ಕ್ವಾರಂಟೈನ್ ಮಾಡದೆ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿದ ತಂದೆ ಮಗಳ ವಿರುದ್ಧ ಹೆಬ್ರಿ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ.
ಹೆಬ್ರಿ(ಮೇ 22): ಕ್ವಾ ರಂಟೈನ್ ಮಾಡದೆ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿದ ತಂದೆ ಮಗಳ ವಿರುದ್ಧ ಹೆಬ್ರಿ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ. ಇಲ್ಲಿನ ಲಾಡ್ಜ್‌ನಲ್ಲಿ ಕೆಲವರನ್ನು ಕ್ವಾರಂಟೈನ್‌ನಲ್ಲಿಡಲಾಗಿತ್ತು.
ಅವರಲ್ಲಿ ಇಬ್ಬರಿಗೆ ಬುಧವಾರ ಕೊರೋನಾ ಸೋಂಕು ಪತ್ತೆಯಾಗಿತ್ತು. ಆದ್ದರಿಂದ ಲಾಡ್ಜ್‌ನ ಮೇಲ್ವಿಚಾರಕ ಮತ್ತು ಅವರ ಮಗಳನ್ನೂ ಕ್ವಾರಂಟೈನ್‌ನಲ್ಲಿರಲು ಜಿಲ್ಲಾಧಿಕಾರಿ ಆದೇಶಿಸಿದ್ದರು.
ಕಂದಮ್ಮನ ನೋಡದೇ ಕಣ್ಮುಚ್ಚಿದ: ಪತ್ನಿ ಪ್ರಸವದ ದಿನವೇ ಪತಿ ಕೊರೋನಾಗೆ ಬಲಿ
ಆದರೆ ಅವರು ನಾಡ್ಪಾಲು ಗ್ರಾಮದ ಸೀತಾನದಿಯಲ್ಲಿರುವ ಮನೆಗೆ ತೆರಳಿ, ಪರಿಸರದಲ್ಲಿ ತಿರುಗಾಡುತ್ತಿದ್ದರು. ಅವರಿಂದ ಕೊರೋನಾ ಸೋಂಕು ಹರಡುವ ಸಾಧ್ಯತೆ ಇದ್ದುದರಿಂದ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.