ಅಂಗಾಂಗ ದಾನ ಮಾಡಿದ ರಕ್ಷಿತಾ ಕುಟುಂಬಕ್ಕೆ ಸಚಿವ ಭೈರತಿ ಭೇಟಿ: 8 ಲಕ್ಷದ ಪರಿಹಾರದ ಚೆಕ್ ವಿತರಣೆ

By Girish GoudarFirst Published Sep 27, 2022, 11:24 PM IST
Highlights

ರಕ್ಷಿತಾ ಕುಟುಂಬಕ್ಕೆ ಧನ್ಯವಾದ ಸಮರ್ಪಣೆ ಮಾಡಲು ಜಿಲ್ಲಾಡಳಿತ ರಕ್ಷಿತಾ ಮನೆಗೆ ಹೋಗಿ ಸ್ವಾಂತನ ಹೇಳಿ ಒಂದಿಷ್ಟು ನೆರವಿನ ಹಸ್ತವನ್ನ ಕೂಡ ಚಾಚಿದೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಸೆ. 27):  ಕಾಫಿನಾಡಿನ ಬಯಲುಸೀಮೆ ಭಾಗದ ರಕ್ಷಿತಾ ಕುಟುಂಬದ ಮಹಾನ್ ತ್ಯಾಗದಿಂದ ಒಂಭತ್ತು ಮಂದಿಯ ಬದುಕು ಬೆಳಕಾಗಿದೆ. ಮಗಳ ಸಾವಿನ ನೋವಿನಲ್ಲೂ ಅಂಗಾಂಗ ದಾನಕ್ಕೆ ಮನಸು ಮಾಡಿದ ಪೋಷಕರ ನಿರ್ಧಾರಕ್ಕೆ ಎಷ್ಟು ಬಹುಪರಾಕ್ ಹೇಳಿದ್ರೂ ಕಮ್ಮಿನೇ. ಹೀಗಾಗಿ ಆ ಕುಟುಂಬಕ್ಕೆ ಧನ್ಯವಾದ ಸಮರ್ಪಣೆ ಮಾಡಲು ಜಿಲ್ಲಾಡಳಿತ ರಕ್ಷಿತಾ ಮನೆಗೆ ಹೋಗಿ ಸ್ವಾಂತನ ಹೇಳಿ ಒಂದಿಷ್ಟು ನೆರವಿನ ಹಸ್ತವನ್ನ ಕೂಡ ಚಾಚಿದೆ. 

ರಕ್ಷಿತಾ ಕುಟುಂಬಕ್ಕೆ 8 ಲಕ್ಷದ ಪರಿಹಾರದ ಚೆಕ್ ವಿತರಿಸಿದ ಸಚಿವ ಭೈರತಿ ಬಸವರಾಜ್ 

ಕಳೆದ 6 ದಿನಗಳ ಹಿಂದೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಿರ್ವಾಹಕನ ಬೇಜವಾಬ್ದಾರಿತನದಿಂದ ಬಸ್ಸಿನಿಂದ ಬಿದ್ದು ಮೆದುಳು ನಿಷ್ಟ್ರೀಯಗೊಂಡಿದ್ದ ರಕ್ಷಿತಾ, ಬದುಕಲಿ ಅಂತಾ ಕೋಟ್ಯಾಂತರ ಜನರು ಪ್ರಾರ್ಥಿಸಿದ್ರು. ಆದ್ರೆ ರಕ್ಷಿತಾ ಬದುಕಲಿಲ್ಲ, ಹಾಗಾಗೀ ಆಕೆಯ ಅಂಗಾಂಗಗಳನ್ನ ದಾನ ಮಾಡಲು ಪೋಷಕರು ನಿರ್ಧರಿಸಿ, ಅಂತೆಯೇ ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನಡೆದಿತ್ತು. ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಯುವತಿ ಸ್ಥಿತಿ ನಡುವೆಯೂ ಮಗಳಂತೂ ಬದುಕಲ್ಲ, ಬೇರೆ ಜೀವಗಳಾದ್ರೂ ಬದುಕಲಿ ಅಂತಾ ಮನಸ್ಸು ಮಾಡಿದ ಪೋಷಕರು ತಾಗ್ಯದ ಜೊತೆಗೆ  ಹೃದಯ ಹೆಲಿಕಾಪ್ಟರ್ ನಲ್ಲಿ ರವಾನೆ, ಕಿಡ್ನಿ,ಶ್ವಾಸಕೋಶ, ಕಣ್ಣುಗಳು ಸೇರಿ ಉಳಿದ ಅಂಗಾಂಗಳು ಅಂಬ್ಯುಲೆನ್ಸ್ನಲ್ಲಿ ಸಾಗಾಟ.. ಕಣ್ಮರೆಯಾದ ಸ್ನೇಹಿತೆಗಾಗಿ ಇಡೀ ಕಾಲೇಜೇ ಕಣ್ಣೀರಧಾರೆಯನ್ನೇ ಹಾಕಿದ್ದರು.ಅಲ್ಲದೆ ಮೃತ ರಕ್ಷಿತಾಳ ಪೋಷಕರ ಈ ನಿರ್ಧಾರಕ್ಕೆ ಕೇವಲ ಕಾಫಿನಾಡು ಮಾತ್ರವಲ್ಲ, ಇಡೀ ರಾಜ್ಯವೇ ತಲೆ ಬಾಗಿ ನಮಸ್ಕರಿಸಿತ್ತು.. ಬಡತನದ ಬೇಗೆಯಲ್ಲಿ ಬೇಯುತ್ತಿದ್ರೂ ಈ ರೀತಿಯ ದಿಟ್ಟ ನಿರ್ಧಾರ ತೆಗೆದುಕೊಂಡ ಕುಟುಂಬಕ್ಕೆ ಧನ್ಯವಾದ ಸಲ್ಲಿಸಲು ಕಡೂರು ತಾಲೂಕಿನ ಸೋಮನಹಳ್ಳಿ ಗ್ರಾಮಕ್ಕೆ ಇಂದು ಚಿಕ್ಕಮಗಳೂರು ಜಿಲ್ಲಾಡಳಿತ ರಕ್ಷಿತಾ ಮನೆಗೆ ತೆರಳಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ವೈಯಕ್ತಿಕ 2 ಲಕ್ಷ ಸೇರಿದಂತೆ 5 ಲಕ್ಷದ ಸಿಎಂ ಪರಿಹಾರ ನಿಧಿ ಚೆಕ್ ಹಸ್ತಾಂತರಿಸಿದ್ರು. ತಾಂಡ ಅಭಿವೃದ್ಧಿ ನಿಗಮದಿಂದಲೂ 3 ಲಕ್ಷ ಸೇರಿ ಒಟ್ಟು 10 ಲಕ್ಷ ಹಣ ಸರ್ಕಾರದಿಂದ ರಕ್ಷಿತಾ ಕುಟುಂಬಕ್ಕೆ ಸಲ್ಲಿಕೆ ಆಯ್ತು. ರಕ್ಷಿತಾ ಸಹೋದರನಿಗೆ ಸರ್ಕಾರಿ ಉದ್ಯೋಗ ಕೊಡಲು ಆದೇಶ ಮಾಡುತ್ತೇನೆ ಅಂತಾ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಪ್ರತಿಕ್ರಿಯೆ ನೀಡಿದರು. 

