ದೀಪು-ಪ್ರೇಮಾ ಬದುಕಿನಲ್ಲಿ ಬಿರುಗಾಳಿ: ಮೊಬೈಲ್ ಹಿಡ್ಕೊಂಡು ಜಗಳ ಮಾಡಿದ್ದು ನಿಜವೇ?

Published : Nov 21, 2026, 02:23 PM IST
Premu Deepu

ಸಾರಾಂಶ

ಉತ್ತರ ಕರ್ನಾಟಕದ ಜನಪ್ರಿಯ ವ್ಲಾಗರ್‌ಗಳಾದ ದೀಪು ಮತ್ತು ಪ್ರೇಮಾ ನಡುವೆ ಕೌಟುಂಬಿಕ ಕಲಹ ಶುರುವಾಗಿದ್ದು, ಇಬ್ಬರೂ ಪರಸ್ಪರ ಗಂಭೀರ ಆರೋಪಗಳನ್ನು ಮಾಡಿಕೊಂಡಿದ್ದಾರೆ. ಮಗನ ವಿಚಾರಕ್ಕೆ ಶುರುವಾದ ಜಗಳದ ವಿಡಿಯೋವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಹಂಚಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ವಿಜಯಪುರ: ಉತ್ತರ ಕರ್ನಾಟಕದ ಜನಪ್ರಿಯ ವ್ಲಾಗರ್‌ಗಳಾಗಿರುವ ದೀಪು ಮತ್ತು ಪ್ರೇಮಾ ಅವರ ವೈಯಕ್ತಿಕ ಜೀವನದಲ್ಲಿ ದೊಡ್ಡ ಬಿರುಗಾಳಿಯೇ ಸೃಷ್ಟಿಯಾಗಿದೆ. ಜೀವನದ ಪ್ರತಯೊಂದು ಕ್ಷಣಗಳನ್ನು ಸೆರೆ ಹಿಡಿದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು. ಪ್ರೇಮಾ ತವರು ಮನೆಗೆ ಆಗಮಿಸಿರುವ ದೀಪು ಮಗನನ್ನು ನನ್ನೊಂದಿಗೆ ಕಳುಹಿಸುವಂತೆ ಕೇಳ್ತಾರೆ. ಇಬ್ಬರು ಮೊಬೈಲ್ ಹಿಡಿದುಕೊಂಡು ಎಲ್ಲವನ್ನು ರೆಕಾರ್ಡ್ ಮಾಡಿಕೊಳ್ಳುತ್ತಾ ಜಗಳವಾಡಿದ್ದಾರೆ. ನಿಮ್ಮ ಮಗಳು ನನ್ನ ಮೇಲೆ ಸಂಶಯ ಮಾಡಿಕೊಂಡು ತವರು ಸೇರಿದ್ದಾಳೆ. ಬೈಕ್ ಮೇಲೆ ಓಡಾಡೋದನ್ನು ನಾನು ಸಹ ನೋಡಿದ್ದೇನೆ. ಯಾರು ಆ ವ್ಯಕ್ತಿ ಎಂದು ದೀಪು ಆರೋಪಿಸಿದ್ದಾರೆ.

ಗಂಭೀರ ಆರೋಪಗಳನ್ನು ಮಾಡಿರೋ ಜೋಡಿ!

ದೀಪು ಆರೋಪಕ್ಕೆ ಪ್ರತಿಕ್ರಿಯಿಸಿರುವ ಪ್ರೇಮಾ, ಇಷ್ಟು ದಿನ ಆದ್ಮೇಲೆ ನಮ್ಮ ನೆನಪು ಆಗಿದೆಯಾ? ವಿಡಿಯೋಗಳಿಗೆ ವ್ಯೂವ್ ಬಂದಿಲ್ಲ ಎಂದು ಮೊಬೈಲ್ ಹಿಡಿದುಕೊಂಡು ಬಂದಿದ್ದೀಯಾ? ನಾನು ಯಾರೊಂದಿಗೆ ಓಡಾಡಿದ್ದೇನೆ ಎಂದು ಹೇಳು. ಒಂದ್ವೇಳೆ ನೋಡಿದ್ರೆ ನನ್ನನ್ನ ಆವತ್ತೆ ರೆಡ್‌ಹ್ಯಾಂಡ್ ಆಗಿ ಹಿಡಿಯಬೇಕಿತ್ತು ಅಲ್ಲವಾ? ಈಗ್ಯಾಕೆ ಬಂದು ಎಂದು ಗಂಡನ ಆರೋಪಕ್ಕೆ ಪ್ರೇಮಾ ಪ್ರತಿಕ್ರಿಯಿಸಿದ್ದಾರೆ.

ಬಿಟ್ಟಿದ್ದು ನೀನು, ನಾನಲ್ಲ!

ದೀಪು ಮತ್ತು ಪ್ರೇಮಾ ಇಬ್ಬರು ಅನ್ಯಜಾತಿಯವರಾಗಿದ್ದು, ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಜಗಳದ ಸಂದರ್ಭದಲ್ಲಿ ಇಬ್ಬರು ಪರಸ್ಪರರ ಜಾತಿಯನ್ನ ನಿಂದಿಸಿದ್ದಾರೆ. ಇದೇ ವೇಳೆ ಮಗನ ಮೇಲೆ ನನ್ನ ಹಕ್ಕಿದೆ. ಮಗನನ್ನು ನನ್ನೊಂದಿಗೆ ಕಳುಹಿಸಿದ್ರೆ ನಾನು ಇಲ್ಲಿಂದ ಹೋಗುತ್ತೇನೆ ಎಂದು ದೀಪು ಹೇಳಿದ್ದಾರೆ. ಗಂಡನನ್ನು ಬಿಟ್ಟು ಬಂದಿದ್ದು ನೀನು. ನಾನು ಹೆಂಡತಿಯನ್ನು ಬಿಟ್ಟಿಲ್ಲ ಎಂದು ದೀಪು ಹೇಳಿದ್ದಾರೆ.

