ಶಿವಮೊಗ್ಗದ ವಾಯುಸೇನಾ ರ‍್ಯಾಲಿಯಲ್ಲಿ 7 ಸಾವಿರ ಅಭ್ಯರ್ಥಿಗಳು ಭಾಗಿ

By Kannadaprabha NewsFirst Published Jul 23, 2019, 11:16 AM IST
Highlights

ಶಿವಮೊಗ್ಗದ ನೆಹರು ಕ್ರೀಡಾಂಗಣಲ್ಲಿ ನಡೆದ ವಾಯುಸೇನಾ ನೇಮಕಾತಿ ರ‍್ಯಾಲಿಯಲ್ಲಿ 7 ಸಾವಿರ ಅಭ್ಯರ್ಥಿಗಳು ಭಾಗವಹಿಸಿದ್ದಾರೆ. 6 ದಿನಗಳ ಕಾಲ ನೇಮಕಾತಿ ಪ್ರಕ್ರಿಯೆ ನಡೆದಿದೆ.

ಶಿವಮೊಗ್ಗ(ಜು.23): ನಗರದ ನೆಹರು ಕ್ರೀಡಾಂಗಣದಲ್ಲಿ ಕಳೆದ ಆರು ದಿನಗಳಿಂದ ನಡೆದ ವಾಯುಸೇನಾ ನೇಮಕಾತಿ ರ‍್ಯಾಲಿಯಲ್ಲಿ 7 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಲ್ಗೊಂಡಿದ್ದರು ಎಂದು ಜಿಲ್ಲಾ ಸೈನಿಕ ಕಲ್ಯಾಣ ಇಲಾಖೆ ಉಪನಿರ್ದೇಶಕ ಎನ್‌. ಚಂದ್ರಪ್ಪ ತಿಳಿಸಿದ್ದಾರೆ.

ರ‍್ಯಾಲಿಯ ಮೊದಲ ದಿನ ಐಎಎಫ್‌ಪಿ ಮತ್ತು ಆಟೋಮೊಬೈಲ್‌ ತಂತ್ರಜ್ಞ ಹುದ್ದೆಗೆ ನಡೆದ ನೇಮಕಾತಿಯಲ್ಲಿ 4 ಸಾವಿರ ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಮೊದಲ ಹಂತದಲ್ಲಿ 3050 ಹಾಗೂ ಎರಡನೇ ಹಂತದ ಲಿಖಿತ ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಯ ನಂತರ 215 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು.

ಪತಿ ಬಲಿ ಪಡೆದ ವಿಮಾನ ಏರಲು ವಾಯುಸೇನೆ ಸೇರಿದ ಧೀರೆ!

ವಾಯುಸೇನೆ ವೈದ್ಯಕೀಯ ಸಹಾಯಕರ ಹುದ್ದೆಗಳಿಗೆ ನಡೆದ ರ‍್ಯಾಲಿಯಲ್ಲಿ 1553 ಅಭ್ಯರ್ಥಿಗಳು ಭಾಗವಹಿಸಿದ್ದು, ಮೊದಲ ಹಂತದಲ್ಲಿ 1004 ಹಾಗೂ ಎರಡನೇ ಹಂತದಲ್ಲಿ 992 ಅಭ್ಯರ್ಥಿಗಳು ಆಯ್ಕೆಯಾಗಿ ನಂತರದ ಹಂತದಲ್ಲಿ 197 ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಆಯ್ಕೆ ಮಾಡಲಾಯಿತು. ಕೊನೆಯ ದಿನ ಅಂದರೆ ಸೋಮವಾರ ಸಹ ಐಎಎಫ್‌ ಪಿ ಮತ್ತು ಆಟೋ ಮೊಬೈಲ್‌ ತಂತ್ರಜ್ಞರ ಹುದ್ದೆಗೆ ರ‍್ಯಾಲಿ ನಡೆಯಿತು. ಇದರಲ್ಲಿ 144ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

click me!