Mangaluru Moral Policing: ಮಂಗಳೂರಲ್ಲಿ ಮತ್ತೆ ಭಜರಂಗದಳದ ನೈತಿಕ ಪೊಲೀಸ್ ಗಿರಿ; ಮಧ್ಯರಾತ್ರಿ ಭಿನ್ನ ಕೋಮಿನ ಜೋಡಿಗೆ ಹಲ್ಲೆ!

By Ravi Janekal  |  First Published Dec 11, 2022, 11:21 AM IST

ತಡರಾತ್ರಿ ಸುತ್ತಾಡುತ್ತಿದ್ದ ಹಿಂದೂ-ಮುಸ್ಲಿಂ ಜೋಡಿ ಮೇಲೆ ಹಲ್ಲೆಗೆ ಯತ್ನಿಸಿ ಭಜರಂಗದಳದ ಕಾರ್ಯಕರ್ತರು ನೈತಿಕ ಪೊಲೀಸ್ ಗಿರಿಗೆ ಯತ್ನಿಸಿದ ಘಟನೆ ಮಂಗಳೂರು ನಗರದ ಕೊಟ್ಟಾರ ಎಂಬಲ್ಲಿ ನಡೆದಿದೆ.


ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಡಿ.11): ತಡರಾತ್ರಿ ಸುತ್ತಾಡುತ್ತಿದ್ದ ಹಿಂದೂ-ಮುಸ್ಲಿಂ ಜೋಡಿ ಮೇಲೆ ಹಲ್ಲೆಗೆ ಯತ್ನಿಸಿ ಭಜರಂಗದಳದ ಕಾರ್ಯಕರ್ತರು ನೈತಿಕ ಪೊಲೀಸ್ ಗಿರಿಗೆ ಯತ್ನಿಸಿದ ಘಟನೆ ಮಂಗಳೂರು ನಗರದ ಕೊಟ್ಟಾರ ಎಂಬಲ್ಲಿ ನಡೆದಿದೆ.

Tap to resize

Latest Videos

ರಾತ್ರಿ 12 ಗಂಟೆ ಸುಮಾರಿಗೆ ಮುಸ್ಲಿಂ ಯುವಕರ ಜೊತೆ ಹಿಂದೂ ಯುವತಿಯರು ಸುತ್ತಾಡುತ್ತಿದ್ದು, ಈ ವೇಳೆ ಕೊಟ್ಟಾರ ಬಳಿ ಭಜರಂಗದಳದ ಕಾರ್ಯಕರ್ತರು ತಡೆದಿದ್ದಾರೆ‌‌. ಭಿನ್ನ ಕೋಮಿನ ಜೋಡಿಯನ್ನ ತಡೆದು ಮಧ್ಯರಾತ್ರಿ ಎಲ್ಲಿಗೆ ಹೊರಟಿದ್ದಿರೆಂದುವ ಪ್ರಶ್ನಿಸಿ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಹೊಟೇಲ್ ಗೆ ಊಟಕ್ಕೆ ಬಂದಿರೋದಾಗಿ ಹೇಳಿದ ಜೋಡಿಗಳು ಸ್ಥಳದಲ್ಲಿದ್ದ ಪೊಲೀಸರಲ್ಲೂ ಹೇಳಿದ್ದಾರೆ. ಆದರೆ ಮಧ್ಯರಾತ್ರಿ ಯಾವ ಹೊಟೇಲ್ ಇದೆ ಅಂತ ಹೇಳಿ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿಯಲ್ಲಿ ನೈತಿಕ ಪೊಲೀಸ್‌ಗಿರಿ ಇಲ್ಲ: ಖಾದರ್‌ಗೆ ಸಚಿವ ಮಾಧುಸ್ವಾಮಿ ತಿರುಗೇಟು

ಕೊನೆಗೆ ಪೊಲೀಸರ ಮಧ್ಯ ಪ್ರವೇಶದ ಬಳಿಕ  ಪರಿಸ್ಥಿತಿ ತಿಳಿಯಾಗಿದ್ದು, ಬಳಿಕ ಪೊಲೀಸ್ ಠಾಣೆಗೆ ತೆರಳಿ ಅಲ್ಲಿಂದ ಜೋಡಿ ಹೊರಟು ಹೋಗಿದೆ ಎನ್ನಲಾಗಿದೆ. ಆ ಬಳಿಕ ಕೆಲ ಭಜರಂಗದಳದ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಬಳಿಕ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ. ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‌ಘಟನೆ ನಡೆದಿದೆ. 

ಸದ್ಯ ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಮಿತಿ ಮೀರಿದ್ದು, ಸಂಘಟನೆ ಯುವಕರು ಅಲ್ಲಲ್ಲಿ ಹದ್ದಿ‌ನ ಕಣ್ಣಿಟ್ಟಿದ್ದಾರೆ. ಭಿನ್ನ ಕೋಮಿನ ಜೋಡಿ ಸುತ್ತಾಟ ಪತ್ತೆಯಾದರೆ ಕಾನೂನು ಕೈಗೆತ್ತಿಕೊಳ್ಳುವ ಘಟನೆಗಳು ನಡೀತಾ ಇದ್ದು, ಕಳೆದೊಂದು ವಾರದಲ್ಲಿ ‌ಮೂರು ನೈತಿಕ ಪೊಲೀಸ್ ಗಿರಿ ಘಟನೆಗಳು ವರದಿಯಾಗಿದೆ. 

Mangaluru Moral Policing: ಸುಳ್ಯದಲ್ಲಿ ನೈತಿಕ ಪೊಲೀಸ್‌ಗಿರಿ: ಇಬ್ಬರು ವಿದ್ಯಾರ್ಥಿಗಳ ಮೇಲೆ ಹಲ್ಲೆ

ಆದರೆ ಮಂಗಳೂರು ಪೊಲೀಸರು ಮಾತ್ರ ನೈತಿಕ ಪೊಲೀಸ್ ಗಿರಿಗೆ ಕಡಿವಾಣ ಹಾಕುವ ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳುವ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

click me!