32 ವರ್ಷ ನಂತ್ರ ಚಿಕ್ಕಬಳ್ಳಾಪುರಕ್ಕೆ ಒಲಿದ ಸಚಿವ ಸ್ಥಾನ

By Kannadaprabha News  |  First Published Feb 7, 2020, 2:50 PM IST

ಸಂಪುಟ ದರ್ಜೆ ಸಚಿವರಾಗಿ ಡಾ.ಕೆ.ಸುಧಾಕರ್‌ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಇದರೊಂದಿಗೆ ಸತತ 32 ವರ್ಷಗಳ ನಂತರ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನದ ಭಾಗ್ಯ ಲಭಿಸಿದೆ.


ಚಿಕ್ಕಬಳ್ಳಾಪುರ(ಫೆ.07): ಸಂಪುಟ ದರ್ಜೆ ಸಚಿವರಾಗಿ ಡಾ.ಕೆ.ಸುಧಾಕರ್‌ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಇದರೊಂದಿಗೆ ಸತತ 32 ವರ್ಷಗಳ ನಂತರ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನದ ಭಾಗ್ಯ ಲಭಿಸಿದೆ.

ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕೆ.ಎಂ.ಮುನಿಯಪ್ಪ ಅವರು 1985ರಿಂದ 88ರ ತನಕ ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ರೇಷ್ಮೆ ಖಾತೆ ಸಚಿವರಾಗಿದ್ದರು. ಹೀಗೆ ರೇಷ್ಮೆ ಸಚಿವರಾಗಿದ್ದ ಕೆ.ಎಂ.ಮುನಿಯಪ್ಪ ಅವರು, ಚಿಕ್ಕಬಳ್ಳಾಪುರ ತಾಲೂಕಿನ ಕನ್ನಡಪ್ರಭ ಸುದ್ದಿಸಂಗ್ರಹಕರಾಗಿದ್ದರು ಎಂಬುದು ಗಮನಾರ್ಹ ವಿಷಯವಾಗಿದೆ.

Tap to resize

Latest Videos

70ನೇ ವರ್ಷದೊಳಗೆ ಒಮ್ಮೆಯಾದ್ರೂ ಸಿಎಂ ಆಗ್ತೀನಿ: ಕತ್ತಿ

ಇದಕ್ಕೂ ಮೊದಲು ರೇಣುಕಾ ರಾಜೇಂದ್ರನ್‌ ಅವರು 1977ರಿಂದ 1982ರ ವರೆಗೂ ಗುಂಡೂರಾವ್‌ ಅವರ ಸರ್ಕಾರದಲ್ಲಿ ರೇಷ್ಮೆ ಖಾತೆ, ಕ್ರೀಡಾ ಮತ್ತು ಯುವಜನ ಸೇವೆ ಮತ್ತು ಸಣ್ಣ ಕೈಗಾರಿಕೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.

click me!