ತುಮಕೂರು (ಅ.17): ಸದ್ಯ ಜೆಡಿಎಸ್ (JDS) ಶಾಸಕ ಎಸ್.ಆರ್ ಶ್ರೀನಿವಾಸ್ ಗೆ (SR Shrinivas) ಜೆಡಿಎಸ್ ಮುಖಂಡ ಎಚ್.ಡಿ ಕುಮಾರಸ್ವಾಮಿ (HD Kumaraswamy) ಮತ್ತೊಂದು ಟಾಂಗ್ ನೀಡಿದ್ದಾರೆ.
ಜೆಡಿಎಸ್ ಶಾಸಕಗೆ ತಿಳಿಸದೆ ಜೆಡಿಎಸ್ ಸಮಾವೇಶ (JDS Program) ಆಯೋಜನೆ ಮಾಡಿದ್ದು, ಜೆಡಿಎಸ್ ಶಾಸಕರಿಗೆ ತಿಳಿಸದೆಯೇ ಕಾರ್ಯಕ್ರಮ ಫಿಕ್ಸ್ ಮಾಡಿದ್ದಾರೆನ್ನುವ ಆರೋಪ ಕೇಳಿಬಂದಿದೆ.
Mandya : JDS ಶಾಸಕರು, ಮುಖಂಡರ ಪಕ್ಷ ತೊರೆಯುವ ಸುಳಿವು ನೀಡಿ ಎಚ್ಚರಿಸಿದ ಮುಖಂಡ
ಎಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಲಾಗಿದ್ದು, ಗುಬ್ಬಿ (Gubbi) ಪಟ್ಟಣದ ಸರ್ಕಾರಿ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಇದೇ ತಿಂಗಳ 25ರಂದು ಕಾರ್ಯಕ್ರಮದ ದಿನಾಂಕ ಘೋಷಣೆ ಮಾಡಲಾಗಿದ್ದು, ಕಾರ್ಯಕ್ರಮದ ಪಾಂಪ್ಲೇಟನ್ನು ಕೂಡ ಹೊರಡಿಸಲಾಗಿದೆ.
ಇದೇ ವೇಳೆ ಗುಬ್ಬಿ ಜೆಡಿಎಸ್ ಘಟಕಕ್ಕೆ ಹೊಸ ಮುಖಂಡನ ಸೇರ್ಪಡೆ ಕಾರ್ಯಕ್ರಮವೂ ನಡೆಯಲಿದ್ದು, ಸಿ.ಎಸ್ ಪುರ ಮೂಲದ ನಾಗರಾಜು (Nagaraju) ಜೆಡಿಎಸ್ಗೆ ಸಮಾವೇಶದ ವೇಳೆ ಸೇರ್ಪಡೆಯಾಗಲಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರದಿಂದ ಇದೀಗ ಹೊಸದಾಗಿ ಜೆಡಿಎಸ್‌ಗೆ ಸೇರ್ಪಡೆಯಾಗಲು ಸಜ್ಜಾಗಿರುವ ನಾಗರಾಜುಗೆ ಟಿಕೆಟ್ ನೀಡಲು ಕುಮಾರಸ್ವಾಮಿ ಮುಂದಾಗಿದ್ದು, ಎಸ್.ಆರ್ ಶ್ರೀನಿವಾಸ್ ಗೆ ಕೋಕ್ ನೀಡಿ ನಾಗರಾಜುಗೆ ಜೆಡಿಎಸ್ ಟಿಕೆಟ್ ನೀಡಲಾಗುತ್ತಿದೆ.
ನನಗೆ ಮಾಹಿತಿ ಇಲ್ಲ
ಜೆಡಿಎಸ್ ಸಮಾವೇಶದ ಬಗ್ಗೆ ಎಸ್.ಆರ್ . ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದ್ದು, ಕಾರ್ಯಕ್ರಮ ಆಯೋಜನೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಎಸ್.ಆರ್ ಶ್ರೀನಿವಾಸ್ ಹೇಳಿದ್ದಾರೆ.
ಹದಿಮೂರು ದಿನಗಳಿಂದ ನಾನು ಊರಿನಲ್ಲಿ ಇರಲಿಲ್ಲ. ಪ್ರಕೃತಿ ಚಿಕಿತ್ಸೆಗೆ (Naturopathy Treatment) ಧರ್ಮಸ್ಥಳಕ್ಕೆ (Dharmasthala) ಹೋಗಿದ್ದೆ. ಕೆಲವರು ಪಾರ್ಟಿ ಕಚೇರಿಗೆ ಬಂದು ಸೇರಿಕೊಂಡಿದ್ದು ಮಾತ್ರ ನನಗೆ ಗೊತ್ತು. ಯಾವಾಗ ಸಮಾವೇಶ ? ಏನು ಸಮಾವೇಶ ? ಯಾರ ಸಮಾವೇಶ ? ಯಾರು ಮಾಡ್ತಿದ್ದಾರೆ ? ಅನ್ನೋದು ಏನು ಗೊತ್ತಿಲ್ಲ. ನಾನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಬಗ್ಗೆ ನನಗೆ ಗೊತ್ತಿಲ್ಲ. ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಿರುವುದು ಗೊತ್ತಿಲ್ಲ ಎಂದು ಶ್ರೀನಿವಾಸ್ ಹೇಳಿದ್ದಾರೆ.
ಅದು ನಕಲಿ ಆಹ್ವಾನ ಪತ್ರಿಕೆ (Invitation Card) ಎಂದು ಎಸ್.ಆರ್ ಶ್ರೀನಿವಾಸ್ ಹೇಳಿದ್ದು, ಕಾರ್ಯಕ್ರಮದ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು (President) ಅಥವಾ ರಾಜ್ಯಾಧ್ಯಕ್ಷರು ಇರಬೇಕು ಮಾಹಿತಿ ನೀಡಬೇಕು. ಯಾರೋ ಸುಳ್ಳು ಹೇಳಿಕೊಂಡು ಓಡಾಡುತ್ತಿರಬೇಕು ಎಂದು ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್ ಶ್ರೀನಿವಾಸ್ ಹೇಳಿದ್ದಾರೆ.