Chikkamagaluru: ಸಾವಿನಲ್ಲೂ ಸಾರ್ಥಕತೆ ಮೆರೆದ ರಕ್ಷಿತಾ ಕುಟುಂಬಕ್ಕೆ 8 ಲಕ್ಷ ಪರಿಹಾರ

ಕುಟುಂಬಕ್ಕೆ ಮನೆ ಕಟ್ಟಿಸಿಕೊಂಡಲು ಮುಂದಾಗಿರುವ ಶಾಸಕ 

ಕಡೂರು ಶಾಸಕ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಕೂಡ ಮನೆ ಕಟ್ಟಿಸಿಕೊಡಲು ಮುಂದಾಗುವುದಾಗಿ ಹೇಳಿರೋದು ಕುಟುಂಬಕ್ಕೆ ಸ್ವಲ್ಪ ನೆಮ್ಮದಿ ತರಿಸಿದೆ. ಆದ್ರೂ ಮಗಳನ್ನ ಕಳೆದುಕೊಂಡು ರಕ್ಷಿತಾ ಪೋಷಕರು ಜರ್ಜರಿತಗೊಂಡಿದ್ದಾರೆ. ಹಾಗಾಗೀ ಹೆತ್ತ ಕುಡಿಯನ್ನ ಕಳೆದುಕೊಂಡ ನಮಗೆ ನ್ಯಾಯ ಸಿಕ್ಕಿಲ್ಲ, ಆದ್ರೆ ಮಗನಿಗೆ ಒಂದು ಉದ್ಯೋಗ ಸಿಕ್ಕಿದ್ರೆ ಒಳ್ಳೆದಾಗುತ್ತೆ ಅಂತಾ ರಕ್ಷಿತಾ ತಾಯಿ ಲಕ್ಷ್ಮೀಬಾಯಿ ಹೇಳಿದ್ರು.ಸಾವಲ್ಲೂ ಸಾರ್ಥಕತೆ ತೋರಿದ ರಕ್ಷಿತಾ, ಅಂಗಾಂಗ ದಾನದಂತಹ ದಿಟ್ಟ ನಿರ್ಧಾರ ತೆಗೆದುಕೊಂಡ ಆಕೆಯ ಹೆತ್ತವರ ನಿರ್ಧಾರಕ್ಕೆ ಎಷ್ಟು ಕೈ ಎತ್ತಿ ಮುಗಿದರೂ ಕಡಿಮೆಯೇ. ಹೀಗಾಗಿ ಚಿಕ್ಕಮಗಳೂರು ಜಿಲ್ಲಾಡಳಿತ ಕೂಡ ಆ ಕುಟುಂಬಕ್ಕೆ ಧನ್ಯವಾದ ಹೇಳುವ ಕೆಲಸವನ್ನ ಮಾಡಿದೆ.
 

click me!