸಕ್ತಿ ಎದ್ದು ಕಾಣುತ್ತಿದೆ. ಇದರ ಭಾಗವಾಗಿ ಕಾಫಿನಾಡಿಗೆ ಸಂಸ್ಕೃತ ಕಲಿಯೋಕೆ ಇಸ್ರೇಲ್ ದೇಶದ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಅವರು ಹುಟ್ಟಿದ್ದು ಇಸ್ರೇಲ್ ನಲ್ಲಿ. ಅವರಿಗೆ ತಾಯ್ನಾಡಿನ ಸಂಸ್ಕೃತಿಯ ಅರಿವಿದ್ಯೋ ಇಲ್ವೋ ಗೊತ್ತಿಲ್ಲ. ಆದ್ರೆ, ಭಾರತೀಯ ಸಂಸ್ಕೃತಿ, ರೂಢಿ-ಸಂಪ್ರಾದಯ, ಆಚಾರ-ವಿಚಾರಕ್ಕೆ ಮಾತ್ರ ಫುಲ್ ಫಿದಾ ಆಗಿದ್ದಾರೆ. ಇಸ್ರೇಲ್ ನಿಂದ ಬಂದು ಸಂಸ್ಕೃತದ ಅಧ್ಯಯನದಲ್ಲಿರೋ ಆ ವಿದ್ಯಾರ್ಥಿಗಳು ಭಾರತೀಯರು ನಾಚುವಂತೆ ಇಲ್ಲಿನ ಪಂಪರೆ, ಸಂಸ್ಕೃತವನ್ನು ಕಲೆಯುತ್ತಿದ್ದಾರೆ.
ವಾಲ್ಮೀಕ ರಾಮಯಾಣದ ಶ್ಲೋಕಗಳ ಅಧ್ಯಾನ: ಸಂಸ್ಕೃತ ಅಧ್ಯಯನ ಮಾಡಲು ದೂರದ ಇಸ್ರೇಲ್ ನಿಂದ ಚಿಕ್ಕಮಗಳೂರಿನ ಹಿರೇಮಗಳೂರಿನ ಶ್ರೀ ಕೋದಂಡರಾಮ ದೇವಾಲಯಕ್ಕೆ ವಿದ್ಯಾರ್ಥಿಗಳು ಆಗಮಿಸಿದ್ದಾರೆ.ಇಸ್ರೇಲ್ ನಲ್ಲಿ ಸಂಸ್ಕೃತ ದಲ್ಲೇ ಪಿಎಚ್ ಡಿ ಪಡೆದ ಉಪನ್ಯಾಸಕ ರಫಿ ತಮ್ಮ 6ಮಂದಿ ವಿದ್ಯಾರ್ಥಿಗಳೊಂದಿಗೆ ಆಗಮಿಸಿದ್ದಾರೆ.6 ಮಂದಿ ವಿದ್ಯಾರ್ಥಿಗಳು ಇಸ್ರೇಲ್ ನಲ್ಲಿ 2ನೇ ವರ್ಷದ ಬಿ ಎ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಪನ್ಯಾಸಕ ರಫಿ, ತನ್ನ ವಿದ್ಯಾರ್ಥಿಗಳಿಗೆ ಭಾರತದ ಸಂಸ್ಕೃತ, ಭಾಷೆ, ಆಚಾರ-ವಿಚಾರ ತಿಳಿಸೋಕೆ ವಿದ್ಯಾರ್ಥಿಗಳಾದ ಇಲಿಲ್ ,ಜಿವ್ , ಶೌಲ್ , ಮಾಯಾ, ನಾವಿ, ನದಾರ್ವ್ ಎಂಬುವವರನ್ನ ಕರೆತಂದಿದ್ದಾರೆ.
ಪೂಜಾ ಹಡಪದ ಬಲಾತ್ಕಾರ-ಕೊಲೆ: 6 ವರ್ಷದ ಬಳಿಕ ಆರೋಪಿಗೆ ಜೀವಾವಧಿ ಶಿಕ್ಷೆ!
ಇವೆರೆಲ್ಲರೂ ಭಾರತೀಯ ಸಂಸ್ಕೃತಕ್ಕೆ ಮನಸೋತು ಆಸಕ್ತಿಯಿಂದ ಸಂಸ್ಕೃತ ಕಲಿಯೋಕೆ ಮುಂದಾಗಿದ್ದಾರೆ. ಇಸ್ರೇಲ್ ನಲ್ಲಿ ವಿದ್ಯಾಬ್ಯಾಸ ನಡೆಸುತ್ತಿರುವ ಇವರಿಗೆ ಇದೀಗ ಅಧ್ಯನಕ್ಕಾಗಿ ರಜೆ ಸಮಯ, ಈ ಹಿನ್ನೆಲೆ 12 ದಿನಗಳ ಕಾಲ ಸಂಸ್ಕೃತ ಕಲಿಸೋಕೆ ಉಪನ್ಯಾಸಕ ರಫಿ ಜೊತೆ ಭಾರತಕ್ಕೆ ಬಂದಿದ್ದಾರೆ, ಈ ಟೀಮ್ ಸದ್ಯ ಹಿರೇಮಗಳೂರಿನಲ್ಲಿ ವಾಲ್ಮೀಕ ರಾಮಯಾಣ ಮಹಾಕಾವ್ಯದ ಸುಂದರಕಾಂಡದ ಕೆಲ ಶ್ಲೋಕಗಳನ್ನು ಕಲಿಯುತ್ತಿದ್ದಾರೆ. ಇವರ ಮಾತು-ಕಥೆ, ನಯಾ-ವಿನಯ ಮಾತ್ರ ಭಾರತೀಯರು ನಾಚುವಂತಿದೆ. ಸಂಸ್ಕೃತದ ಮೇಲಷ್ಟೆ ಅಲ್ಲದೆ ಭಾರತವಂದ್ರು ಕೂಡ ಇವರಿಗೆ ಅಷ್ಟೆ ಗೌರವ.
