ಗುರುವಾರ 6805 ಕೇಸ್, ಬಿಎಸ್‌ವೈ ಆರೋಗ್ಯ ಈಗ ಹೇಗಿದೆ?

By Suvarna News  |  First Published Aug 6, 2020, 7:15 PM IST

ರಾಜ್ಯದಲ್ಲಿ ಮುಂದುವರಿದ ಕೊರೋನಾ ಆರ್ಭಟ/ ಗುರುವಾರ  6805 ಹೊಸ ಕೇಸ್/ ಇಂದು ಡಿಸ್ಚಾರ್ಜ್ ಆದವರು 5602/  ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 93 ಸಾವು


ಬೆಂಗಳೂರು(ಆ. 06) ಕೊರೋನಾ ಆರ್ಭಟ ಮುಂದುವರಿದಿದ್ದರೂ ಚೇತರಿಕೆ ಪ್ರಮಾಣವೂ ಏರಿಕೆಯಾಗಿರುವುದು ಆಶಾದಾಯಕ ಬೆಳವಣಿಗೆ. ಗುರುವಾರ ರಾಜ್ಯದಲ್ಲಿ 6805 ಹೊಸ ಕೇಸ್ ಪತ್ತೆಯಾಗಿದ್ದು 5602 ಜನ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 93 ಜನ ಕೊರೋನಾಕ್ಕೆ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಏರಿಕೆ ಕಂಡಿದೆ. ಶೇ.  50.73  ರಷ್ಟು ಜನ ಸೋಂಕಿತರು ಚೇತರಿಸಿಕೊಳ್ಳುತ್ತಿದ್ದಾರೆ.   ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 158254ಕ್ಕೆ ಏರಿದೆ.  ಪರೀಕ್ಷೆ ಮಾಡುವ ಪ್ರಮಾಣವೂ ಏರಿದ್ದು 48421 ಜನರಿಗೆ ಕೊರೋನಾ ಟೆಸ್ಟ್ ಮಾಡಲಾಗಿದೆ.

Tap to resize

Latest Videos

ಕೊರೋನಾ ನಡುವೆ ಈ ಬಾರಿಯ ಧ್ವಜಾರೋಹಣ ಯಾರು ಮಾಡ್ತಾರೆ?

ಸಿಎಂ ಆರೋಗ್ಯ ಸ್ಥಿರ:  ಕೊರೋನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸಿಎಂ ಬಿಎಸ್ ಯಡಿಯೂರಪ್ಪ ಆರೋಗ್ಯ ಸ್ಥಿರವಾಗಿದೆ. ಯಡಿಯೂರಪ್ಪ ತಮ್ಮ ಕೋಣೆಯಲ್ಲಿ ದೈನಂದಿನ ಕೆಲಸ ಕಾರ್ಯ ನೋಡಿಕೊಳ್ಳುತ್ತಿದ್ದಾರೆ ಎಂದು ಮಣಿಪಾಲ್ ಆಸ್ಪತ್ರೆ ಹೆಲ್ತ್ ಬುಲೆಟಿನ್ ತಿಳಿಸಿದೆ.

ಸರ್ಕಾರದ ಪರವಾಗಿ ನಾನು ನಿಮಗೆ ವಿಚಾರ ತಿಳಿಸುತ್ತಿದ್ದೇನೆ. ಸಿಎಂ ಬಿಎಸ್‌ವೈ ರವರ ಆರೋಗ್ಯ ಸ್ಥಿರವಾಗಿದೆ. ಯಾವುದೇ ಗೊಂದಲಗಳಿಗೆ ಜಾಗ ಇಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯನವರು ಕೂಡಾ ಚಿಕಿತ್ಸೆ ಪಡೆಯುತ್ತಿದ್ದಾರೆ ಸಿದ್ದರಾಮಯ್ಯನವರಿಗೆ ಆರಂಭದಲ್ಲಿ ಜ್ವರ ಇತ್ತು. ಈಗ ಸದ್ಯ ಇಬ್ಬರು ಕೂಡಾ ಚೆನ್ನಾಗಿದ್ದಾರೆ ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.

ಇಬ್ಬರ ಆರೋಗ್ಯ ಕೂಡಾ ಉತ್ತಮವಾಗಿದೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಸ್ವಲ್ಪ ದಿನದಲ್ಲೇ ಇಬ್ಬರು ಕೂಡಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಾರೆ ನಾವು ವೈದ್ಯರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ ಎಂದು ಸುಧಾಕರ್ ಹೇಳಿಕೆ ನೀಡಿದ್ದಾರೆ. 

click me!