* ಚಾಮರಾಜನಗರ ಜಿಲ್ಲೆಯ ಹನೂರು ಬಳಿ ನಡೆದ ಘಟನೆ
* ಕುಡುವಾಳೆ ಮಾಳಿಗನತ್ತ ಕಿರು ಸೇತುವೆಯ ಹಳ್ಳಕ್ಕೆ ಮಗುಚಿ ಬಿದ್ದ ಬಸ್
* ಬಸ್ಸಿನಲ್ಲಿದ್ದ ಜನರನ್ನು ಮೇಲೆಕ್ಕೆತ್ತಿದ ಸಾರ್ವಜನಿಕರು
ಚಾಮರಾಜನಗರ(ಮಾ.15): ಸ್ಟೇರಿಂಗ್ ತುಂಡಾಗಿ ಚಾಲಕನ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ(KSRTC) ಬಸ್ಸೊಂದು ಕಿರು ಸೇತುವೆಯ ಹಳ್ಳಕ್ಕೆ ಮಗುಚಿ ಬಿದ್ದ ಪರಿಣಾಮ ಮೂವರು ಮೃತಪಟ್ಟು(Death), 96 ಮಂದಿ ಗಾಯಗೊಂಡಿರುವ ಘಟನೆ ಹನೂರು ತಾಲೂಕಿನ ಕುಡುವಾಳೆ ಗ್ರಾಮ ಸಮೀಪದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ತಾಲೂಕಿನ ಮಾಳಿಗನತ್ತ ಗ್ರಾಮದ ಶಿವಮ್ಮ(60), ಸಣ್ಣರಾಯಪ್ಪ(40), ಪಿ.ಜಿ.ಪಾಳ್ಯ ಗ್ರಾಮದ ರಮೇಶ್(30) ಮೃತರು. ತಾಲೂಕಿನ ಕುಡುವಾಳೆ ಗ್ರಾಮದ ಮೂಲಕ ಪಿ.ಜಿ ಪಾಳ್ಯ ಹಾಗೂ ಒಡೆಯರಪಾಳ್ಯದ ಕಡೆಗೆ ಸೋಮವಾರ ಮಧ್ಯಾಹ್ನ ತೆರಳುತ್ತಿದ್ದ ಬಸ್‌ನಲ್ಲಿ ಸುಮಾರು 100ಕ್ಕೂ ಹೆಚ್ಚು ಜನರಿದ್ದರು ಎನ್ನಲಾಗಿದೆ.
undefined
KSRTC Bus Accident: ಶಿರಸಿ, ಮುಖಾಮುಖಿಯಾದ ಸರ್ಕಾರಿ ಬಸ್‌ಗಳು
ಕುಡುವಾಳೆ ಗ್ರಾಮದಲ್ಲಿ ಸಂಚರಿಸುತ್ತಿದ್ದ ವೇಳೆ ಬಸ್‌ನ ಸ್ಟೇರಿಂಗ್(Steering) ರಾಡ್ ತುಂಡಾದ ಪರಿಣಾಮ ಚಾಲಕ ನಿಯಂತ್ರಣ ತಪ್ಪಿದ್ದಾನೆ. ಪರಿಣಾಮ ಕುಡುವಾಳೆ ಮಾಳಿಗನತ್ತ ಕಿರು ಸೇತುವೆಯ ಹಳ್ಳಕ್ಕೆ ಮಗುಚಿ ಬಿದ್ದಿದೆ. ಈ ವೇಳೆ ಜನರ ಕೀರಾಟದ ಶಬ್ದ ಕೇಳಿದ ಅಕ್ಕಪಕ್ಕದ ಜಮೀನಿನಲ್ಲಿದ್ದ ಜನರು ಹಾಗೂ ಸಾರ್ವಜನಿಕರು ಸ್ಥಳಕ್ಕೆ ಧಾವಿಸಿ ಬಸ್ಸಿನಲ್ಲಿದ್ದ ಜನರನ್ನು ಮೇಲೆಕ್ಕೆತ್ತಿದರು.
