ರಾಜ್ಯದಲ್ಲಿ ಒಟ್ಟು 60ಲಕ್ಷ ಗುಜರಿ ವಾಹನಗಳ ಮಾಲೀಕರಿಗೆ ಬಿಗ್ ಶಾಕ್!

Published : Aug 19, 2022, 12:21 PM ISTUpdated : Aug 19, 2022, 12:23 PM IST
ರಾಜ್ಯದಲ್ಲಿ ಒಟ್ಟು 60ಲಕ್ಷ ಗುಜರಿ ವಾಹನಗಳ ಮಾಲೀಕರಿಗೆ ಬಿಗ್ ಶಾಕ್!

ಸಾರಾಂಶ

ಉದ್ಯಾನನಗರಿ ಬೆಂಗಳೂರಿನಲ್ಲಿ ದಿನೇ ದಿನೇ ಟ್ರಾಫಿಕ್ ಹೆಚ್ಚಾಗ್ತಿದೆ.ವಾಯುಮಾಲಿನ್ಯ ಕೂಡ ಹೆಚ್ಚಾಗ್ತಿದೆ ಇದನ್ನ ತಡೆಗಟ್ಟಲು ಹೊಸ ಪ್ಲಾನ್ ರೆಡಿಯಾಗಿದೆ. ರಾಜ್ಯದಲ್ಲಿರುವ 60ಲಕ್ಷ ಗುಜರಿ ವಾಹನಗಳ ಮಾಲಿಕರಿಗೆ ಬಿಗ್ ಶಾಕ್!

ವರದಿ; ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಆ19); ಉದ್ಯಾನನಗರಿ ಬೆಂಗಳೂರಿನಲ್ಲಿ ದಿನೇ ದಿನೇ ಟ್ರಾಫಿಕ್ ಹೆಚ್ಚಾಗ್ತಿದೆ. ಇದರ ಜೊತೆಗೆ ವಾಯುಮಾಲಿನ್ಯ ಕೂಡ ಜಾಸ್ತಿಯಾಗ್ತಿದೆ. ಹೀಗಾಗಿ ದೆಹಲಿಯಂತೆ ಬೆಂಗಳೂರು ವಾಯುಮಾಲಿನ್ಯದ ಕೇಂದ್ರ ಸ್ಥಾನವಾಗೋ ಆತಂಕ ಎದುರಾಗಿದೆ. ಇದೇ ಕಾರಣಕ್ಕೆ ರಾಜ್ಯದಲ್ಲಿ ಗುಜರಿ ನೀತಿ ಜಾರಿ ಮಾಡಲು ಸಾರಿಗೆ ಇಲಾಖೆ  ಹೊರಟಿದೆ. ಇನ್ನು ಸ್ಕ್ರ್ಯಾಪಿಂಗ್ ಪಾಲಿಸಿ ಜಾರಿಯಾದ್ರೆ 15  ವರ್ಷ ಹಾಗೂ 20 ವರ್ಷ ಮೇಲ್ಪಟ್ಟ ವಾಹನಗಳು  ರಸ್ತೆಗಿಳಿಯುವಂತಿಲ್ಲ.

 

 

ಭಾರತಕ್ಕೆ ಮತ್ತೆ ಕಾಲಿಟ್ಟ ಗೂಗಲ್‌ ಸ್ಟ್ರೀಟ್‌: ಬೆಂಗಳೂರಿನಲ್ಲಿ ಗೂಗಲ್‌ ಮ್ಯಾಪ್‌ ಬಳಸಿ ಟ್ರಾಫಿಕ್‌ ನಿರ್ವಹಣೆ

ಬೆಂಗಳೂರು(Bengaluru) ಬೆಳೆದಂತೆ ವಾಹನಗಳ ಸಂಖ್ಯೆ ಕೂಡ ಹೆಚ್ಚಳವಾಗ್ತಿದೆ. ಇದರಿಂದಲೆ ನಗರದೆಲ್ಲೆಡೆ ಟ್ರಾಫಿಕ್ ಜಾಮ್(Traffic jam). ಟ್ರಾಫಿಕ್ ನಿಯಂತ್ರಿಸಲು(Traffic Congroll) ಸರ್ಕಾರ ಇನ್ನಿಲ್ಲದ ಕಸರತ್ತು ಮಾಡ್ತಿದೆ. ಮತ್ತೊಂದೆಡೆ ಹಳೆ ವಾಹನ(Old Vehicle)ಗಳು ನಗರದಲ್ಲಿ ಸಿಕ್ಕಾಪಟ್ಟೆ ಮಾಲಿನ್ಯವನ್ನು ಉಂಟು ಮಾಡ್ತಿದೆ. ಹೀಗಾಗಿ ಮುಂದಿನ ದಿನದಲ್ಲಿ ಉಸಿರಾಡುವವ ಗಾಳಿ  ವಿಷಕಾರಿಯಾಗುವ ಭೀತಿಯಲ್ಲಿ ರಾಜ್ಯ ಸರ್ಕಾರ ಗುಜರಿ ನಿಯಮವನ್ನು ಜಾರಿಗೊಳಿಸುವ ಮಾಸ್ಟರ್ ಪ್ಲಾನ್(Master plan)  ರೆಡಿ ಮಾಡಿದೆ. ಒಂದು ಕಡೆ ಸರ್ಕಾರ ಮಹಾನಗರಿ ಬೆಂಗಳೂರಿನಲ್ಲಿ ಸಂಚಾರ ದಟ್ಟನೆ ನಿಯಂತ್ರಿಸಲು ಹಾಗೂ ಮಾಲಿನ್ಯದ ಪ್ರಮಾಣ ಕಡಿಮೆ ಮಾಡೋದರಲ್ಲಿ  ಪದೇ ಪದೇ ವಿಫಲವಾಗ್ತಿದೆ. ಇದೀಗ ಸ್ಕ್ರ್ಯಾಪಿಂಗ್ ಪಾಲಿಸಿ ಮಾಡೋ ಮೂಲಕ ಖಾಸಗಿ  ಬಳಕೆ ವಾಹನಗಳಿಗೆ  20 ವರ್ಷ ಹಾಗೂ ವಾಣಿಜ್ಯ ವಾಹನಗಳಿಗೆ 15 ವರ್ಷ ಮಿತಿ ಏರಲು ತೀರ್ಮಾನಿಸಿದೆ. ಬೆಂಗಳೂರು ಸೇರಿ ಇಡೀ ರಾಜ್ಯದಲ್ಲಿ ಮೂರು ಕೋಟಿ ವಾಹನಗಳು ನೋಂದಾಣಿ ಆಗಿವೆ. ಇದ್ರಲ್ಲಿ 60 ಲಕ್ಷ ವಾಹನಗಳು 15 ವರ್ಷ ಮೇಲ್ಪಟ್ಟು ವಾಹನಗಳು ಆಗಿವೆ. ಹಳೆಯ ವಾಹನಗಳು ಹೆಚ್ಚು ಹೊಗೆ ಬಿಡುವುದರಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀಳ್ತಿದೆ. ಇದಕ್ಕೆ ಬ್ರೇಕ್ ಹಾಕಲು ವಾಣಿಜ್ಯ ಬಳಕೆಯ  15  ವರ್ಷ ಮೇಲ್ಟಟ್ಟ  ವಾಹನಗಳು ಹಾಗೂ 20 ವರ್ಷ ಮೇಲ್ಪಟ್ಟ ಸ್ವಂತ ವಾಹನಗಳನ್ನು ಬ್ಯಾನ್ ಮಾಡಲು ಸರ್ಕಾರ ಸಿದ್ದತೆ ನಡೆಸಿದೆ. ಈಗಾಗಲೇ ಈ ಯೋಜನೆ ಜಾರಿ ಮಾಡಲು ರಾಜ್ಯ ಸಾರಿಗೆ ಇಲಾಖೆ ಡ್ರಾಫ್ಟ್ ಸಿದ್ದಪಡಿಸುತ್ತಿದೆ.

