ಬಂಟ್ವಾಳದ ವಿಟ್ಲ ಪೊಲೀಸರ ತಂಡ ಗುರುವಾರ ಸಾಲೆತ್ತೂರಿನ ಕಸಾಯಿಖಾನೆಗೆ ದಾಳಿ ನಡೆಸಿ ಸುಮಾರು 200 ದನದ ಚರ್ಮ, 8 ಗೋವು ಸಹಿತ ಹಲವು ವಾಹನಗಳನ್ನು ವಶಕ್ಕೆ ಪಡೆದಿದ್ದು, ಒಬ್ಬನನ್ನು ಬಂಧಿಸಿದ್ದಾರೆ.
ಮಂಗಳೂರು(ಮೇ 22): ಬಂಟ್ವಾಳದ ವಿಟ್ಲ ಪೊಲೀಸರ ತಂಡ ಗುರುವಾರ ಸಾಲೆತ್ತೂರಿನ ಕಸಾಯಿಖಾನೆಗೆ ದಾಳಿ ನಡೆಸಿ ಸುಮಾರು 200 ದನದ ಚರ್ಮ, 8 ಗೋವು ಸಹಿತ ಹಲವು ವಾಹನಗಳನ್ನು ವಶಕ್ಕೆ ಪಡೆದಿದ್ದು, ಒಬ್ಬನನ್ನು ಬಂಧಿಸಿದ್ದಾರೆ.
ಕೊಳ್ನಾಡು ಕಟ್ಟತ್ತಿಲ ಮಠ ನಿವಾಸಿ ಹಾರಿಸ್ ಯಾನೇ ಮಹಮ್ಮದ್ ಹಾರೀಸ್ (22) ಬಂಧಿತ ಆರೋಪಿ. ದನ ಕಳ್ಳತನದ ಮಾಹಿತಿ ಆಧರಿಸಿ ಪೊಲೀಸರ ತಂಡ ಕೊಳ್ನಾಡಿನ ಮನೆಯೊಂದಕ್ಕೆ ದಾಳಿ ನಡೆಸಿದ ಸಂದರ್ಭ ಹಾರೀಸ್ ಪಲಾಯನ ಮಾಡಲು ಯತ್ನಿಸಿದ್ದು, ಈ ವೇಳೆ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಈತನ ವಿಚಾರಣೆ ಸಮಯದಲ್ಲಿ ಕಸಾಯಿಖಾನೆಯ ಮಾಹಿತಿ ಸಮಗ್ರ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಕ್ವಾರಂಟೈನ್ ಉಲ್ಲಂಘಿಸಿದ ತಂದೆ ಮಗಳ ವಿರುದ್ಧ ಕ್ರಿಮಿನಲ್ ಕೇಸ್
ಮಾಹಿತಿ ಆಧಾರದಲ್ಲಿ ಸಾಲೆತ್ತೂರು ಐತ್ತಕುಮೇರು ಭಾಗಕ್ಕೆ ಪೊಲೀಸ್ ತಂಡ ದಾಳಿ ನಡೆಸಿದ್ದು, 8 ಗೋವು, 200 ದನದ ಚರ್ಮ ಸ್ಥಳದಲ್ಲಿ ಪತ್ತೆಯಾಗಿದೆ. ಅಕ್ರಮವಾಗಿ ಕಸಾಯಿಖಾನೆ ನಡೆಸಲು ಬಳಸಿದ್ದರೆನ್ನಲಾದ ನಾಲ್ಕು ದ್ವಿಚಕ್ರ ವಾಹನ, ಅಟೋ, ಅಶೋಕ್ ಲೇಲೆಂಡ್ ದೋಸ್ತು ವಾಹನ ಸೇರಿ ಮಾಂಸ ಮಾಡಲು ಬಳಸುವ ಸಾಮಗ್ರಿಗಳನ್ನು ಸ್ಥಳದಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ.
ಕಂದಮ್ಮನ ನೋಡದೇ ಕಣ್ಮುಚ್ಚಿದ: ಪತ್ನಿ ಪ್ರಸವದ ದಿನವೇ ಪತಿ ಕೊರೋನಾಗೆ ಬಲಿ
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಗೋ ಕಳ್ಳತನದ ಪ್ರಕರಣಗಳಿಗೆ ಇದು ಸಂಬಂಧವಿರುವ ಶಂಕೆ ಇದ್ದು, ಪೊಲೀಸರು ಈ ನಿಟ್ಟಿನಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಡಾ.ಲಕ್ಷ್ಮೀ ಪ್ರಸಾದ್, ಡಿವೈಎಸ್ಪಿ ವೆಲೆಂಟನ್ ಡಿಸೋಜ, ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.