ಈ ವೇಳೆ ಗಾಯಾಳುಗಳನ್ನು ಗೂಡ್ಸ್ ವಾಹನ, ಆ್ಯಂಬುಲೆನ್ಸ್ ಮೂಲಕ ಪಿ.ಜಿ ಪಾಳ್ಯ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ(Treatment) ಕೊಳ್ಳೇಗಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ಕಂದಕಕ್ಕೆ ಉರುಳಿ 40ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ: ತಪ್ಪಿದ ಭಾರೀ ದುರಂತ
ಲಕ್ಷ್ಮೇಶ್ವರ: ಸಾರಿಗೆ ಸಂಸ್ಥೆಯ ಬಸ್ ಕಂದಕಕ್ಕೆ ಉರುಳಿದ ಪರಿಣಾಮ 40ಕ್ಕೂ ಹೆಚ್ಚು ಪ್ರಯಾಣಿಕರಿಗೆ(Passengers) ಗಾಯಗಳಾಗಿರುವ ಘಟನೆ ಸಮೀಪದ ಗೋವನಾಳ ಹತ್ತಿರ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ 25ಕ್ಕೂ ಹೆಚ್ಚು ಪ್ರಯಾಣಿಕರನ್ನು ಜಿಮ್ಸ್ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ.
ಗದಗ(Gadag) ಕಡೆಯಿಂದ ಲಕ್ಷ್ಮೇಶ್ವರ ಮಾರ್ಗವಾಗಿ ಹಾವೇರಿಗೆ(Haveri) ತೆರಳುತ್ತಿದ್ದ ಬಸ್ ಗೋವನಾಳ ಗ್ರಾಮದ ಸ್ಮಶಾನ ಹತ್ತಿರದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಪಲ್ಟಿಹೊಡೆದಿದೆ. ಮಾಹಿತಿ ಅರಿತ ಗೋವನಾಳ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ಬಸ್ಸಿನಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ಹೊರತೆಗೆದು ಆ್ಯಂಬುಲೆನ್ಸ್ ಮೂಲಕ ಲಕ್ಷ್ಮೇಶ್ವರದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನು ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಗೆ ತಂದು ಪ್ರಥಮ ಚಿಕಿತ್ಸೆ(Treatment) ನೀಡಲಾಯಿತು. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ, ಕೆಲ ಜನರ ಸ್ಥಿತಿ ಗಂಭೀರವಾಗಿದ್ದು, ಕೆಲವರ ಕೈ ಕಾಲು ಮುರಿದಿವೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಗಾಯಗೊಂಡವರ ರೋಧನ ಹೇಳ ತೀರದಾಗಿತ್ತು.
ಶಾಸಕರ ಕಾರು ಡಿಕ್ಕಿ, 22 ಜನಕ್ಕೆ ಗಾಯ, ಐವರ ಸ್ಥಿತಿ ಗಂಭೀರ!
ಘಟನೆಯಲ್ಲಿ ಗಾಯಗೊಂಡ ಸಣ್ಣ ಸಣ್ಣ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು. ಆಸ್ಪತ್ರೆಯ ಮುಂದೆ ಗಾಯಗೊಂಡ ಪ್ರಯಾಣಿಕರ ಸಂಬಂಧಿಕರು ಆತಂಕಕ್ಕೆ ಒಳಗಾಗಿದ್ದರು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ 25ಕ್ಕೂ ಹೆಚ್ಚು ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಿ ಕೊಡಲಾಯಿತು. ಈ ಕುರಿತು ಲಕ್ಷ್ಮೇಶ್ವರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋವನಾಳ ಗ್ರಾಮಸ್ಥರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಹಾಗೂ ಗಾಯಗೊಂಡವರ ಆರೈಕೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮದ್ಯದ ಅಮಲಿನಲ್ಲಿ ತಡೆಗೋಡೆಗೆ ಡಿಕ್ಕಿ: ಬೈಕ್ ಸವಾರ ಸಾವು
ಬೆಂಗಳೂರು: ವೇಗವಾಗಿ ಚಲಿಸುತ್ತಿದ್ದ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿಯಾಗಿ ಸವಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವ(Death) ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಫೆ.28 ರಂದು ನಡೆದಿತ್ತು.