ಮಹಿಳೆಯರ ಬಳಿ ಅಸಭ್ಯ ವರ್ತನೆ : 9 ಯುವಕರು ಅರೆಸ್ಟ್

Published : Dec 04, 2019, 11:42 AM IST
ಮಹಿಳೆಯರ ಬಳಿ ಅಸಭ್ಯ ವರ್ತನೆ :  9 ಯುವಕರು ಅರೆಸ್ಟ್

ಸಾರಾಂಶ

ಮಹಿಳೆಯರ ಬಳಿ ಅನುಚಿತವಾಗಿ ವರ್ತಿಸಿದ 9 ಯುವಕರನ್ನು ಬಂಧಿಸಲಾಗಿದೆ. ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಅಸಭ್ಯ ವರ್ತನೆ ತೋರಿದವರಿಗೆ ಸ್ಥಳೀಯರಿಂದಲೂ ಏಟು ಬಿದ್ದಿದೆ. 

ಚಿತ್ರದುರ್ಗ (ಡಿ.04): ಮಹಿಳೆಯರ ಜೊತೆಗೆ ಅಸಭ್ಯವಾಗಿ ವರ್ತಿಸಿದ 9 ಮಂದಿ ಯುವಕರನ್ನು ಅರೆಸ್ಟ್ ಮಾಡಲಾಗಿದೆ. 

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹರ್ತಿಕೋಟೆ ಬಳಿಯಲ್ಲಿ ಘಟನೆ ನಡೆದಿದ್ದು, ಬಂಧಿತರನ್ನು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನವರೆನ್ನಲಾಗಿದೆ. 

ಬಂಧಿತರನ್ನು ವಿವೇಕಾನಂದ, ಜಗದೀಶ, ತಿಪ್ಪೇಸ್ವಾಮಿ, ಶಿವಕುಮಾರ್, ವಿರುಪಾಕ್ಷ, ಬಸವರಾಜ, ಸುರೇಶ, ಮಾರುತಿ, ಶಿವಣ್ಣ ಪೊಲೀಸರ ವಶದಲ್ಲಿದ್ದು, ಇವರೆಲ್ಲರು ಕುಡಿದ ಅಮಲಿನಲ್ಲಿ ಗಾರ್ಮೆಂಟ್ ಕೆಲಸ ಮುಗಿಸಿ ಗ್ರಾಮಕ್ಕೆ ಹಿಂದಿರುಗುತ್ತಿದ್ದ ಮಹಿಳೆಯರ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆನ್ನಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಹಿಳೆಯರಿದ್ದ ಕ್ರೂಸರ್ ವಾಹನ ಹಿಂಬಾಲಿಸಿ ಅನುಚಿತವಾಗಿ ವರ್ತನೆ ತೋರಿದ್ದಾರೆ ಎಂದು ಆರೋಪಿಸಲಾಗಿದೆ. 

ಚಿತ್ರದುರ್ಗ ಜಿಲ್ಲೆಯ ಗನ್ನಾಯಕನಹಳ್ಳಿಯಿಂದ ಹರ್ತಿಕೋಟೆ ಗ್ರಾಮದವರೆಗೆ ಹಿಂಬಾಲಿಸಿ  ಕ್ರೂಸರ್ ಚಾಲಕನ ಮೇಲೆ ಹಲ್ಲೆ ಮಾಡಿದ್ದು, ಬಿಡಿಸಲು ಹೋದ ಮಹಿಳೆಯರ ಬಳಿಯೂ ಅಸಭ್ಯ ವರ್ತನೆ ತೋರಿದ್ದಾರೆ. ಇದರಿಂದ ಎಲ್ಲರಿಗೂ ಸ್ಥಳೀಯರು ಸೇರಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. 

ಸದ್ಯ ಆರೋಪಿಗಳನ್ನು ಐಮಂಗಲ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಸೋಮವಾರ ಸಂಜೆ ವೇಳೆಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

PREV
click me!

Recommended Stories

ಮೆಟ್ರೋ ಗುಲಾಬಿ ಮಾರ್ಗದ ರೈಲು ಅನಾವರಣ: ಯಾವ್ಯಾವ ಮಾರ್ಗಕ್ಕೆ?
ದಿಲ್ಲಿ, ಮುಂಬಯಿ ರೀತಿ ರಾಜಧಾನಿಗೆ ಎರಡು ಪೊಲೀಸ್‌ ಕಮೀಷನರೇಟ್‌