ಒಂದೇ ದಿನ, ಒಂದೇ ತರಬೇತಿ ಕೇಂದ್ರದ 91 ಪೊಲೀಸರಿಗೆ ಸೋಂಕು

By Kannadaprabha News  |  First Published Jul 24, 2020, 7:26 AM IST

ಥಣಿಸಂದ್ರದ ಪೊಲೀಸ್‌ ತರಬೇತಿ ಕೇಂದ್ರದದಲ್ಲಿ ಒಂದೇ ದಿನ ತರಬೇತಿ ನಿರತ 91 ಕಾನ್‌ಸ್ಟೇಬಲ್‌ಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಆತಂಕ ಸೃಷ್ಟಿಸಿದೆ.


ಬೆಂಗಳೂರು(ಜು.24): ಥಣಿಸಂದ್ರದ ಪೊಲೀಸ್‌ ತರಬೇತಿ ಕೇಂದ್ರದದಲ್ಲಿ ಒಂದೇ ದಿನ ತರಬೇತಿ ನಿರತ 91 ಕಾನ್‌ಸ್ಟೇಬಲ್‌ಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಆತಂಕ ಸೃಷ್ಟಿಸಿದೆ.

ಜು.16ರಂದು ತರಬೇತಿ ಕೇಂದ್ರದಲ್ಲಿ ರಾರ‍ಯಂಡಮ್‌ ಪರೀಕ್ಷೆ ನಡೆಸಲಾಯಿತು. ಬುಧವಾರ ರಾತ್ರಿ ಬಂದ ಕೋವಿಡ್‌ ಪರೀಕ್ಷಾ ವರದಿಯಲ್ಲಿ 91 ಮಂದಿಗೆ ಸೋಂಕು ದೃಢಪಟ್ಟಿದೆ.

Tap to resize

Latest Videos

ಕೊರೋನಾ ಗೆದ್ದ ರಾಜ್ಯದ ಮೊದಲ ಶತಾಯುಷಿ: ಮನೆ​ಯಲ್ಲೇ ಚಿಕಿ​ತ್ಸೆ ಪಡೆದು 100ರ ವೃದ್ಧೆ ಗುಣಮುಖ

ಸೋಂಕಿತರನ್ನು ನಿಗದಿತ ಕೋವಿಡ್‌ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಉಳಿದವರನ್ನು ಕ್ವಾರಂಟೈನ್‌ಗೊಳಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಥಣಿಸಂದ್ರ ಪೊಲೀಸ್‌ ತರಬೇತಿ ಶಾಲೆಯಲ್ಲಿ 392 ಮಂದಿ ತರಬೇತಿ ನಿರತರಾಗಿದ್ದಾರೆ.

ಈ ತರಬೇತಿ ಕೇಂದ್ರದ ಪಕ್ಕದಲ್ಲೇ ಶಸ್ತ್ರಾಗಾರವಿದೆ. ಕೆಲವು ದಿನಗಳ ಹಿಂದೆ ಶಸ್ತ್ರಾಗಾರದ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅವರ ಸಂಪರ್ಕದಿಂದ ತರಬೇತಿ ಶಾಲೆಗೆ ಸೋಂಕು ಹರಡಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಗುರುವಾರ ರಾಜ್ಯದಲ್ಲಿ 5 ಸಾವಿರ ಕೇಸ್.. ಜಿಲ್ಲೆಗಳು ಡೇಂಜರ್..ಡೇಂಜರ್!

ಈ ಕೇಂದ್ರದ 392 ಮಂದಿ ತರಬೇತಿ ಕಾನ್‌ಸ್ಟೇಬಲ್‌ಗಳಲ್ಲಿ 91 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕು ತಡೆಗೆ ಸಾಕಷ್ಟುಮುಂಜಾಗ್ರತೆ ಕ್ರಮ ಜರುಗಿಸಲಾಗಿತ್ತು. ಆದಾಗ್ಯೂ ಸೋಂಕು ಹರಡಿದೆ. ಕೂಡಲೇ ತರಬೇತಿ ಕೇಂದ್ರವನ್ನು ಸ್ಯಾನಿಟೈಸ್‌ ಮಾಡಿಸಲಾಗಿದ್ದು, ಉಳಿದವರನ್ನು ಕ್ವಾರಂಟೈನ್‌ಗೊಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!