ವಿಜಯಪುರ: ರಿವಾಲ್ವಾರ್‌ ಹಿಡಿದುಕೊಂಡು ಆಟ. ಗುಂಡು ತಗುಲಿ ಬಾಲಕನಿಗೆ ಗಾಯ

Published : Jun 16, 2021, 07:36 AM IST
ವಿಜಯಪುರ: ರಿವಾಲ್ವಾರ್‌ ಹಿಡಿದುಕೊಂಡು ಆಟ. ಗುಂಡು ತಗುಲಿ ಬಾಲಕನಿಗೆ ಗಾಯ

ಸಾರಾಂಶ

* ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಮರಡಿ ಪ್ರದೇಶದಲ್ಲಿ ನಡೆದ ಘಟನೆ  * ಗುಂಡು ತಗುಲಿ ಗಾಯಗೊಂಡ ನಾಲ್ಕು ವರ್ಷದ ಬಾಲಕ * ಗಾಯಗೊಂಡ ಬಾಲಕನನ್ನ ಜಿಲ್ಲಾಸ್ಪತ್ರೆಗೆ ದಾಖಲು

ವಿಜಯಪುರ/ಚಡಚಣ(ಜೂ.16): ಲೋಡೆಡ್‌ ರಿವಾಲ್ವಾರ್‌ ಹಿಡಿದುಕೊಂಡು ಆಟವಾಡುತ್ತಿದ್ದ ವೇಳೆ ನಾಲ್ಕು ವರ್ಷದ ಬಾಲಕನೊಬ್ಬನ ತೊಡೆಗೆ ಗುಂಡು ತಗುಲಿ ಗಾಯಗೊಂಡ ಘಟನೆ ಜಿಲ್ಲೆಯ ಚಡಚಣ ಮರಡಿ(ಮಡ್ಡಿ) ಪ್ರದೇಶದಲ್ಲಿ ಮಂಗಳವಾರ ನಡೆದಿದೆ. 

ಅಭಿಷೇಕ ಸಿದ್ದರಾಮ ಕಲ್ಮನಿ(4) ಗಾಯಗೊಂಡ ಬಾಲಕ. ಬೆಳಗ್ಗೆ 11 ಗಂಟೆಯ ಸುಮಾರಿಗೆ ಬಾಲಕ ಅಭಿಷೇಕ್‌ ಮನೆಯ ಕಬ್ಬಿಣ ಪೆಟ್ಟಿಗೆಯಲ್ಲಿದ್ದ ಗನ್‌ ಅನ್ನು ತೆಗೆದುಕೊಂಡಿದ್ದಾನೆ. ನಂತರ ಆಡವಾಡುವಾಗ ಲೋಡೆಡ್‌ ಗನ್‌ ಅನ್ನು ಒತ್ತಿದ್ದು, ಬಾಲಕನ ತೊಡೆಯಿಂದ ಗುಂಡು ಹಾದು ಹೋಗಿದೆ. ತಕ್ಷಣ ಆತನನ್ನು ಜಿಲ್ಲಾಸ್ಪತ್ರೆ ದಾಖಲಿಸಲಾಗಿದೆ.

ವಿಜಯಪುರದ ಹಲವೆಡೆ ಭೂಕಂಪನದ ಅನುಭವ

ಪರವಾನಗಿ ಹೊಂದಿರುವ ಗನ್‌ನಿಂದಲೇ ಈ ಅವಘಡ ಸಂಭವಿಸಿದ್ದು, ಈ ಸಂಬಂಧ ಚಡಚಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

ಮೊಬೈಲ್ ನೋಡುತ್ತಾ ಕುಳಿತ ತಾಯಿ; 4ನೇ ಮಹಡಿಯಿಂದ ಕೆಳಗೆ ಬಿದ್ದ ಮಗು, ಸಾವು-ಬದುಕಿನ ನಡುವೆ ಹೋರಾಟ
ರಾಜ್ಯದಲ್ಲಿ ಅಪ್ಪನ ಮಗನೇ ಮಿನಿಸ್ಟರ್ ಇರೋದು; ಅಕ್ರಮ ಬಾಂಗ್ಲಾದೇಶಿಗರನ್ನ ಹೊರದಬ್ಬಿ: ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿಕೆ