ಬಸವಣ್ಣ ದೇಗುಲಕ್ಕೆ 96 ಕೆಜಿಯ ಘಂಟೆ ಸಮರ್ಪಣೆ..!

By Kannadaprabha NewsFirst Published Jan 17, 2020, 12:08 PM IST
Highlights

ಗುಬ್ಬಿ ತಾಲೂಕಿನ ಮುದಿಗೆರೆ ಗೇಟ್‌ ಬಳಿಯ ಘಂಟೆ ಬಸವಣ್ಣ ದೇವಾಲಯಕ್ಕೆ 96 ಕೆಜಿಯ ಘಂಟೆಯನ್ನು ನೀಡಲಾಗಿದೆ. ಭಕ್ತರು ಕೊಡುಗೆಯಾಗಿ ನೀಡಿದ 96 ಕೆಜಿ ತೂಕದ ಕಂಚಿನ ಘಂಟೆಯನ್ನು ದೇವಾಲಯಕ್ಕೆ ಸಮರ್ಪಿಸಲಾಗಿದೆ.

ತುಮಕೂರು(ಜ.17): ಸೂರ್ಯನು ತನ್ನ ಕಕ್ಷೆಯಲ್ಲಿ ಪಥವನ್ನು ಮಾತ್ರ ಬದಲಿಸಿದರೆ ರಾಜಕಾರಣಿಗಳು ಪಕ್ಷವನ್ನೇ ಬದಲಿಸಿ ನಕ್ಷೆಯನ್ನೇ ಬದಲಿಸಿ ಬಿಡುತ್ತಾರೆ ಎಂದು ತುಮಕೂರು ಹಿರೇಮಠದ ಶಿವನಾಂದ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಗುಬ್ಬಿ ತಾಲೂಕಿನ ಮುದಿಗೆರೆ ಗೇಟ್‌ ಬಳಿಯ ಘಂಟೆ ಬಸವಣ್ಣ ದೇವಾಲಯದ ಬಳಿ ಕರ್ನಾಟಕ ಹಿಂದೂ ಯುವ ವಾಹಿನಿ ಸಂಘ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಕೊಡುಗೆಯಾಗಿ ನೀಡಿದ 96 ಕೆಜಿ ತೂಕದ ಕಂಚಿನ ಘಂಟೆಯನ್ನು ದೇವಾಲಯಕ್ಕೆ ಸಮರ್ಪಿಸಿ ಮಾತನಾಡಿದ್ದಾರೆ.

ನರಹಂತಕ ಚಿರತೆಯ ಹೈಡ್ರಾಮಕ್ಕೆ ಹೈರಾಣಾಗಿದೆ ಅರಣ್ಯ ಇಲಾಖೆ..!

ಸಂಕ್ರಾಂತಿ ಹಬ್ಬವು ಉತ್ತರಾಯಣ ಪುಣ್ಯಕಾಲ ಎನ್ನಲಾಗುತ್ತದೆ. ಈ ಪಥ ಬದಲಾವಣೆ ಒಳ್ಳೆಯ ಕೆಲಸ ಸಾಧಿಸಲು ಸೂಚನೆ ಎನ್ನುವ ಪದ್ಧತಿ ನಮ್ಮಲ್ಲಿದೆ. ಆದರೆ ಯಾವುದೇ ಒಳ್ಳೆಯ ಕೆಲಸ ಎನ್ನುವ ಅಂಶ ಪಕ್ಷ ಬದಲಿಸುವ ರಾಜಕಾರಣಿಗಳಲ್ಲಿ ಕಾಣಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಸ್ವಾರ್ಥಯನ್ನೇ ತುಂಬಿಕೊಂಡ ರಾಜಕಾರಣ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸೇವೆ ಎನ್ನುವುದು ಮರೀಚಿಕೆಯಾಗಿದೆ. ಪ್ರಕೃತಿ ನೀಡುವ ಕೊಡುಗೆ ಅಪಾರವಿದೆ. ಸೂರ್ಯನ ಕಿರಣಗಳು ದಿಕ್ಕನ್ನು ಬದಲಿಸಿಕೊಂಡರೆ ಕೃಷಿಕ ವರ್ಗದಲ್ಲಿ ಹಲವು ಬದಲಾವಣೆ ಕಾಣಸಿಗುತ್ತದೆ. ಈ ಜತೆಗೆ ಧಾರ್ಮಿಕ ಕಾರ್ಯಗಳಿಗೆ ಒತ್ತು ನೀಡುವ ಕೆಲಸ ಗ್ರಾಮೀಣರಲ್ಲಿ ಕಾಣುತ್ತೇವೆ. ಪ್ರಕೃತಿಯ ಬದಲಾವಣೆಯನ್ನು ಹಬ್ಬವಾಗಿ ಆಚರಿಸುತ್ತೇವೆ ಎಂದಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷ ಗಾದಿಗೆ ಪೈಪೋಟಿ, ರಾಜ್ಯ ಹೈಕಮಾಂಡ್‌ಗೆ ತಲೆನೋವು

