ಮಳೆ-ಪ್ರವಾಹಕ್ಕೆ ಉತ್ತರ ಕನ್ನಡದಲ್ಲಿ 737.54 ಕೋಟಿ ನಷ್ಟ

By Kannadaprabha News  |  First Published Jul 31, 2021, 10:36 AM IST

* ರಸ್ತೆಗೆ ಸಂಬಂಧಿಸಿ 387.80 ಕೋಟಿ, ಸೇತುವೆ ಹಾನಿ 149.84 ಕೋಟಿ ಹಾನಿ
*  ನೆರೆ ಸಂದರ್ಭದಲ್ಲಿ 139 ಕಾಳಜಿ ಕೇಂದ್ರ ಓಪನ್‌
* 1123.28 ಹೆಕ್ಟೇರ್‌ ಕೃಷಿ ಬೆಳೆಗೆ ಹಾನಿ


ಕಾರವಾರ(ಜು.31): ಜಿಲ್ಲೆಯಲ್ಲಿ ಉಂಟಾದ ನೆರೆಯಿಂದ ಹೆಸ್ಕಾಂ, ಸಣ್ಣ ನೀರಾವರಿ, ರಾಷ್ಟ್ರೀಯ ಹೆದ್ದಾರಿ ಒಳಗೊಂಡು ವಿವಿಧ ಇಲಾಖೆಗಳಿಂದ ಸೇರಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, 737.54 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ರಸ್ತೆಗೆ ಸಂಬಂಧಿಸಿ 387.80 ಕೋಟಿ, ಸೇತುವೆ ಹಾನಿ 149.84 ಕೋಟಿ, ಸರ್ಕಾರಿ ಕಟ್ಟಡ 4.93 ಕೋಟಿ, ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿ 5.54 ಕೋಟಿ, ಸಣ್ಣ ನೀರಾವರಿ ಇಲಾಖೆ 899.2 ಕೋಟಿ, ಹೆಸ್ಕಾಂ ಇಲಾಖೆಗೆ . 4.49 ಕೋಟಿ, ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿ 950 ಕೋಟಿ ನಷ್ಟವಾಗಿದೆ.

Latest Videos

undefined

ನೆರೆಯಿಂದ ಮನೆಗಳಿಗೆ ನೀರು ನುಗ್ಗಿ ಪಾತ್ರೆ, ಬಟ್ಟೆ ಹಾನಿಗೊಳಗಾದ 8,984 ಪ್ರಕರಣಕ್ಕೆ ಸಂಬಂಧಿಸಿ 1027 ಪ್ರಕರಣಕ್ಕೆ ಪರಿಹಾರ ನೀಡಲಾಗಿದ್ದು, 7957 ಪ್ರಕರಣ ಬಾಕಿ ಉಳಿದಿದೆ. ಇದರಲ್ಲಿ .39.28 ಲಕ್ಷ ಅನುದಾನ ವಿತರಣೆಯಾಗಿದೆ. ರಾಜ್ಯ ಹೆದ್ದಾರಿ 202.65 ಕಿಮೀ, ಜಿಲ್ಲಾ ಮುಖ್ಯ ರಸ್ತೆ 576.77 ಕಿಮೀ, ಗ್ರಾಮೀಣ ರಸ್ತೆ, 627.65 ಕಿಮೀ, ನಗರಾಭಿವೃದ್ಧಿ ಇಲಾಖೆಗೆ ಸೇರಿದ 43.41 ಕಿಮೀ ರಸ್ತೆ ಹಾನಿಗೊಳಗಾಗಿದೆ. ಪಂಚಾಯತ್‌ ರಾಜ್‌ ಇಲಾಖೆಗೆ ಸೇರಿದ 59, ಲೋಕೋಪಯೋಗಿ ಇಲಾಖೆಯ 247 ಸೇತುವೆಗೆ ದಕ್ಕೆಯಾಗಿದೆ.

ನೆರೆಪೀಡಿತರಿಗೆ ಬೊಮ್ಮಾಯಿ ನೆರವು: ರಸ್ತೆಗಳ ಮರು ನಿರ್ಮಾಣಕ್ಕೆ 210 ಕೋಟಿ ರೂ. ಘೋಷಣೆ!

