ಚಿತ್ರದುರ್ಗದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 8 ಕೋಟಿ ರು. ವಶ

Published : Nov 30, 2023, 04:24 AM ISTUpdated : Nov 30, 2023, 10:54 AM IST
ಚಿತ್ರದುರ್ಗದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 8 ಕೋಟಿ ರು. ವಶ

ಸಾರಾಂಶ

ಅಡಿಕೆ ವರ್ತಕರಿಗೆ ಸೇರಿದ ಸುಮಾರು 8 ಕೋಟಿ ರು. ನಗದನ್ನು ಕಾರಿನಲ್ಲಿ ಸಾಗಿಸಲಾಗುತ್ತಿತ್ತು ಎನ್ನಲಾಗಿದ್ದು, ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಕಾರು ತೆರಳುವಾಗ ಮಲ್ಲಾಡಿಹಳ್ಳಿ ಬಳಿ ತಡೆದ ಹೊಳಲ್ಕೆರೆ ಪೊಲೀಸರು ತಪಾಸಣೆ ಮಾಡಿದಾಗ ಕೋಟಿಗಟ್ಟಲೆ ಹಣ ಒಯ್ಯುತ್ತಿದ್ದುದು ಬೆಳಕಿಗೆ ಬಂದಿದೆ.

ಚಿತ್ರದುರ್ಗ(ನ.30):  ಇನೋವಾ ಕಾರೊಂದರಲ್ಲಿ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ ಅಪಾರ ಪ್ರಮಾಣದ ನಗದನ್ನು ಬುಧವಾರ ಹೊಳಲ್ಕೆರೆ ಪೊಲೀಸರು ಜಪ್ತಿ ಮಾಡಿದ್ದು, ಈ ಸಂಬಂಧ ಕಾರು ಚಾಲಕ ಸಚಿನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಅಡಿಕೆ ವರ್ತಕರಿಗೆ ಸೇರಿದ ಸುಮಾರು 8 ಕೋಟಿ ರು. ನಗದನ್ನು ಕಾರಿನಲ್ಲಿ ಸಾಗಿಸಲಾಗುತ್ತಿತ್ತು ಎನ್ನಲಾಗಿದ್ದು, ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಕಾರು ತೆರಳುವಾಗ ಮಲ್ಲಾಡಿಹಳ್ಳಿ ಬಳಿ ತಡೆದ ಹೊಳಲ್ಕೆರೆ ಪೊಲೀಸರು ತಪಾಸಣೆ ಮಾಡಿದಾಗ ಕೋಟಿಗಟ್ಟಲೆ ಹಣ ಒಯ್ಯುತ್ತಿದ್ದುದು ಬೆಳಕಿಗೆ ಬಂದಿದೆ.

ಚಿತ್ರದುರ್ಗ: ಜಿಲ್ಲಾಸ್ಪತ್ರೆಯಲ್ಲಿ ಕೋತಿಗಳ‌ ಕಿರಿಕ್, ಆತಂಕದಲ್ಲಿ ರೋಗಿಗಳು..!

ಈ ಕುರಿತು ಮಾಹಿತಿ ನೀಡಿರುವ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ, ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ಜಪ್ತಿ ಮಾಡಿ, ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸುತ್ತಿದ್ದೇವೆ. ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದರು.

PREV
Read more Articles on
click me!

Recommended Stories

ಕಿತ್ತೂರು ಕರ್ನಾಟಕಕ್ಕೆ 5 ಸಾವಿರ ಕೋಟಿ ನೀಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ: ಶಾಸಕ ರಾಜು ಕಾಗೆ
ಉಬರ್ ಆ್ಯಪ್‌ನಲ್ಲೂ ಬೆಂಗಳೂರು ಮೆಟ್ರೋ ಟಿಕೆಟ್ ಖರೀದಿ ಸೌಲಭ್ಯ, ಬುಕಿಂಗ್ ಮಾಡುವುದು ಹೇಗೆ?