ಬೆಂಗ್ಳೂರಲ್ಲಿ ಈ 8 ಪ್ರದೇಶಗಳಲ್ಲಿ ಮಹಿಳೆಯರು ನಾಟ್ ಸೇಫ್..!

By Kannadaprabha NewsFirst Published Feb 21, 2020, 8:54 AM IST
Highlights

ಇರುಳು ಹೊತ್ತಿನಲ್ಲಿ ಮಹಿಳೆಯರಿಗೆ ಅಸುರಕ್ಷಿತವಾಗಿರುವ ಎಂಟು ಸ್ಥಳಗಳನ್ನು ಗುರುತಿಸಿರುವ ಆಗ್ನೇಯ ವಿಭಾಗದ ಪೊಲೀಸರು, ಆ ಪ್ರದೇಶಗಳಲ್ಲಿ ಮಹಿಳೆಯರ ರಕ್ಷಣೆ ಸಲುವಾಗಿ ಫೆ.24 ರಿಂದ ಮಾ.8ರವರೆಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಬೆಂಗಳೂರು(ಫೆ.21): ಇರುಳು ಹೊತ್ತಿನಲ್ಲಿ ಮಹಿಳೆಯರಿಗೆ ಅಸುರಕ್ಷಿತವಾಗಿರುವ ಎಂಟು ಸ್ಥಳಗಳನ್ನು ಗುರುತಿಸಿರುವ ಆಗ್ನೇಯ ವಿಭಾಗದ ಪೊಲೀಸರು, ಆ ಪ್ರದೇಶಗಳಲ್ಲಿ ಮಹಿಳೆಯರ ರಕ್ಷಣೆ ಸಲುವಾಗಿ ಫೆ.24 ರಿಂದ ಮಾ.8ರವರೆಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಸಿಲ್‌್ಕ ಬೋರ್ಡ್‌, ಡೈರಿ ಸರ್ಕಲ್‌, ಕೋರಮಂಗಲ ಬಿಡಿಎ ಕಾಂಪ್ಲೆಕ್ಸ್‌, ಕೋರಮಂಗಲದ ಪಾಸ್‌ಪೋರ್ಟ್‌ ಕಚೇರಿ, ವೀರಾ ಯೋಧರ ಉದ್ಯಾನವನ 4ನೇ ಹಂತ, ಗ್ರಾಪೆ ಗಾರ್ಡನ್‌ ಕೋರಮಂಗಲ 6ನೇ ಹಂತ, ಮಡಿವಾಳ ಮಾರ್ಕೆಟ್‌ ಸ್ಟ್ರೀಟ್‌ ಹಾಗೂ ತಾವರೆಕೆರೆಯ ಸ್ಫೂರ್ತಿ ಆಸ್ಪತ್ರೆ ಸೇರಿ ಎಂಟು ಸ್ಥಳಗಳು ರಾತ್ರಿ ವೇಳೆ ಮಹಿಳೆಯರಿಗೆ ಅಸುರಕ್ಷಿತವಾಗಿವೆ. ಈ ಪ್ರದೇಶದಲ್ಲಿ ಮಹಿಳೆಯರ ನಿರ್ಭೀತಿ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್‌ ಟ್ವಿಟ್‌ ಮಾಡಿದ್ದಾರೆ.

ಪಾಕ್‌ಗೆ ಹೋಗಿ ಭಾರತ್‌ ಮಾತಾ ಕೀ ಜೈ ಎಂದಿದ್ರಂತೆ ಓವೈಸಿ..!

ಮಹಿಳೆಯರ ಅಸುರಕ್ಷಿತ ಪ್ರದೇಶಗಳನ್ನು ಸುರಕ್ಷಿತವಾಗಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಪೂರ್ವ ನಿಗದಿತ ಸ್ಥಳಗಳಲ್ಲಿ ಫೆ.24ರಿಂದ ಮಾ.8ರವರೆಗೆ ರಾತ್ರಿ 7ರಿಂದ 10 ರವರೆಗೆ ಪೊಲೀಸರು ವಿಶೇಷ ನಿಗಾವಹಿಸಲಿದ್ದಾರೆ. ಈ ಅಭಿಯಾನದಲ್ಲಿ ಸಾರ್ವಜನಿಕರು ಸಹ ಕೈಜೋಡಿಸುವಂತೆ ಡಿಸಿಪಿ ಕೋರಿದ್ದಾರೆ.

click me!