ಮನುಷ್ಯರಲ್ಲಿ ಕಾಣುವ ಬದಲಾವಣೆಗೆ ಅರ್ಥವೇ ಇಲ್ಲವಾಗಿದೆ ಎಂದ ಅವರು, ಮತ್ತೊಮ್ಮೆ ಮೋದಿ ಪ್ರಧಾನಿ, ಜಿಲ್ಲೆಯಲ್ಲಿ ಉತ್ತಮ ಮಳೆ ಬೆಳೆ ಹರಕೆ ಹೊತ್ತ ಈ ಸಂಘಟನೆ ಬಸವಣ್ಣನಲ್ಲಿ ಹರಕೆ ಕಟ್ಟಿಕೊಂಡು 96 ಕೆ.ಜಿ ತೂಕದ ಕಂಚಿನ ಘಂಟೆ ದೇವಾಲಯಕ್ಕೆ ಸಮರ್ಪಿಸಿದ್ದಾರೆ. ಇಲ್ಲಿ ಸ್ವಾರ್ಥವಿಲ್ಲದ ಹರಕೆಯಾಗಿದೆ. ಸಾವ್ರರ್ತಿಕ ಹರಕೆಗೆ ದೈವದ ಸಂಕಲ್ಪ ಇರುತ್ತದೆ ಎಂದರು.

ನಿರಂತರವಾಗಿ ಧಾರ್ಮಿಕ ಕಾರ‍್ಯ:

ಕರ್ನಾಟಕ ಹಿಂದೂ ಯುವವಾಹಿನಿ ಸಂಘದ ರಾಜ್ಯಾಧ್ಯಕ್ಷ ಬಸವರಾಜು ಗುಬ್ಬಿ ಮಾತನಾಡಿ, ರಸ್ತೆಗಿಳಿದು ಪ್ರತಿಭಟನೆ ಮಾಡುವ ಸಂಘಟನೆ ಕಟ್ಟದೇ ಸಾರ್ವಜನಿಕರ ಹಿತ ಬಯಸುವ ಜತೆಗೆ ದೇಶ ಭಕ್ತಿ ಸಾರುವ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಜಿಲ್ಲೆಗೆ ಒಳ್ಳೆಯ ಮಳೆ ಬೆಳೆ ಬರಲು ಕಟ್ಟಿಕೊಂಡ ಹರಕೆ ಈಡೇರಿದ ಹಿನ್ನೆಲೆಯಲ್ಲಿ ಬಸವಣ್ಣನಿಗೆ ಘಂಟೆ ಸಮರ್ಪಣೆ ಮಾಡಲಾಗಿದೆ. ವೀರ ಮರಣ ಅಪ್ಪಿದ ಯೋಧರಿಗೆ ಸ್ಮಾರಕ ಸ್ಥಾಪನೆ, ಲೋಕಲ್ಯಾಣಕ್ಕೆ ನಡೆಯುವ ಜಾಗೃತಿ ಕಾರ್ಯಕ್ರಮ, ಸಾಮಾಜಿಕ ಮತ್ತು ಧಾರ್ಮಿಕ ಸೇವಾ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದ್ದೇವೆ ಎಂದಿದ್ದಾರೆ.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಆಗಮಿಸಿದ ತುಮಕೂರು ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಅವರು ಸಂಘದ ಚಟುವಟಿಕೆಯ ಕುರಿತು ಬೆಂಬಲ ಸೂಚಿಸಿ ಸಾಮಾಜಿಕ ಕಾರ್ಯಗಳನ್ನು ನಡೆಸಲು ಬೆನ್ನುತಟ್ಟಿಹುರಿದುಂಬಿಸಿದ್ದರು. ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಿ.ನಾಗರಾಜು, ಕುಣಿಗಲ್‌ ಕಾರ್ಯದರ್ಶಿ ಪವನ್‌, ಉಪಾಧ್ಯಕ್ಷ ಸುನಿಲ್‌, ಖಜಾಂಚಿ ದೇವರಾಜು, ತಿಪಟೂರು ಅಧ್ಯಕ್ಷ ಹರೀಶ್‌, ನಿಟ್ಟೂರು ಶಾಖೆಯ ಸಿದ್ದೇಶ್‌ ಮುಂತಾದವರು ಭಾಗವಹಿಸಿದ್ದರು.

click me!