ವಜ್ರ ಸಿಗುತ್ತೆಂದು ವಿಗ್ರಹಕ್ಕೆ ಬೆಂಕಿ : 8 ಮಂದಿ ಅರೆಸ್ಟ್

Published : Jun 17, 2019, 10:42 AM ISTUpdated : Jun 17, 2019, 11:29 AM IST
ವಜ್ರ ಸಿಗುತ್ತೆಂದು ವಿಗ್ರಹಕ್ಕೆ ಬೆಂಕಿ : 8 ಮಂದಿ ಅರೆಸ್ಟ್

ಸಾರಾಂಶ

ದೇವರ ವಿಗ್ರಹದಿಂದ ಅಪಾರ ಪ್ರಮಾಣದ ವಜ್ರ ಸಿಗಲಿದೆ ಎಂದು ಬೆಂಕಿ ಹೊತ್ತಿಸಿದ್ದ 8 ಮಂದಿಯನ್ನು ಬಂಧಿಸಲಾಗಿದೆ. 

ಧಾರವಾಡ (ಜೂ.17): ಕಲಘಟಗಿ ತಾಲೂಕಿನ ಉಗ್ಗಿನಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂದನಗುಡ್ಡದಲ್ಲಿ ಬಸವೇಶ್ವರ ಮೂರ್ತಿಯ ತಲೆ ಭಾಗಕ್ಕೆ ಬೆಂಕಿ ಹಚ್ಚಿ, ಅದನ್ನು ಭಗ್ನಗೊಳಿಸಿದ್ದ 8 ಆರೋಪಿಗಳನ್ನು ಕಲಘಟಗಿ ಪೊಲೀಸರು ಬಂಧಿಸಿದ್ದಾರೆ.

 ದೇವರ ಮೂರ್ತಿಯ ಹಣೆಯೊಳಗೆ ಅಪಾರ ಬೆಲೆಬಾಳುವ ವಜ್ರ, ಮುತ್ತು, ಹವಳ ಇರುತ್ತವೆ ಎಂಬ ನಂಬಿಕೆ ಇತ್ತು. ಹೀಗಾಗಿ ಅವನ್ನು ಕಳವು ಮಾಡಬೇಕು ಎಂದು ತಲೆಯ ಭಾಗಕ್ಕೆ ಬೆಂಕಿ ಹಚ್ಚಿದ್ದೆವು. 

ದೇವರ ಕೊಠಡಿಯಲ್ಲಿನ ಸಿಸಿಕ್ಯಾಮೆರಾ ಹಾಗೂ ವೈರ್‌ಲೆಸ್‌ ಸೆಟ್‌ಗಳನ್ನೂ ನಾಶಪಡಿಸಿದ್ದೆವು ಎಂದು ಬಂಧಿತರು ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

PREV
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