ಮಂಗಳೂರು : ಏಳು ತಿಂಗಳ ಗರ್ಭಿಣಿ ವೈದ್ಯೆ ಕೋವಿಡ್‌ಗೆ ಬಲಿ

Kannadaprabha News   | Asianet News
Published : Apr 28, 2021, 08:33 AM ISTUpdated : Apr 28, 2021, 03:55 PM IST
ಮಂಗಳೂರು : ಏಳು ತಿಂಗಳ ಗರ್ಭಿಣಿ ವೈದ್ಯೆ ಕೋವಿಡ್‌ಗೆ ಬಲಿ

ಸಾರಾಂಶ

7 ತಿಂಗಳ ಗರ್ಭಿಣಿ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಆಸ್ಪತ್ರೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 

ಮಂಗಳೂರು (ಏ.28): ದೇರಳಕಟ್ಟೆಕಣಚೂರು ಆಸ್ಪತ್ರೆಯಲ್ಲಿ ಸುಮಾರು 2 ವರ್ಷ ಕೆಲಸ ಮಾಡಿದ್ದ, ಪ್ರಸ್ತುತ 7 ತಿಂಗಳ ಗರ್ಭಿಣಿಯಾಗಿದ್ದ ವೈದ್ಯೆಯೊಬ್ಬರು ಸೋಮವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್‌ಗೆ ಬಲಿಯಾಗಿದ್ದಾರೆ. 

ಕೇರಳದ ಮಲಪ್ಪುರಂ ಮೂಲದ ಈ ವೈದ್ಯೆ ಎಂಬಿಬಿಎಸ್‌ ಬಳಿಕ ಕಣಚೂರು ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಎರಡು ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ರಾಜೀನಾಮೆ ನೀಡಿ ತಮ್ಮ ಊರಾದ ಕೇರಳದ ಮಲಪ್ಪುರಂಗೆ ಹೋಗಿದ್ದರು. 

ನಿಲ್ಲದ ಕೊರೋನಾ ಕಾಟ: ಖಾಸಗಿ ಆಸ್ಪತ್ರೆಯಲ್ಲಿ ಹಾಸಿಗೆ ಬೇಕಾ? ಇವರನ್ನು ಸಂಪರ್ಕಿಸಿ ..

ಅಲ್ಲಿ ಅವರ ಕುಟುಂಬದವರಿಗೆ ಕೋವಿಡ್‌ ಸೋಂಕು ತಗಲಿದ್ದು, ನಂತರ ಇವರಿಗೂ ಪಾಸಿಟಿವ್‌ ಆಗಿತ್ತು. ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ 10 ದಿನಗಳ ಹಿಂದಷ್ಟೇ ದಾಖಲಿಸಲಾಗಿತ್ತು. ಸೋಮವಾರ ರಾತ್ರಿ ಆಕ್ಸಿಜನ್‌ ಮಟ್ಟದಲ್ಲಿ ಏರುಪೇರು ಉಂಟಾಗಿದ್ದು ಅವರು ಮೃತಪಟ್ಟಿದ್ದಾರೆ.

PREV
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?