Bengaluru News: ವಾಹನ ಸವಾರರನ್ನು ಅನಾವಶ್ಯಕ ತಡೆದು ನಿಲ್ಲಿಸದಂತೆ ಡಿಜಿ & ಐಜಿಪಿ ಸೂಚನೆ

ಈಗಾಗಲೇ ಅಸ್ಸಾಂ ಸೇರಿ ಕೆಲ ರಾಜ್ಯಗಳಲ್ಲಿ ಸ್ಕ್ರ್ಯಾಪಿಂಗ್ ಪಾಲಿಸಿ ಜಾರಿ ಮಾಡಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲಿ ವಾಹನಗಳ ಗುಜರಿ ಯೋಜನೆ ಜಾರಿ ಮಾಡ್ತಿದೆ.  ಕೆಲವೇ ದಿನಗಳಲ್ಲಿ ಸಾರಿಗೆ ಇಲಾಖೆ ಡ್ರಾಫ್ಟ್ ಸಿದ್ದಪಡಿಸಿ ಸರ್ಕಾರಕ್ಕೆ ನೀಡಲಿದೆ. ಹೀಗಾಗಿ ಇನ್ನೆರಡು ತಿಂಗಳಲ್ಲಿ ನೀತಿ ಜಾರಿಯಾಗಲಿದ್ದು, ಅನುಷ್ಠಾನವಾದಲ್ಲಿ ಲಕ್ಷಾಂತರ ಗುಜರಿ ವಾಹನಗಳು ರಸ್ತೆಯಲ್ಲಿ ಓಡಾಡುಂತಿಲ್ಲ. 15 ವರ್ಷ ಮೇಲ್ಪಟ್ಟ ಕಮರ್ಷಿಯಲ್ ವಾಹನ,  20 ವರ್ಷ ಮೇಲ್ಟಟ್ಟ ಪರ್ಸನಲ್ ವಾಹನಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ ನೀಡದಿರಲು ಚಿಂತನೆ ನಡೆಸಿದೆ. ಹಲವು ಬಾರಿ ಬ್ಯಾನ್ ಮಾಡಲು ಕೈಹಾಕಿದ್ದ  ಸರ್ಕಾರ,ಇದೀಗ ಮತ್ತೊಮ್ಮೆ  ಕೇಂದ್ರ ಸರ್ಕಾರದ ಸ್ಕ್ರ್ಯಾಪಿಂಗ್ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನ  ಮಾಡಲು ತೀರ್ಮಾನ ಮಾಡಿದೆ. ನಗರದಲ್ಲಿ ಮುಂದಿನ ದಿನಗಳಲ್ಲಿ ಉಸಿರಾಡುವ ಗಾಳಿಯೂ ವಿಷಕಾರಿಯಾಗುವ ಆತಂಕ ಎದುರಾಗಿದ್ದು ಇದಕ್ಕೆ ಕಡಿವಾಣ ಹಾಕಲುಹಳೆ ವಾಹನಗಳನ್ನ ಬ್ಯಾನ್ ಮಾಡಲು ಮುಂದಾಗಿದೆ. ರಾಜ್ಯದಲ್ಲಿ 60 ಲಕ್ಷ ಹಾಗೂ ಬೆಂಗಳೂರಿನಲ್ಲೇ 40 ಲಕ್ಷ ಹಳೇ ವಾಹನಗಳಿದ್ದು ಇವುಗಳಿಗೆ ಸಂಕಷ್ಟ ಎದುರಾಗಿದೆ.

PREV
Read more Articles on
click me!

Recommended Stories

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ
ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಬಸ್ ಮಂಡ್ಯ ಬಳಿ ಪಲ್ಟಿ, 8 ಮಂದಿಗೆ ಗಾಯ