ಚಿತ್ರದುರ್ಗದಲ್ಲಿ ಸಿಡಿಲು ಬಡಿದು 8 ಮೇಕೆಗಳು ಸಾವು

Kannadaprabha News   | Asianet News
Published : Apr 07, 2020, 10:12 AM IST
ಚಿತ್ರದುರ್ಗದಲ್ಲಿ ಸಿಡಿಲು ಬಡಿದು 8 ಮೇಕೆಗಳು ಸಾವು

ಸಾರಾಂಶ

ಸಿಡಿಲು ಬಡಿದು 8 ಮೇಕೆಗಳು ಮೃತ ಪಟ್ಟು ಮೇಕೆಗಾಹಿಯೊಬ್ಬ ಅಸ್ವಸ್ಥ ಗೊಂಡಿರುವ ಘಟನೆ ಮೊಳಕಾಲ್ಮುರು ತಾಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.  

ಚಿತ್ರದುರ್ಗ(ಏ.07): ಸಿಡಿಲು ಬಡಿದು 8 ಮೇಕೆಗಳು ಮೃತ ಪಟ್ಟು ಮೇಕೆಗಾಹಿಯೊಬ್ಬ ಅಸ್ವಸ್ಥ ಗೊಂಡಿರುವ ಘಟನೆ ಮೊಳಕಾಲ್ಮುರು ತಾಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ಅಸ್ವಸ್ಥ ಗೊಂಡಿರುವವನನ್ನು ಉಚ್ಚಂಗಿದುರ್ಗದ ಬೊಮ್ಮೇಶ ಎಂದು ಹೇಳಲಾಗಿದೆ. ಈತ ಮೇಕೆ ಮೇಯಿಸಲಿಕ್ಕೆ ಹೊಲಕ್ಕೆ ಹೋದಾಗ ಸಂಜೆ ಮಳೆ ಸುರಿದಿದ್ದು, ಇದೇ ವೇಳೆ ಸಿಡಿಲು ಬಡಿದು 8 ಮೇಕೆಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ.

ಲಾಕ್‌ಡೌನ್‌ ಉಲ್ಲಂಘಿಸಿದರೆ ಈ ಕಾಯ್ದೆ ಅಡಿಯಲ್ಲಿ ಕೇಸು ಹಾಕಬಹುದು!

ಜತೆಗೆ ಬೊಮ್ಮೇಶ ತೀವ್ರ ಅಸ್ವಸ್ಥ ಗೊಂಡಿದ್ದು ಇವನನ್ನು ಹೆಚ್ಚಿನ ಚಿಕಿತ್ಸೆಗೆಂದು ಬಳ್ಳಾರಿಯ ವಿಮ್ಸಗೆ ದಾಖಲಿಸಲಾಗಿದೆ. ತಹಸೀಲ್ದಾರ್‌ ಎಂ.ಬಸವರಾಜ, ಶಿರೇಸ್ಥೇದಾರ್‌ ಉಮೇಶ, ಗ್ರಾಮ ಲೆಕ್ಕಾಧಿಕಾರಿ ಡಿ.ಎಸ್‌ ವಾಲೇಕಾರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.8 goats died by lightening in chitradurga

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!