ಸಂಸ್ಕೃತದಲ್ಲೇ ಮಾತನಾಡುವಷ್ಟು ಸಮರ್ಥರಾಗಿರುವ ವಿದ್ಯಾರ್ಥಿಗಳು: ಭಾಷೆ ಗೊತ್ತಿಲ್ಲ, ಇಲ್ಯಾರು ಸ್ನೇಹಿತರು-ಸಂಬಂಧಿಗಳಿಲ್ಲ. ಇಲ್ಲಿನ ಊಟ-ತಿಂಡಿಯ ಅರಿವಿಲ್ಲ. ಆದ್ರು ಕೂಡ ಹಿರೇಮಗಳೂರಿನಲ್ಲಿ ಉಳಿದುಕೊಂಡು ಹಗಲಿರುಳು ಸಂಸ್ಕೃತ ಕಲಿಯುತ್ತಿರೋ ಈ ಟೀಮ್ ಭಾರತೀಯ ಪ್ರೀತಿಗೆ ಶಹಬಾಸ್ ಎನ್ನಲೇಬೇಕು. ನಾವು ಜಗತ್ತಿನ ಯಾವುದೇ ದೇಶಕ್ಕೆ ಹೋದ್ರು ಒಂದೆರಡು ರೀತಿಯ ರೂಢಿ-ಸಂಪ್ರದಾಯವನ್ನ ನೋಡ್ಬೋದು. ಆದ್ರೆ, ಭಾರತದಲ್ಲಿ ಮಾತ್ರ ನೂರಾರು ಕಲೆ, ಸಂಸ್ಕೃತಿಯನ್ನ ಕಲಿಯೋಕೆ ಸಾಧ್ಯವೆಂದು ಭಾರತಕ್ಕೆ ಬಂದಿದ್ದೇವೆ ಅಂತಾರೆ ವಿದ್ಯಾರ್ಥಿಗಳು.
ರೈಲ್ವೆ ಇಲಾಖೆಯ ಉದ್ಯೋಗಾವಕಾಶ ಪಡೆಯಿರಿ: ಕೇಂದ್ರ ಸಚಿವ ವಿ.ಸೋಮಣ್ಣ
ಕಳೆದ ಎರಡು ದಿನದಿಂದ ಸಂಸ್ಕೃತ ಕಲೀಯುತ್ತಿರೋ ಇವರು ಆರಂಭದಲ್ಲಿ ಸಂಸ್ಕೃತದ ಜೊತೆ ಇಂಗ್ಲೀಷ್ ಬಳಸುತ್ತಿದ್ರು ಆದ್ರೀಗ, ಸಂಪೂರ್ಣವಾಗಿ ಸಂಸ್ಕೃತದಲ್ಲೇ ಮಾತನಾಡುವಷ್ಟು ಸಮರ್ಥರಾಗಿದ್ದಾರೆ , ಇದರ ಜೊತೆಗೆ ವಿದ್ಯಾರ್ಥಿಗಳು ಭಾರತದ ಭವ್ಯ ಪರಂಪರೆಯಲ್ಲಿ ಭಾವಪರವಶರಾಗಿರುವುದು ಹೆಮ್ಮೆ ವಿಚಾರವೆಂದು ಶಿಕ್ಷಕ ವೈಷ್ಣವ್ ಅಭಿಪ್ರಾಯಿಸಿದ್ದಾರೆ. ಒಟ್ಟಾರೆ, ನಿಜಕ್ಕೂ ಭಾರತೀಯರಿಗೆ ಗರ್ವ ತರುವಂತಹಾ ಸಂಗತಿ ಇದು. ನಮ್ಮ ಸಂಸ್ಕೃತಿಯನ್ನ ಜಗತ್ತೆ ಮೆಚ್ಚಿಕೊಂಡಿದೆ ಇಷ್ಟಪಡ್ತಿದೆ ಎಂದು ಹೆಮ್ಮೆ ಪಡೋದ್ರ ಜೊತೆ ಅದರ ಅಭಿವೃದ್ಧಿ ಹಾಗೂ ಉಳಿವಿಗೆ ನಾವೇನು ಮಾಡ್ತಿದ್ದೇವೆಂಬುದು ಇಲ್ಲಿ ಬಹುಮುಖ್ಯ. ಇನ್ನಾದ್ರು ನಾವುಗಳು ಪಾಶ್ಚಿಮಾತ್ಯ ಸಂಸ್ಕೃತಿಯ ದಾಸರಾಗೋ ಬದ್ಲು ನಾವು-ನಮ್ಮದನ್ನ ಉಳಿಸಿ-ಬೆಳೆಸಿದ್ರೆ ಜಗತ್ತೇ ಭಾರತಕ್ಕೆ ಜೈ ಅನ್ನೋದ್ರಲ್ಲಿ ಎರಡು ಮಾತಿಲ್ಲ.