Kolara; ದೇಶ ವಿಭಜನೆಯ ಘೋರ ಘಟನೆಗಳ ನೆನಪು ಇಂದಿಗೂ ಅಚ್ಚಳಿಯದಂತೆ ಉಳಿದಿದೆ

By Gowthami KFirst Published Aug 13, 2022, 9:45 PM IST
Highlights

ಆಗಸ್ಟ್ 14 ರಂದು ನಡೆದ ಭಾರತದ ವಿಭಜನೆಯು ಮನುಕುಲದ ಇತಿಹಾಸದಲ್ಲಿ ಅಚ್ಚಳಿಯದೇ  ಉಳಿಯುವಂತಹ ಘೋರ ಘಟನೆಯಾಗಿದೆ, ಎಂದು ಕೋಲಾರ ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಅವರು ಅಭಿಪ್ರಾಯಪಟ್ಟಿದ್ದಾರೆ.

ಕೋಲಾರ (ಆ.13) : ಆಗಸ್ಟ್ 14 ರಂದು ನಡೆದ ಭಾರತದ ವಿಭಜನೆಯು ಮನುಕುಲದ ಇತಿಹಾಸದಲ್ಲಿ ಅಚ್ಚಳಿಯದೇ  ಉಳಿಯುವಂತಹ ಘೋರ ಘಟನೆಯಾಗಿದೆ, ಎಂದು ಕೋಲಾರ ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಅವರು ಅಭಿಪ್ರಾಯಪಟ್ಟರು. ಇಂದು ಕೋಲಾರ ಉಪ ವಿಭಾಗಾಧಿಕಾರಿಗಳ ಕಛೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ, ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ, ಸ್ವಾತಂತ್ರ್ಯದ ಸಂದರ್ಭದಲ್ಲಿ ದೇಶ ಇಬ್ಬಾಗವಾದ ಘೋರ ದುರಂತಗಳನ್ನು ಬಿಂಬಿಸುವ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ದೇಶನದಂತೆ ಇಂದು ನಮ್ಮ ಜಿಲ್ಲೆಯಲ್ಲಿ ಈ ಛಾಯಾಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ದೇಶವು 1947 ರಲ್ಲಿ ವಿಭಜನೆಯಾದಾಗ ವಲಸೆ ಹೊರಟ ಜನರು ಎದುರಿಸಿದ ಕಷ್ಟಗಳನ್ನು ಬಿಂಬಿಸುವ  ಛಾಯಾಚಿತ್ರಗಳು ಇಲ್ಲಿವೆ ಎಂದು ತಿಳಿಸಿದರು. ಯುವಜನರಲ್ಲಿ ಇಂತಹ ಘಟನೆಗಳ ಬಗ್ಗೆ ಜಾಗೃತಿ ಮೂಡಿಸುವ ಇದೊಂದು ಉತ್ತಮ ಪ್ರಯತ್ನ ಎಂದು ತಿಳಿಸಿದರು. ಈ ಛಾಯಾಚಿತ್ರ ಪ್ರದರ್ಶನದಲ್ಲಿ ಆ ಕಾಲದ ದುರಂತ ಘಟನೆಗಳ ಛಾಯಾಚಿತ್ರಗಳು ಮತ್ತು ಆ ಘಟನೆಗಳ ಬಗ್ಗೆ ಸಂಕ್ಷಿಪ್ತವಾದ ವಿವರಗಳು ಈ ಛಾಯಾಚಿತ್ರಗಳಲ್ಲಿ ಲಭ್ಯ ಇದೆ.

ಭಾರತ ಸರ್ಕಾರದ ವೈಬ್‍ಸೈಟ್‍ನಲ್ಲಿಯೂ ಸಹ ನೋಡಬಹುದು. ನಾವು ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುವುದರೊಂದಿಗೆ ಈ ನೈಜ ಘೋರ ಘಟನೆಗಳ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಸಹ ಅಗತ್ಯ ಎಂದು ತಿಳಿಸಿದರು.