ದೀಪು ಆರೋಪಗಳಿಗೆ ಕೋಪಗೊಂಡ ಪ್ರೇಮಾ, ಇಷ್ಟುದಿನ ಬಿಟ್ಟು ಈಗ್ಯಾಕೆ ಬಂದಿದ್ದೀಯಾ? ನೀನು ನೀಡುತ್ತಿದ್ದ ಕಿರುಕುಳವೆಲ್ಲವನ್ನು ಸಹಿಸಿಕೊಂಡು ನಾನು ಅಲ್ಲಿಯೇ ಇರಬೇಕಿತ್ತಾ? ನೀನು ಮತ್ತು ನಿನ್ನ ತಾಯಿ ಸೇರಿದಂತೆ ನಾಲ್ವರು ನನ್ನ ಮೇಲೆ ಹಲ್ಲೆ ನಡೆಸಿದ್ದೀರಿ. ಇಷ್ಟು ದಿನ ಮಜಾ ಮಾಡ್ಕೊಂಡು ಈಗ ಬಂದಿರೋದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. 55 ನಿಮಿಷದ ವಿಡಿಯೋದಲ್ಲಿ ಇಬ್ಬರು ಇದೇ ರೀತಿಯಲ್ಲು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮತ್ತು ಒಂದಿಷ್ಟು ಅನುಮಾನ

ಈ ವಿಡಿಯೋ ಬೆನ್ನಲ್ಲೇ ಪ್ರೇಮಾ ಮತ್ತು ದೀಪಾ ಮೊಬೈಲ್ ಹಿಡಿದುಕೊಂಡು ಜಗಳ ಮಾಡಿಕೊಂಡಿರೋದನ್ನು ಟ್ರೋಲರ್ಸ್ ಮರುಸೃಷ್ಠಿ ಮಾಡಿದ್ದಾರೆ. ಹಾಗೆಯೇ ವೈಯಕ್ತಿಕ ಜೀವನದ ಇಂತಹ ವಿಷಯಗಳನ್ನು ಸಾರ್ವಜನಿಕಗೊಳಿಸೋದು ಎಷ್ಟು ಸರಿ ಎಂಬುದನ್ನು ಸಹ ಪ್ರಜ್ಞಾವಂತರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಈ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇಂದು ಜನರು ವ್ಯೂವ್, ಲೈಕ್ಸ್‌ಗಾಗಿ ಸಾಮಾಜಿಕ ಜಾಲತಾಣದಲ್ಲಿ ಏನು ಬೇಕಾದ್ರೂ ಮಾಡಲು ಸಿದ್ಧರಾಗಿರುತ್ತಾರೆ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಪ್ರೀತಿ ಬಾಡಲು ಬಿಡದ ಗೆಳೆಯ ನಾನು

ಇಂದು ಪತ್ನಿ ಫೋಟೋ ಹಂಚಿಕೊಂಡಿರುವ ದೀಪು, ಮನಸಿಗೆ ಇಷ್ಟೊಂದ್ ನೋವು ಕೊಡ್ತಾ ಇದ್ದೀಯ ನನ್ನ ಮನಸಲ್ಲಿರೊ ನೋವನ್ನ ನಿನಗೆ ಹೇಗೆ ಹೇಳಿದ್ರೆ ಅರ್ಥ ಆಗುತ್ತೆ ಒಂದು ಮಾತ್ರ ನಿಜ ನೀನು ನಂಬು. ನಂಬದೇ ಇರು . ನಿನ್ನನ್ನ ನನ್ನ ಪ್ರಾಣಕ್ಕಿಂತ ಹೆಚ್ಚಾಗಿ. ಪ್ರೀತಿ ಮಾಡ್ತಾ ಇದ್ದೀನಿ, ಮಾಡುತ್ತಲೇ ಇರುತ್ತೀನಿ. ಪ್ರತಿದಿನ ನೆನಪಾಗುವ ಹೆಸರು ನಿನ್ನದು ಎಲ್ಲಾದರೂ ನಿನ್ನ ಹೆಸರು ಕಂಡಾಗ ಹಿಂತಿರುಗಿ ನೋಡೋ ಮನಸ್ಸು ನನ್ನದು. ಮರೆಯಲಾಗದ ಪ್ರೀತಿ ನಿನ್ನದು ಆ ಪ್ರೀತಿಯ ಕೊನೆವರೆಗೂ ಉಳಿಸಿಕೊಳ್ಳುವ ಮಾತು ನನ್ನದು. ಪ್ರೀತಿಯಿಂದ ದೂರವಾದ ಜೀವ ನೀನು ಆ ಪ್ರೀತಿ ಬಾಡಲು ಬಿಡದ ಗೆಳೆಯ ನಾನು ಎಂದು ಬರೆದುಕೊಂಡಿದ್ದಾರೆ.

PREV
Read more Articles on
click me!

Recommended Stories

Bannerghatta: 'ಗೌರಿ'ಯ ಕಥೆ ಕೇಳಿ ಪ್ರಾಣಿಪ್ರಿಯರ ಕಣ್ಣಲ್ಲಿ ನೀರು, ಸರ್ಕಾರದ ಮಹತ್ವದ ನಿರ್ಧಾರ!
ವಿಜಯನಗರ: ವಿದ್ಯುತ್ ತಂತಿ ತಗುಲಿ ಹುಲ್ಲಿನ ಪೆಂಡಿಗಳು ಸುಟ್ಟು ಭಸ್ಮ, ರೈತ ಕಣ್ಣೀರು