ಸುದೀರ್ಘ 55 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ದಂಪತಿ ಜೊತೆಯಲ್ಲೇ ಜೀವನ ಪಯಣ ಮುಗಿಸಿದ್ದಾರೆ. ವೃದ್ಧ ದಂಪತಿ ಸಾವಲ್ಲೂ ಒಂದಾಗಿದ್ದಾರೆ. ದಾವಣಗೆರೆ ನಗರದ ರಾಮನಗರ ಎಸ್.ಓ.ಜಿ ಕಾಲನಿಯ ಫಕೀರಪ್ಪ ಗೋಕಾವಿ, ಚಂದ್ರಮ್ಮ ಗೋಕಾವಿ ಎಂಬ ವೃದ್ಧ ದಂಪತಿ.
ದಾವಣಗೆರೆ( ಡಿ 25) : ಸುದೀರ್ಘ 55 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ದಂಪತಿ ಜೊತೆಯಲ್ಲೇ ಜೀವನ ಪಯಣ ಮುಗಿಸಿದ್ದಾರೆ. ವೃದ್ಧ ದಂಪತಿ ಸಾವಲ್ಲೂ ಒಂದಾಗಿದ್ದಾರೆ. ದಾವಣಗೆರೆ ನಗರದ ರಾಮನಗರ ಎಸ್.ಓ.ಜಿ ಕಾಲನಿಯ ಫಕೀರಪ್ಪ ಗೋಕಾವಿ, ಚಂದ್ರಮ್ಮ ಗೋಕಾವಿ ಎಂಬ ವೃದ್ಧ ದಂಪತಿ ಸಾವಲ್ಲೂ ಒಂದದಾಗಿದ್ದಾರೆ.
55 ವರ್ಷಗಳ ಹಿಂದೆ ಕೈ ಹಿಡಿದು ಹಸೆಮಣೆ ತುಳಿದಿದ್ದ ಫಕೀರಪ್ಪ ಹಾಗೂ ಚಂದ್ರಮ್ಮ ಜೊತೆಯಾಗಿ ಕೈಲಾಸ ಸೇರಿದ್ದಾರೆ. 85 ವರ್ಷದ ಫಕೀರಪ್ಪ ಗೋಕಾವಿ ನಿನ್ನೆ ರಾತ್ರಿ ಹೃದಯಾಘಾತದಿಂದ ಮನೆಯಲ್ಲೇ ನಿಧನ ಹೊಂದಿದ್ದಾರೆ. ಪತಿ ನಿಧನ ಹೊಂದಿರುವ ವಿಷಯ ತಿಳಿಯುತ್ತಿದ್ದಂತೆ ಪತ್ನಿ ಚಂದ್ರಮ್ಮ ಗೋಕಾವಿ ಸ್ಥಳದಲ್ಲೇ ಅಸ್ವಸ್ಥರಾಗಿ ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
55 ವರ್ಷಗಳ ಕಾಲ ಕೂಡಿ ಬದುಕಿನ ಬಂಡಿ ನಡೆಸಿದ್ದ ದಂಪತಿ ಜೊತೆಯಲ್ಲೇ ಇಹಲೋಕ ತ್ಯಜಿಸಿರೋದು ಇಡೀ ಕುಟುಂಬಕ್ಕೆ ಗರ ಬಡಿದಂತಾಗಿದೆ. ದಂಪತಿ ಸಾವಲ್ಲೂ ಒಂದಾಗಿರೋ ವಿಷಯ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಕಾಲೋನಿಯ ಜನ ಮನೆ ಬಳಿ ಧಾವಿಸಿ ಮಕ್ಕಳನ್ನು ಸಂತೈಸಿದರು. ಇಂತಹ ಸಾವು ಸಂಭವಿಸೋದು ತುಂಬ ವಿರಳ. ಚಂದ್ರಮ್ಮ ಪತಿಯನ್ನು ಬಹಳ ಪ್ರೀತಿಸುತ್ತಿದ್ದ ಕಾರಣ ಅವರ ಸಾವಿನ ವಿಚಾರ ಕೇಳಿ ಹೃದಯಾಘಾತ ಆಗಿದೆ ಎನ್ನುತ್ತಾರೆ ಮಕ್ಕಳು. ಒಟ್ಟಾರೆ ಫಕೀರಪ್ಪ ದಂಪತಿ ಸಾವಲ್ಲೂ ಒಂದಾಗಿರೋದು ಪ್ರೀತಿಯ ಸಂಕೇತ ಎನ್ನುತ್ತಾರೆ ಕುಟುಂಬದವರು.
ಅನ್ಯೋನ್ಯವಾಗಿ ಬದುಕಿ ಸಾವಿನಲ್ಲೂ ಒಂದಾದ ದಂಪತಿ