ಕಾರ್ಕಳ: ಜೋಕಾಲಿ ಆಡುವಾಗ ಕುತ್ತಿಗೆಗೆ ಸೀರೆ ಸಿಲುಕಿ 9ರ ಬಾಲಕಿ ಸಾವು

By Kannadaprabha News  |  First Published May 28, 2023, 3:00 AM IST

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಕೆಮ್ಮಣ್ಣು ಅಂತೊಟ್ಟು ಎಂಬಲ್ಲಿ ಸಂಭವಿಸಿದ ಘಟನೆ 


ಕಾರ್ಕಳ(ಮೇ.28):  ಜೋಕಾಲಿ ಆಡುತ್ತಿದ್ದ ಸಂದರ್ಭದಲ್ಲಿ ಕುತ್ತಿಗೆಗೆ ಸೀರೆ ಸುತ್ತಿಕೊಂಡ ಪರಿಣಾಮ ಬಾಲಕಿಯೊಬ್ಬಳು ದಾರುಣ ರೀತಿಯಲ್ಲಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಕೆಮ್ಮಣ್ಣು ಅಂತೊಟ್ಟು ಎಂಬಲ್ಲಿ ಸಂಭವಿಸಿದೆ. ಅಂತೊಟ್ಟು ನಿವಾಸಿ ಲಕ್ಷ್ಮಣ್‌ ಪೂಜಾರಿ ಎಂಬವರ ಮಗಳು ಮಾನ್ವಿ (9) ಮೃತ ಬಾಲಕಿ. 

ಶುಕ್ರವಾರ ಸಂಜೆ 4 ಗಂಟೆಗೆ ಮನೆ ಪರಿಸರದಲ್ಲಿ ಚಿಕ್ಕಪ್ಪನ ಮನೆ ಬಳಿ ಪಕ್ಕದ ಮನೆಯ ದೀಕ್ಷಾ ಎಂಬಾಕೆ ಜೊತೆ ಸೀರೆ ಕಟ್ಟಿಜೋಕಾಲಿ ಆಡುವಾಗ ಆಕಸ್ಮಿಕವಾಗಿ ಜೋಕಾಲಿಗೆ ಕಟ್ಟಿದ ಸೀರೆ ಆಕೆಯ ಕುತ್ತಿಗೆಗೆ ಸುತ್ತಿಕೊಂಡು ದುರ್ಘಟನೆ ನಡೆದಿದೆ.

Tap to resize

Latest Videos

undefined

ಕರಾವಳಿ ಜಿಲ್ಲೆಯಲ್ಲಿ ಮತ್ತೆ ಮತಾಂತರದ ಆರೋಪ, ಮಾಹಿತಿ ನೀಡದೆ ಚರ್ಚ್ ಕಟ್ಟಡ ನಿರ್ಮಾಣ!

ತುರ್ತು ಚಿಕಿತ್ಸೆಗೆಂದು ನಿಟ್ಟೆಸಮುದಾಯ ಆರೋಗ್ಯ ಕೇಂದ್ರಕ್ಕೆ ಬಾಲಕಿಯನ್ನು ಕರೆದೊಯ್ಯಲಾಗಿತ್ತು. ವೈದ್ಯಾಧಿಕಾರಿಯವರು ಮಾನ್ವಿಯನ್ನು ಪರೀಕ್ಷಿಸಿದಾಗ ಆಕೆ ಮೃತಪಟ್ಟಿರುವುದಾಗಿ ಖಚಿತಪಡಿಸಿದರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!