* ಕೊರೋನಾ ವಿರುದ್ಧ ಸೆಣಸಾಟ ನಡೆಸಿದ 80 ವರ್ಷದ ಅಜ್ಜಿ
* ಕೊಲಕುಂದ ಗ್ರಾಮದ ದೇವಮ್ಮ ಮೊಗುಲಪ್ಪ ಕೋವಿಡ್ ಗೆದ್ದ ಹಿರಿಜೀವ
* ಸೋಂಕಿತರಿಗೆ ಧೈರ್ಯ ಹೇಳಿದ ಅಜ್ಜಿ
ಗುರುಮಠಕಲ್ (ಯಾದಗಿರಿ)(ಜೂ.16): ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸತತ 20 ದಿನಗಳ ಕಾಲ ಮಹಾಮಾರಿ ಕೊರೋನಾ ವಿರುದ್ಧ ಸೆಣಸಾಟ ನಡೆಸಿದ 80 ವರ್ಷದ ಅಜ್ಜಿಯೊಬ್ಬರು ಗುಣಮುಖರಾಗಿ ಮಂಗಳವಾರ ಮನೆಗೆ ತೆರಳಿದ್ದಾರೆ.
ಕೊಲಕುಂದ ಗ್ರಾಮದ ದೇವಮ್ಮ ಮೊಗುಲಪ್ಪ ಕೊರೋನಾ ಗೆದ್ದ ಹಿರಿಜೀವ. ದೇವಮ್ಮ ಅವರಿಗೆ ಸೋಂಕು ದೃಢಪಡುತ್ತಿದ್ದಂತೆ ಗುರುಮಠಕಲ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಶೇ.80ರಷ್ಟು ಇತ್ತು. ಚಿಕಿತ್ಸೆ ಬಳಿಕ ಅವರು ಚೇತರಿಸಿಕೊಂಡು ಜೂ.15ಕ್ಕೆ ಮನೆಗೆ ಹಿಂದಿರುಗಿದ್ದಾರೆ.
undefined
ಕೊರೋನಾ ವಾರಿಯರ್ಸ್ ಕುಟುಂಬಗಳಿಗೆ ವ್ಯಾಕ್ಸಿನ್ ಗಗನಕುಸುಮ..!
ತಕ್ಷಣ ಕಾರ್ಯಪ್ರವೃತ್ತರಾದ ವೈದ್ಯರು ಆಮ್ಲಜನಕ ಪೂರೈಕೆ ಮಾಡತೊಡಗಿದರು. ಚಿಕಿತ್ಸೆಗೆ ಸ್ಪಂದಿಸಿದ ದೇವಮ್ಮ 5 ದಿನಗಳಲ್ಲಿ ಆಮ್ಲಜನಕ ಬೆಂಬಲದಿಂದ ಚೇತರಿಸಿಕೊಂಡರು. ಸಂಪೂರ್ಣ ಗುಣಮುಖರಾದ ಅವರು ಜೂ.15ರಂದು ಬಿಡುಗಡೆ ಹೊಂದಿ ಮನೆಗೆ ತೆರಳಿದರು. ಈ ವೇಳೆ ಸೋಂಕಿತರಿಗೆ ಧೈರ್ಯ ಹೇಳಿದ ಅವರು, ‘‘ನಮ್ಮ ಜೀವನ್ದಾಗ ಇಂಥ ಎಷ್ಟೋ ಜಡ್ಡು ನೋಡಿವ್ರಿ, ಯಾವುದಕ್ಕೂ ಅಂಜಲಿಲ್ಲ. ಆಗ ಈಗಿನಂಗ ಗುಳಿಗಿ, ಸೂಜಿ ಇದ್ದಿಲ್ಲ. ಈಗಿನ ಮಂದಿ ಧೈರ್ಯಗೆಟ್ಟಾ ಸಾಯ್ಲಿಕತ್ಯಾರ. ಯಾವುದಕ್ಕ ಅಂಜಬಾಡ್ದು ಧೈರ್ಯವಾಗಿದ್ದರೆ ಸಾವನ್ನೂ ಗೆಲ್ಲಬಹುದು’’ ಎಂದರು.