95 ಶಾಲಾ ಕಟ್ಟಡ, 33 ಅಂಗನವಾಡಿ ಕಟ್ಟಡ, 4 ಸಮುದಾಯ ಭವನ, 3 ಪ್ರಾಥಮಿಕ ಆರೋಗ್ಯ ಕೇಂದ್ರ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಸೇರಿದ 74, ನಗರಾಭಿವೃದ್ಧಿ ಇಲಾಖೆಗೆ ಸೇರಿದ 4, ಪಂಚಾಯತ್‌ ರಾಜ್‌ಗೆ ಸೇರಿದ 43 ಕುಡಿಯುವ ನೀರಿನ ಯೋಜನೆ, ಕಾಲುವೆ 53, ಬಾಂದಾರ 160, ಏತ ನೀರಾವರಿ ಯೋಜನೆ 16 ನೆರೆಗೆ ತುತ್ತಾಗಿದೆ. 2046 ವಿದ್ಯುತ್‌ ಕಂಬ, 94 ಟಿಸಿ, 107.25 ಕಿಮೀ ವಿದ್ಯುತ್‌ ಲೈನ್‌ಗೆ ಹಾನಿಯಾಗಿದೆ.
ಕುಮಟಾ 36, ಅಂಕೋಲಾ 32, ಕಾರವಾರ 25, ಜೋಯಿಡಾ, ಸಿದ್ದಾಪುರ ತಲಾ 5, ಯಲ್ಲಾಪುರ 4, ದಾಂಡೇಲಿ 3, ಶಿರಸಿ 2, ಹಳಿಯಾಳ, ಮುಂಡಗೋಡ ತಲಾ ಒಂದು ಗ್ರಾಮಗಳಲ್ಲಿ ನೆರೆ ಸೃಷ್ಟಿಯಾಗಿತ್ತು.

ನೆರೆ ಸಂದರ್ಭದಲ್ಲಿ 139 ಕಾಳಜಿ ಕೇಂದ್ರ ತೆರೆಯಲಾಗಿತ್ತು. 37 ಕೇಂದ್ರ ಈ ವರೆಗೂ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಒಟ್ಟೂ 6 ಜನರು ನೆರೆಯಿಂದ ಮೃತರಾಗಿದ್ದು, ಅವರ ಕುಟುಂಬಕ್ಕೆ ತಲಾ  5 ಲಕ್ಷದಂತೆ 30 ಲಕ್ಷ ವಿತರಿಸಲಾಗಿದೆ. 4 ಜಾನುವಾರು ಮೃತಪಟ್ಟಿದ್ದು 68 ಸಾವಿರ ವಿತರಣೆಯಾಗಿದೆ.

ಬೆಳೆ, ಮನೆ ಹಾನಿ:

129.36 ಹೆಕ್ಟೇರ್‌ ತೋಟಗಾರಿಕಾ ಬೆಳೆ ಹಾನಿಯಾಗಿದ್ದು, .24.76 ಲಕ್ಷ ನಷ್ಟವಾಗಿದೆ. ಇದರಲ್ಲಿ 48.40 ಹೆಕ್ಟೇರ್‌ ಪ್ರದೇಶಕ್ಕೆ 6.10 ಲಕ್ಷ ಪರಿಹಾರ ನೀಡಲಾಗಿದೆ. 80.96 ಹೆಕ್ಟೇರ್‌ ಪ್ರದೇಶ ಬೆಳೆ ಹಾನಿ ತಿರಸ್ಕಾರ ಮಾಡಲಾಗಿದೆ.
1123.28 ಹೆಕ್ಟೇರ್‌ ಕೃಷಿ ಬೆಳೆಗೆ ಹಾನಿಯಾಗಿದೆ. 310 ಮನೆಗೆ ಪೂರ್ಣ, 348 ಮನೆಗೆ ತೀವ್ರ, 816 ಮನೆಗೆ ಭಾಗಶಃ ಹಾನಿಯಾಗಿದೆ. 8984 ಮನೆಗೆ ನೆರೆಯಿಂದ ನೀರು ನುಗ್ಗಿತ್ತು.
 

click me!