ಈ ಛಾಯಾಚಿತ್ರ ಪ್ರದರ್ಶನವು ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದೆ. ನಾಳೆ ಅಂದರೆ ಆಗಸ್ಟ್ 14ರಂದು ರಂಗಮಂದಿರದಲ್ಲಿ ಇದನ್ನು ಪ್ರದರ್ಶನಕ್ಕೆ ಇಡಲಾಗುವುದು ಎಂದವರು ಮಾಹಿತಿ ನೀಡಿದರು. 

ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಯುಕೇಶ್ ಕುಮಾರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಚಿನ್ ಘೋರ್ಪಡೆ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

ಯುವ ಮೋರ್ಚಾದಿಂದ ಬೈಕ್‌ ರ‍್ಯಾಲಿ, ಕೆಂಪೇಗೌಡ ವೃತ್ತದಲ್ಲಿ ರ‍್ಯಾಲಿಗೆ ಸಂಸದ ಮುನಿಸ್ವಾಮಿ ಚಾಲನೆ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪಟ್ಟಣದಿಂದ ಬೆಮಲ್‌ ನಗರದ ಆಲದ ಮರದ ವರೆಗೂ ಬಿಜೆಪಿ ಯುವ ಮೋರ್ಚಾ ಕಾರ‍್ಯಕರ್ತರಿಂದ ತ್ರಿವರ್ಣ ಧ್ವಜಗಳನ್ನು ಹಿಡಿದು ಬೃಹತ್‌ ಬೈಕ್‌ ರ‍್ಯಾಲಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.

ಪಟ್ಟಣದ ಕೆಂಪೇಗೌಡ ವೃತ್ತದಿಂದ ಆರಂಭವಾದ ಬೈಕ್‌ ರ‍್ಯಾಲಿಯನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಎಸ್‌.ಮುನಿಸ್ವಾಮಿ, ಪ್ರಧಾನಿ ಮೋದಿ ರವರು ಅಮೃತ ಮಹೋತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕೆಂದು ಕರೆ ನೀಡಿದರೆ, ಕಾಂಗ್ರೆಸ್‌ ನಾಯಕರು ಬಾಯಿಗೆ ಬಂದಂತೆ ಟೀಕೆ ಮಾಡುತ್ತಿದ್ದಾರೆ. ನಾಗರೀಕರು ಮನೆ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸುತ್ತಿದ್ದರೆ ಕಾಂಗ್ರೆಸ್‌ ನವರು ಪಕ್ಷದ ಬಾವುಟ ಹಾಕುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ ಎಂದರು.

ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ನರಗುಂದ ರೈತರಿಗೆ ಬಂಪರ್ ಗಿಫ್ಟ್!

ಕೋಲಾರ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ವಿಶಿಷ್ಟರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ದೇಶ ಬಲಿಷ್ಟವಾಗಿದ್ದರೆ ನಾವು ಬಲಿಷ್ಟವಾಗಿರುವೇವು,ಆದ್ದರಿಂದ ದೇಶದ ಭದ್ರತೆ ದೃಷ್ಟಿಎಲ್ಲರೂ ಪ್ರಧಾನಿ ಮೋದಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

Uttara Kannada; ಸಾವಿರಾರು ವಿದ್ಯಾರ್ಥಿಗಳಿಂದ ತ್ರಿವರ್ಣ ಧ್ವಜ ಅಭಿಯಾನ

ಈ ವೇಳೆ ಪಕ್ಷದ ಹಿರಿಯ ಮುಖಂಡ ಕೆ.ಚಂದ್ರಾರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಬಿ.ವಿ.ಮಹೇಶ್‌, ತಾಲೂಕು ಅಧ್ಯಕ್ಷ ನಾಗೇಶ್‌, ಹೊಸರಾಯಪ್ಪ, ಯುವ ಮೋರ್ಚಾ ಅಧ್ಯಕ್ಷ ಬಿಂದು ಮಾದವ, ಪ್ರತಾಪ್‌, ಅಮರೇಶ್‌, ಕರವೇ ಚಲಪತಿ, ವಿನೋಧ್‌, ಶ್ರೀನಿವಾಸಗೌಡ, ಮತ್ತಿತರರು ಇದ್ದರು.

click me!